ETV Bharat / bharat

ಸ್ವದೇಶಿ ಬಲವರ್ಧನೆ: ಎಲ್ಲಿದೆ ಕ್ರಿಯಾ ಯೋಜನೆ? - Where is the action plan for Swadesh

2021ರ ಹೊಸ್ತಿಲಲ್ಲಿ ಎಲ್ಲ ಭಾರತೀಯರು, ಭಾರತೀಯ ಸಂಸ್ಥೆಗಳು ತಯಾರಿಸಿದ ವಸ್ತುಗಳನ್ನು ಮಾತ್ರ ಖರೀದಿಸುವ ಹೊಸ ವರ್ಷದ ನಿರ್ಣಯವನ್ನು ಮಾಡುವಂತೆ ಪ್ರಧಾನಿ ಎಲ್ಲ ಜನರಿಗೂ ಕರೆ ನೀಡಿದರು. ಆದರೆ, ಈ ಕ್ರಿಯಾ ಯೋಜನೆ ಸಾಕಾರಗೊಳಿಸುವಲ್ಲಿ ಸರ್ಕಾರದ ಪಾತ್ರ ದೊಡ್ಡದಾಗಿದೆ.

Where is the action plan for Swadeshi?
ಸ್ವದೇಶಿ ಬಲವರ್ಧನೆ: ಎಲ್ಲಿದೆ ಕ್ರಿಯಾ ಯೋಜನೆ?
author img

By

Published : Jan 2, 2021, 12:30 PM IST

2020ರಲ್ಲಿ ಜಗತ್ತಿನ ಎಲ್ಲ ದೇಶಗಳನ್ನು ಕಾಡಿದ ಕೋವಿಡ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ದೇಶವನ್ನು ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿಸಿ, ಭಾರತವನ್ನು ವಿಶ್ವದ ಸೂಪರ್‌ ಪವರ್‌ ಆಗಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಮಹೋನ್ನತ ಕನಸು. ಕೋವಿಡ್‌ 19 ಕಾರಣಕ್ಕಾಗಿ ಸೃಷ್ಟಿಯಾದ ಅಭೂತಪೂರ್ವ ಬಿಕ್ಕಟ್ಟನ್ನು ದೇಶದ ಆರ್ಥಿಕತೆಯನ್ನು ಸಬಲಗೊಳಿಸಲು, ಈ ಮೂಲಕ ಪ್ರಧಾನಿ ದೃಢನಿಶ್ಚಯ ಮಾಡಿದ್ದಾರೆ.

ಸ್ವಾವಲಂಬಿ ಭಾರತದ ನಿರ್ಮಾಣ, ಈ ಕನಸಿನ ಗುರಿ. ಇದಕ್ಕೆ ಪೂರಕವಾಗಿ ತಮ್ಮ ಜನಪ್ರಿಯ ರೆಡಿಯೋ ಕಾರ್ಯಕ್ರಮ ಇತ್ತೀಚಿನ ಮನ್ ಕಿ ಬಾತ್‌ನಲ್ಲಿ “ಆತ್ಮ ನಿರ್ಭರ” (ಸ್ವಾವಲಂಬನೆ) ಯ ಘೋಷಣೆಯನ್ನು ಅವರು ಒತ್ತಿ ಹೇಳಿದರು. 2021ರ ಹೊಸ್ತಿಲಲ್ಲಿ ಎಲ್ಲ ಭಾರತೀಯರು, ಭಾರತೀಯ ಸಂಸ್ಥೆಗಳು ತಯಾರಿಸಿದ ವಸ್ತುಗಳನ್ನು ಮಾತ್ರ ಖರೀದಿಸುವ ಹೊಸ ವರ್ಷದ ನಿರ್ಣಯವನ್ನು ಮಾಡುವಂತೆ ಪ್ರಧಾನಿ ಎಲ್ಲ ಜನರಿಗೂ ಕರೆ ನೀಡಿದರು. ಇದೊಂದು ಹೊಸ ಬಗೆಯ ಹೊಸ ವರ್ಷದ ನಿರ್ಣಯ. ಇದರ ಜೊತೆಗೆ, ಭಾರತೀಯ ಉದ್ಯಮಿಗಳಿಗೂ ಅವರೊಂದು ಕಿವಿ ಮಾತು ಹೇಳಿದರು. ಭಾರತೀಯರಿಗೆ ಅಂತಾರಾಷ್ಟ್ರೀಯ ಉತ್ಪಾದನಾ ಮಾನದಂಡದ ಗುಣಮಟ್ಟದ ವಸ್ತುಗಳು ದೊರಕುವಂತೆ ಮಾಡಬೇಕು. ಈ ಸ್ವಾವಲಂಬಿ ಭಾರತದ ಕನಸನ್ನು ನನಸಾಗಿಸುವಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು ಬಹು ಮುಖ್ಯ ಪಾತ್ರವನ್ನು ವಹಿಸಬೇಕು. ಈ ಮೂಲಕ ಉತ್ಪಾದನಾ ವಲಯ ಹಾಗೂ ಗ್ರಾಹಕರಿಬ್ಬರಿಗೂ ಸ್ವಾವಲಂಬನೆಯ ಕನಸನ್ನು ತಿಳಿಹೇಳಿದರು.

