ETV Bharat / bharat

ಅಂದು ಆಟೋ ಚಾಲಕ, ಇಂದು ಸಿಎಂ: ಏಕನಾಥ್ ಶಿಂಧೆ ರೋಚಕ ರಾಜಕೀಯ ಪಯಣ

ಮಹಾರಾಷ್ಟ್ರದ ಮಹಾವಿಕಾಸ ಆಘಾಡಿ ಸರ್ಕಾರದಲ್ಲಿ ಸಚಿವರಾಗಿದ್ದು, ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು ಈಗ ತಾನೇ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುತ್ತಿರುವ ಏಕನಾಥ್ ಶಿಂಧೆ ಯಾರು, ಇವರ ರಾಜಕೀಯ ಜೀವನ ಹೇಗಿತ್ತು, ಇವರ ವೈಯಕ್ತಿಕ ಜೀವನ ಹೇಗಿದೆ ಇತ್ಯಾದಿ ವಿವರಗಳು ಇಂಟರೆಸ್ಟಿಂಗ್ ಆಗಿವೆ.

who is Eknath Shinde a profile
who is Eknath Shinde a profile
author img

By

Published : Jun 30, 2022, 6:00 PM IST

Updated : Jun 30, 2022, 7:52 PM IST

ಶಿಂಧೆ ರಾಜಕೀಯ ಪಯಣ: 2004, 2009, 2014 ಹಾಗೂ 2019 (ಪ್ರಸ್ತುತ ಅವಧಿ) ಹೀಗೆ ಶಿವಸೇನೆ ಪಕ್ಷದಿಂದ 4 ಬಾರಿ ಏಕನಾಥ್ ಶಿಂಧೆ ಶಾಸಕರಾಗಿದ್ದರು. ಶಿವಸೇನೆ ಪಕ್ಷದ ಮುಂಚೂಣಿ ಸಂಘಟನಾಕಾರರಲ್ಲಿ ಶಿಂಧೆ ಕೂಡಾ ಒಬ್ಬರು. 2014ರ ವಿಜಯದ ನಂತರ ಶಾಸಕಾಂಗ ಪಕ್ಷದ ನಾಯಕರಾಗಿ ಹಾಗೂ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಇವರು ಆಯ್ಕೆಯಾಗಿದ್ದರು.

ಅಂದು ಆಟೋ ಚಾಲಕ, ಇಂದು ಸಿಎಂ: ಮಹಾರಾಷ್ಟ್ರದ ಥಾಣೆಯಲ್ಲಿ ಒಂದು ಕಾಲಕ್ಕೆ ಆಟೋ ಚಲಾಯಿಸುತ್ತಿದ್ದ ಏಕನಾಥ್ ಶಿಂಧೆ ಇಂದು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾರೆ. ಆಟೋ ಚಲಾಯಿಸುತ್ತಿದ್ದ ಶಿಂದೆ ಶಿವಸೇನೆಯೊಂದಿಗೆ ಬೆಳೆದು ರಾಜಕೀಯದಲ್ಲಿ ಹಂತಹಂತವಾಗಿ ಮೇಲೇರುತ್ತ ಬಂದವರು.

ಆರಂಭಿಕ ರಾಜಕೀಯ, ಶಿಕ್ಷಣ: 1964ರಲ್ಲಿ ಜನಿಸಿದ ಏಕನಾಥ್ ಶಿಂಧೆ ಮರಾಠಾ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಜೀವನೋಪಾಯಕ್ಕಾಗಿ ಬೇಗನೆ ಶಾಲೆ ತೊರೆದರು. ಆದಾಗ್ಯೂ 2014 ರಲ್ಲಿ ಶಿವಸೇನಾ-ಬಿಜೆಪಿ ಸರ್ಕಾರದಲ್ಲಿ ಸಚಿವರಾದ ನಂತರ ಮತ್ತೆ ವಿದ್ಯಾಭ್ಯಾಸ ಮುಂದುವರಿಸಿ ಯಶವಂತರಾವ್ ಚವ್ಹಾಣ್ ವಿಶ್ವವಿದ್ಯಾಲಯದಿಂದ ಡಿಗ್ರಿ ಪಡೆದರು. ಶಿವಸೇನಾ ಸುಪ್ರಿಮೊ ಬಾಳ ಠಾಕ್ರೆ ಮತ್ತು ಶಿವಸೇನಾ ಜಿಲ್ಲಾ ಪ್ರಮುಖ ಆನಂದ ದಿಘೆ ಅವರೊಂದಿಗೆ ಸಂಪರ್ಕಕ್ಕೆ ಬಂದ ನಂತರ 1980ರ ದಶಕದಲ್ಲಿ ಶಿವಸೇನೆ ಸೇರಿಕೊಂಡರು.

