ಹೈದರಾಬಾದ್: ಬಾಲಿವುಡ್ ಸೂಪರ್ಸ್ಟಾರ್ ಅಜಯ್ ದೇವ್‌ಗನ್ ಶೀಘ್ರದಲ್ಲೇ ‘ರುದ್ರ ದಿ ಎಡ್ಜ್ ಆಫ್ ಡಾರ್ಕ್ನೆಸ್’ ವೆಬ್ ಸೀರಿಸ್ನಲ್ಲಿ ನಟಿಸಲಿದ್ದಾರೆ. ಒಟಿಟಿಯಲ್ಲಿ ತೆರೆಕಾಣಲಿರುವ ವೆಬ್ ಸೀರಿಸ್ನಲ್ಲಿ ಅಜೆಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬ್ರಿಟಿಷ್ ವೆಬ್ ಸಿರೀಸ್ ಆಗಿದ್ದ ಲೂಥರ್ ಅನ್ನು ರಿಮೇಕ್ ಮಾಡಲಾಗುತ್ತಿದೆ. ಈ ಸೀರಿಸ್ನಲ್ಲಿ ದೇವಗನ್ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಈ ನಟನೆಗಾಗಿ ಅಜಯ್ ದೇವಗನ್ ಭರ್ಜರಿ ಸಂಭಾವನೆ ಪಡೆದಿದ್ದಾರೆ. ಅಜಯ್ ದೇವಗನ್ ಪೊಲೀಸ್ ಪಾತ್ರದಲ್ಲಿ ನಟಿಸಲು ಬರೋಬ್ಬರಿ 125 ಕೋಟಿ ರೂಪಾಯಿ ಪಡೆದಿದ್ದಾರಂತೆ. ಈ ಮೂಲಕ ಒಟಿಟಿಯ ನಟನೆಗಾಗಿ ಅತೀ ಹೆಚ್ಚು ಸಂಭಾವನೆ ಪಡೆದ ಹೃತಿಕ್ ರೋಷನ್ ಮತ್ತು ಅಕ್ಷಯ್ ಕುಮಾರ್ ಅವರ ಸಾಲಿಗೆ ದೇವಗನ್ ಸಹ ಸೇರಿದ್ದಾರೆ.
ಈ ಸಂಭಾವನೆಯು ನಟನೆ ಹೊರತು ಪಡಿಸಿ ಪ್ರಚಾರ, ಜಾಲತಾಣದ ಪೋಸ್ಟ್ಗಳು, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವುದು ಸೇರಿದೆ ಎಂದು ವೆಬ್ಲಾಯ್ಡ್ ವರದಿ ಮಾಡಿದೆ.
‘ರುದ್ರ ದಿ ಎಡ್ಜ್ ಆಫ್ ಡಾರ್ಕ್ನೆಸ್’ನಲ್ಲಿ ದೇವಗನ್ ಅವರದ್ದು ವಿಭಿನ್ನ ಪಾತ್ರವಂತೆ. ಈ ಕುರಿತು ಮಾತನಾಡಿರುವ ಅವರು, ನಾನು ವಿಭಿನ್ನ ಕಥೆಗಳನ್ನೇ ಆರಿಸುತ್ತೇನೆ. ನಾನು ಈ ಮೊದಲು ಹಲವು ಚಿತ್ರಗಳಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ, ಆದರೆ ಈ ಚಿತ್ರದಲ್ಲಿ ಪಾತ್ರ ಭಿನ್ನವಾಗಿದೆ. ಇತ್ತೀಚಿನ ದಿನಗಳಲ್ಲಿ ನನ್ನನ್ನು ಅದ್ಭುತ ಪಾತ್ರವೊಂದರಲ್ಲಿ ಕಾಣಬಹುದು ಎಂದಿದ್ದಾರೆ. ಬಿಬಿಸಿ ಸ್ಟುಡಿಯೋಸ್ ಇಂಡಿಯಾದ ಸಹಯೋಗದೊಂದಿಗೆ ಹಾಟ್‌ಸ್ಟಾರ್ ಸ್ಪೆಷಲ್ಸ್ ಸರಣಿಯು ಶೀಘ್ರದಲ್ಲೇ ಬಿಡುಗಡೆಗೆ ಸಿದ್ಧವಾಗಿದೆ.