ETV Bharat / bharat

ಐವರ್ಮೆಕ್ಟಿನ್ ಔಷಧ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ವಿರೋಧ

ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೋವಾದಲ್ಲಿ 18 ವರ್ಷ ಮೇಲ್ಪಟ್ಟವರು ಕೊರೊನಾ ರೋಗಲಕ್ಷಣ ಇದೆಯೋ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ ಎಲ್ಲರೂ ಐವರ್ಮೆಕ್ಟಿನ್ ಔಷಧಿಯನ್ನು ಪಡೆಯಬಹುದು ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅದರ ಬಳಕೆಯ ವಿರುದ್ಧ ಎಚ್ಚರಿಕೆ ನೀಡಿದೆ.

author img

By

Published : May 12, 2021, 8:22 AM IST

ivermectin
ಐವರ್ಮೆಕ್ಟಿನ್ ಔಷಧಿ

ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ತರಲು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಐವರ್ಮೆಕ್ಟಿನ್ ಔಷಧಿಯನ್ನು ಶಿಫಾರಸು ಮಾಡಿದ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಇದರ ಬಳಕೆಯ ವಿರುದ್ಧ ಎಚ್ಚರಿಕೆ ನೀಡಿದೆ.

"ಯಾವುದೇ ಔಷಧಿಯನ್ನು ಬಳಸುವಾಗ ಸುರಕ್ಷತೆ ಮತ್ತು ಪರಿಣಾಮಕಾರಿತ್ವವು ಮುಖ್ಯವಾಗಿದೆ. ಕ್ಲಿನಿಕಲ್ ಪ್ರಯೋಗಗಳನ್ನು ಹೊರತುಪಡಿಸಿ ಕೊರೊನಾ ನಿಯಂತ್ರಣಕ್ಕಾಗಿ ಐವರ್ಮೆಕ್ಟಿನ್ ಅನ್ನು ಬಳಸುವುದನ್ನು WHO ವಿರೋಧಿಸುತ್ತದೆ" ಎಂದು ಜಾಗತಿಕ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಸಚಿವ ರಾಣೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, "ಗೋವಾದಲ್ಲಿ 18 ವರ್ಷ ಮೇಲ್ಪಟ್ಟವರು ಕೊರೊನಾ ರೋಗಲಕ್ಷಣ ಇದೆಯೋ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ ಎಲ್ಲರು ಐವರ್ಮೆಕ್ಟಿನ್ ಔಷಧಿ ಪಡೆಯಬಹುದು. ಐದು ದಿನಗಳ ಅವಧಿಯವರೆಗೂ ಔಷಧಿಯನ್ನು ನೀಡಲಾಗುತ್ತದೆ. ಈ ಔಷಧಿಯು ಕೊರೊನಾವೈರಸ್ ಸೋಂಕಿತರ ಮರಣ ಪ್ರಮಾಣವನ್ನು ತಗ್ಗಿಸುವುದರ ಜೊತೆಗೆ ಕೊವಿಡ್-19 ಸೋಂಕು ನಿವಾರಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿದೆ ಎಂದು ಇಂಗ್ಲೆಂಡ್, ಇಟಲಿ, ಸ್ಪೇನ್ ಮತ್ತು ಜಪಾನ್ ರಾಷ್ಟ್ರಗಳ ತಜ್ಞರ ತಂಡ ಅಭಿಪ್ರಾಯಪಟ್ಟಿದೆ" ಎಂದು ಹೇಳಿದ್ದರು.

  • Safety and efficacy are important when using any drug for a new indication. @WHO recommends against the use of ivermectin for #COVID19 except within clinical trials https://t.co/dSbDiW5tCW

    — Soumya Swaminathan (@doctorsoumya) May 10, 2021 " class="align-text-top noRightClick twitterSection" data=" ">

ಕಳೆದ ವಾರ ಪೀರ್-ರಿವ್ಯೂಡ್ ಸಂಶೋಧನೆಯು, ಐವರ್ಮೆಕ್ಟಿನ್ ಬಳಕೆ ಕೊರೊನಾವನ್ನು ನಿಯಂತ್ರಿಸುತ್ತದೆ. ಇದು ನಿಯಮಿತವಾಗಿ ಬಳಸಿದರೆ ಉಸಿರಾಟದ ಕಾಯಿಲೆಗೆ ತುತ್ತಾಗುವ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಹೇಳಿಕೆ ನೀಡಿತ್ತು.

ಅಮೆರಿಕದ ಮೂವರು ಹಿರಿಯ ವಿಜ್ಞಾನಿಗಳನ್ನು ಒಳಗೊಂಡ ಮತ್ತು ಅಮೆರಿಕನ್ ಜರ್ನಲ್ ಆಫ್ ಥೆರಪೂಟಿಕ್ಸ್‌ನಲ್ಲಿ ಈ ವಿಮರ್ಶೆ ಪ್ರಕಟವಾಗಿತ್ತು.

ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಐವರ್ಮೆಕ್ಟಿನ್ ಬಳಕೆಯ ವಿರುದ್ಧ WHO ಮಾರ್ಚ್​ನಲ್ಲಿಯೂ ಇದೇ ರೀತಿಯ ಎಚ್ಚರಿಕೆ ನೀಡಿತ್ತು.

ಯುಎಸ್ ಫುಡ್ ಆ್ಯಂಡ್​ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್​ಡಿಎ) ಕಳೆದ ವರ್ಷ ಏಪ್ರಿಲ್​ನಲ್ಲಿ, ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡಲು ಐವರ್ಮೆಕ್ಟಿನ್ ಬಳಕೆಯ ವಿರುದ್ಧ ಎಚ್ಚರಿಕೆಯ ಸಂದೇಶ ರವಾನಿಸಿತ್ತು. ಅಲ್ಲದೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕಳೆದ ವರ್ಷ ಕೊರೊನಾಗಾಗಿ ತನ್ನ ಅಧಿಕೃತ ಕ್ಲಿನಿಕಲ್ ಮ್ಯಾನೇಜ್‌ಮೆಂಟ್ ಪ್ರೋಟೋಕಾಲ್‌ನಲ್ಲಿ ಐವರ್ಮೆಕ್ಟಿನ್ ಬಳಕೆಯನ್ನು ನಿಷೇಧಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.