ETV Bharat / bharat

'ಕೋವ್ಯಾಕ್ಸಿನ್​' EUL​ಗೆ ಸೇರ್ಪಡೆ ವಿಚಾರ: ಡೋಸ್​ನ ಡೇಟಾ ಪರಿಶೀಲಿಸುತ್ತಿದೆ WHO

author img

By

Published : Jul 20, 2021, 12:02 PM IST

ಕೊರೊನಾ ಲಸಿಕೆ 'ಕೋವ್ಯಾಕ್ಸಿನ್​' ಅನ್ನು ತುರ್ತು ಬಳಕೆ ಪಟ್ಟಿಗೆ ಸೇರ್ಪಡೆ ಮಾಡಲು ಭಾರತ್​ ಬಯೋಟೆಕ್​ ಸಂಸ್ಥೆ ಸಲ್ಲಿಸಿದ ಅರ್ಜಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ರಸ್ತುತ ಪರಿಶೀಲಿಸುತ್ತಿದೆ.

EUL
ಇಯುಎಲ್​

ಹೈದರಾಬಾದ್: ಭಾರತ್​ ಬಯೋಟೆಕ್​ನ ಕೊರೊನಾ ಲಸಿಕೆ 'ಕೋವ್ಯಾಕ್ಸಿನ್​' ತುರ್ತು ಬಳಕೆ ಪಟ್ಟಿ (ಇಯುಎಲ್)ಗೆ ಸೇರ್ಪಡೆ ಮಾಡಲು ಸಂಸ್ಥೆ ಸಲ್ಲಿಸಿದ ಅರ್ಜಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ರಸ್ತುತ ಪರಿಶೀಲಿಸುತ್ತಿದ್ದು, ಡೋಸ್​ನ ಡೇಟಾ ನಿರ್ಣಯಿಸುತ್ತಿದೆ ಎಂದು ಹೇಳಿದೆ.

ಜು.6 ರಿಂದ ಡೇಟಾ ಪರಿಶೀಲಿಸುತ್ತಿರುವ ಆರೋಗ್ಯ ಸಂಸ್ಥೆ "ಡೋಸ್​ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ದಿನಾಂಕವನ್ನು ಇನ್ನೂ ದೃಢೀಕರಿಸಿಲ್ಲ" ಎಂದು ಹೇಳಿದೆ.

ಭಾರತ್ ಬಯೋಟೆಕ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಸಿತ್ರಾ ಎಲ್ಲಾ ಅವರು ಇತ್ತೀಚೆಗೆ ಇಯುಎಲ್ ಪ್ರಕ್ರಿಯೆಯು ಕೋವಾಕ್ಸಿನ್‌ನ ಜಾಗತಿಕ ಒಪ್ಪಿಗೆ ಕುರಿತ ಅಂತಿಮ ನಿರ್ಧಾರಕ್ಕೆ ಒಂದು ಹೆಜ್ಜೆ ಹತ್ತಿರದಲ್ಲಿದೆ ಎಂದು ಹೇಳಿದ್ದರು. ರೋಲಿಂಗ್ ಡೇಟಾ ಜುಲೈನಲ್ಲಿ ಪ್ರಾರಂಭವಾಗಲಿದೆ. ಕೋವಾಕ್ಸಿನ್ ಅನ್ನು ತನ್ನ ಇಯುಎಲ್‌ನಲ್ಲಿ ಸೇರಿಸಲು ಕಂಪನಿಯು ಡಬ್ಲ್ಯುಎಚ್‌ಒ ಜೊತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.

ಸೆಲ್ ಲೈನ್ ಮತ್ತು ಭಾರತ್ ಬಯೋಟೆಕ್‌ನ ಹೆಚ್ಚಿನ ಸೌಲಭ್ಯಗಳನ್ನು ಈಗಾಗಲೇ ಆಡಿಟ್ ಮಾಡಲಾಗಿದೆ ಮತ್ತು ಅನುಮೋದಿಸಲಾಗಿದೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.