ಮೊದಲ ಗೆಲುವು: ಶಿಂಧೆ 1997ರಲ್ಲಿ ಮೊದಲ ಬಾರಿಗೆ ಠಾಣೆ ನಗರ ನಿಗಮ ಚುನಾವಣೆಗೆ ಸ್ಪರ್ಧಿಸಿ ಕೌನ್ಸಿಲರ್ ಆದರು. 2001ರಲ್ಲಿ ಥಾಣೆ ನಗರ ನಿಗಮ ಸದನದ ನಾಯಕರಾದರು ಮತ್ತು 2002 ರಲ್ಲಿ ಥಾಣೆ ನಗರ ನಿಗಮ ಚುನಾವಣೆ ಗೆದ್ದರು.

ಪ್ರಭಾವಿ ರಾಜಕೀಯ ನೇತಾರ: 2004ರಲ್ಲಿ ಥಾಣೆಯ ಕೋಪರಿ-ಪಛಪಾಖಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಥಮ ಬಾರಿಗೆ ಶಾಸಕರಾದರು. ಅಲ್ಲಿಂದ ಮುಂದೆ ಸತತ ನಾಲ್ಕು ಬಾರಿ ಜಯಿಸಿ ಶಾಸಕರಾಗಿ ಮುಂದುವರೆದಿದ್ದಾರೆ. ರಾಜಕೀಯಕ್ಕೆ ಬಂದು ಅತ್ಯಂತ ಕಡಿಮೆ ಅವಧಿಯಲ್ಲೇ ಇವರು ಥಾಣೆ-ಪಾಲ್ಘರ್ ವಲಯದಲ್ಲಿ ಪ್ರಭಾವಿ ರಾಜಕೀಯ ನಾಯಕರಾಗಿ ಗುರುತಿಸಿಕೊಂಡರು. ಜನರ ಸಮಸ್ಯೆಗಳನ್ನು ಆಕ್ರಮಣಕಾರಿ ಶೈಲಿಯಲ್ಲಿ ಆಡಳಿತಕ್ಕೆ ಎತ್ತಿ ತೋರಿಸಿ ಅವನ್ನು ಪರಿಹರಿಸುವ ನಾಯಕರಾಗಿ ಇವರು ಹೆಸರಾಗಿದ್ದಾರೆ.

2014 ರಲ್ಲಿ ಗೆದ್ದು ಶಾಸಕರಾದ ಶಿಂಧೆ ಅವರನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. 2019ರಲ್ಲಿ ಉದ್ಧವ್ ಠಾಕ್ರೆ ಸಿಎಂ ಆಗುವ ಮುನ್ನ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ನಾಯಕರಾಗಿ ನೇಮಕವಾಗಿದ್ದರು. 2019ರಲ್ಲಿ ಮಹಾವಿಕಾಸ ಆಘಾಡಿ ಸರ್ಕಾರದಲ್ಲಿ ಶಿಂಧೆ ಅವರು ನಗರಾಭಿವೃದ್ಧಿ ಖಾತೆಯ ಕ್ಯಾಬಿನೆಟ್​ ದರ್ಜೆಯ ಸಚಿವರಾಗಿದ್ದರು.

ಏಕನಾಥ್ ಶಿಂಧೆ ಕುಟುಂಬ: ಏಕನಾಥ್ ಪತ್ನಿಯ ಹೆಸರು ಲತಾ. ಮಗ ಡಾ. ಶ್ರೀಕಾಂತ ಶಿಂಧೆ ಸರ್ಜನ್ ಆಗಿದ್ದು, ಕಲ್ಯಾಣ ಕ್ಷೇತ್ರದಿಂದ ಲೋಕಸಭೆಯ ಸಂಸದರಾಗಿದ್ದಾರೆ.

Last Updated : Jun 30, 2022, 7:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.