ಪಂಜಾಬ್: ಸಾಮಾನ್ಯವಾಗಿ ಎಲ್ಲಾ ರಾಜಕೀಯ ಪಕ್ಷಗಳು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತವೆ. ಆದರೆ, ಮಹಿಳೆಯರು ರಾಜಕೀಯದಲ್ಲಿ ಮುನ್ನಡೆಯುವ ವಿಚಾರದಲ್ಲಿ ಎಲ್ಲ ಪಕ್ಷಗಳ ನಿಲುವು ಭಿನ್ನವಾಗಿರುವಂತಿದೆ. ಪಂಜಾಬ್‌ನ ರಾಜಕೀಯದಲ್ಲಿಯೂ ಇಂತಹದ್ದೇ ಸನ್ನಿವೇಶ ಕಂಡು ಬರುತ್ತಿದೆ. ಪಂಜಾಬ್ ರಾಜಕೀಯದಲ್ಲಿ ಮಹಿಳೆಯರಿಗೆ ಸಿಕ್ಕ ಸ್ಥಾನಮಾನ ಬಹಳಷ್ಟು ಕಡಿಮೆ.
ಪಂಜಾಬ್‌ನಲ್ಲಿ ಕಳೆದ ಮೂರು ಚುನಾವಣೆಗಳಲ್ಲಿ ಒಟ್ಟು ಮಹಿಳಾ ಅಭ್ಯರ್ಥಿಗಳ ಸಂಖ್ಯೆ
2007ರ ವಿಧಾನಸಭಾ ಚುನಾವಣೆಯಲ್ಲಿ, 56 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು, ಅದರಲ್ಲಿ 42 ಮಂದಿ ಸಾಮಾನ್ಯ ವರ್ಗ ಮತ್ತು 14 ಎಸ್‌ಸಿ ಅಭ್ಯರ್ಥಿಗಳು, ಈ ಪೈಕಿ 7 ಮಹಿಳಾ ಅಭ್ಯರ್ಥಿಗಳು ಮಾತ್ರ ವಿಧಾನಸಭೆಗೆ ಆಯ್ಕೆಯಾಗಿದ್ದರು.
2012 ರ ವಿಧಾನಸಭಾ ಚುನಾವಣೆಯಲ್ಲಿ, ಒಟ್ಟು 93 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು, ಅದರಲ್ಲಿ 64 ಸಾಮಾನ್ಯ ವರ್ಗ ಮತ್ತು 29 ಎಸ್‌ಸಿ ಅಭ್ಯರ್ಥಿಗಳು ಕಣದಲ್ಲಿದ್ದರು, ಅದರಲ್ಲಿ 14 ಮಹಿಳಾ ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸುವ ಮೂಲಕ ವಿಧಾನಸಭೆಯನ್ನು ತಲುಪಿದರು.
ಆದರೆ, 2017ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 81 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರೆ, 55 ಸಾಮಾನ್ಯ ವರ್ಗದ ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರೆ, 26 ಎಸ್‌ಸಿ ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಪೈಕಿ 6 ಮಹಿಳಾ ಅಭ್ಯರ್ಥಿಗಳು ಗೆಲ್ಲುವ ಮೂಲಕ ವಿಧಾನಸಭೆಗೆ ತಲುಪಿದ್ದಾರೆ.
ಯಾವ ಪಕ್ಷವು ಎಷ್ಟು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ?
ಕಾಂಗ್ರೆಸ್:
- 2007 ರಲ್ಲಿ 10 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು, ಅದರಲ್ಲಿ 4 ಅಭ್ಯರ್ಥಿಗಳು ಗೆದ್ದಿದ್ದಾರೆ.
- 2012 ರಲ್ಲಿ 11 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು, ಅದರಲ್ಲಿ 6 ಅಭ್ಯರ್ಥಿಗಳು ಗೆದ್ದಿದ್ದಾರೆ.
- 2017 ರಲ್ಲಿ 11 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು, ಅದರಲ್ಲಿ 3 ಅಭ್ಯರ್ಥಿಗಳು ಗೆದ್ದರು.
ಬಿಜೆಪಿ:
ಅಕಾಲಿದಳದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ ಬಿಜೆಪಿ, 2007 ರಲ್ಲಿ ಓರ್ವ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಿದೆ, ಅದರಲ್ಲಿ ಆ ಅಭ್ಯರ್ಥಿ ಗೆಲುವು ದಾಖಲಿಸಿದ್ದಾರೆ.
- 2012 ರಲ್ಲಿ ಬಿಜೆಪಿ 3 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು, ಅದರಲ್ಲಿ 2 ಅಭ್ಯರ್ಥಿಗಳು ಗೆದ್ದಿದ್ದಾರೆ.
- 2017 ರಲ್ಲಿ ಬಿಜೆಪಿ 2 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು, ಅದರಲ್ಲಿ ಯಾವುದೇ ಅಭ್ಯರ್ಥಿಗಳು ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ.
ಶಿರೋಮಣಿ ಅಕಾಲಿದಳ:
ಶಿರೋಮಣಿ ಅಕಾಲಿದಳವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಿತ್ತು.
- 2007ರಲ್ಲಿ ಅಕಾಲಿದಳವು 5 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತು, ಅದರಲ್ಲಿ 2 ಅಭ್ಯರ್ಥಿಗಳು ಗೆದ್ದರು.
- 2012ರಲ್ಲಿ ಅಕಾಲಿದಳವು 10 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಅದರಲ್ಲಿ 6 ಅಭ್ಯರ್ಥಿಗಳು ಗೆದ್ದರು.
- 2017 ರಲ್ಲಿ, ಅಕಾಲಿ ದಳವು ಕೇವಲ 5 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು, ಅದರಲ್ಲಿ ಯಾವುದೇ ಅಭ್ಯರ್ಥಿಗಳು ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ.
ಇದೇ ವೇಳೆ, 2017 ರಲ್ಲಿ ಮೊದಲ ಬಾರಿಗೆ ಪಂಜಾಬ್‌ನಲ್ಲಿ ಚುನಾವಣಾ ಕಣಕ್ಕೆ ಇಳಿದ ಆಮ್ ಆದ್ಮಿ ಪಕ್ಷವು 2017 ರಲ್ಲಿ 9 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತು, ಅದರಲ್ಲಿ 3 ಮಹಿಳೆಯರು ಗೆಲ್ಲುವ ಮೂಲಕ ವಿಧಾನಸಭೆಯನ್ನು ತಲುಪಿದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹರ್‌ಸಿಮ್ರತ್ ಕೌರ್ ಬಾದಲ್, ಹೆಚ್ಚು ಹೆಚ್ಚು ಮಹಿಳೆಯರು ಮುಂದೆ ಬರಬೇಕು, ಆಗ ಮಾತ್ರ ಪಂಜಾಬ್‌ಗೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.