ಕೋವಿಡ್‌ 19 ಬಿಕ್ಕಟ್ಟು ನಮ್ಮ ದೇಶದಲ್ಲಿ ಉಂಟು ಮಾಡಿರುವ ಆರ್ಥಿಕ ದುಷ್ಪರಿಣಾಮಗಳು ಒಂದೆರಡಲ್ಲ

ಕೊರೊನಾ ವೈರಸ್ ಜೊತೆ - ಜೊತೆಗೆ ಅಪ್ಪಳಿಸಿದ ಆರ್ಥಿಕ ಹಿಂಜರಿತದ ದುಷ್ಪರಿಣಾಮದ ಕಾರಣದಿಂದ ದೇಶೀಯ ಉತ್ಪಾದನಾವಲಯ ಕುಸಿತ ಕಂಡಿದೆ. ಈ ಕ್ಷೇತ್ರಕ್ಕೆ ಉಸಿರು ನೀಡಬೇಕಿದೆ. ಈ ಕ್ಷೇತ್ರಕ್ಕೆ ಮರುಜೀವ ದೊರೆಯಬೇಕಾದರೆ ಕೈಗಾರಿಕಾ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಕುದುರಬೇಕಿದೆ. ಜನರೇನೋ ಸ್ಥಳೀಯವಾಗಿ, ಸ್ವದೇಶಿ ಸಂಸ್ಥೆಗಳು ತಯಾರಿಸಿದ ವಸ್ತುಗಳನ್ನು ಮಾತ್ರ ಖರೀದಿಸಲು ಸಿದ್ಧರಾಗಿದ್ದಾರೆ. ಆದರೆ, ಈ ನಿಟ್ಟಿನಲ್ಲಿ ಸರ್ಕಾರದ ಪಾತ್ರ ದೊಡ್ಡದಾಗಿದೆ. ಏಕೆಂದರೆ, ಸ್ಥಳೀಯ ಉತ್ಪನ್ನಗಳು ಕೈಗೆಟುಕುವ ಬೆಲೆಯಲ್ಲಿ ಜನರಿಗೆ ದೊರೆಯುವಂತೆ ಮಾಡಲು ಸರ್ಕಾರ ಶ್ರಮಿಸಬೇಕಿದೆ. ಏಕೆಂದರೆ ಈಗ ಈ ಉತ್ಪಾದನಾ ಕ್ಷೇತ್ರ ನಾನಾ ಸಮಸ್ಯೆಗಳಿಂದ ತತ್ತರಿಸಿವೆ. ಉದಾಹರಣೆಗೆ ಮುಂಗಡ ಪಾವತಿ ಬಳಿಕ ಮಾತ್ರ ಸಿದ್ದವಸ್ತುಗಳ ಉತ್ಪಾದನೆಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಪಡೆಯಬೇಕಾದ ಸವಾಲು ಕೈಗಾರಿಕೆಗಳ ಮುಂದಿವೆ. ಸಾಗಣೆ - ಸಾರಿಗೆ ಶುಲ್ಕದ ಹೊರೆ ಕೂಡಾ ಇವುಗಳ ಆರ್ಥಿಕೆಯ ಮೇಲೆ ಪೆಟ್ಟು ನೀಡುತ್ತಿವೆ. ತಮ್ಮ ಉತ್ಪಾದನೆಯನ್ನು ಪ್ರಾರಂಭಿಸಲು, ಹೆಚ್ಚಿಸಲು ಈ ಕೈಗಾರಿಕೆಗಳು ಸರ್ಕಾರದಿಂದ ಆರ್ಥಿಕ ಸಹಾಯಕ್ಕಾಗಿ ಎದುರುಸಿರು ಬಿಡುತ್ತಿವೆ. ಉತ್ಪಾದನಾ ವಲಯ ಮತ್ತು ರಾಷ್ಟ್ರೀಯ ಆರ್ಥಿಕತೆಯ ಪುನರುಜ್ಜೀವನಕ್ಕಾಗಿ ಸರ್ಕಾರವು ತೆಗೆದುಕೊಳ್ಳಬಹುದಾದ ಮೊದಲ ಹೆಜ್ಜೆ ಸಣ್ಣ ಕೈಗಾರಿಕೆಗಳಿಗೆ ಆರ್ಥಿಕ ನೆರವು ನೀಡುವುದು.

ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಿಸಲು ಹಾಗೂ ವಿದೇಶಿ ವಸ್ತುಗಳ ಆಮದು ತಡೆಗೆ ಕೇಂದ್ರ ಸರ್ಕಾರ ಹಲವಾರು ರಾಷ್ಟ್ರ ವ್ಯಾಪ್ತಿ ಕ್ರಮಗಳನ್ನು ಕೈಗೊಂಡಿದೆ. ಉದಾಹರಣೆಗೆ, 2020ರ ಫೆಬ್ರವರಿ ತಿಂಗಳಲ್ಲಿ ಅಗತ್ಯ ಅವಶ್ಯಕತೆಗಳ ವರ್ಗಕ್ಕೆ ಹೊರತಾದ ಟೆಲಿವಿಷನ್ ಮತ್ತು ದುಬಾರಿ ಪೀಠೋಪಕರಣಗಳ ಆಮದಿಗೆ ನಿರ್ಬಂಧ ಹೇರಲು ಪ್ರಸ್ತಾಪಿಸಲಾಯಿತು. ಸ್ವದೇಶಿ ಉತ್ಪಾದಕರನ್ನು ಉತ್ತೇಜಿಸುವ ಕ್ರಮವಾಗಿ ಕೇಂದ್ರೀಯ ಪೊಲೀಸ್ ಕಲ್ಯಾಣ ಅಂಗಡಿಗಳಿಂದ 1,000 ಬಗೆಯ ವಿದೇಶಿ ಉತ್ಪನ್ನಗಳನ್ನು ತೆಗೆದುಹಾಕಲಾಗಿದೆ. ಕಳೆದ ಏಳು ತಿಂಗಳಿಂದ ಇದು ಅನುಷ್ಠಾನದಲ್ಲಿದೆ. ಇದು ಸ್ವಾವಲಂಬಿ ಆರ್ಥಿಕತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿವ ದೇಶಾದ್ಯಂತ ಏಕರೂಪದ ನೀತಿಯನ್ನು ಜಾರಿಗೆ ತರಲು ಕೇಂದ್ರವು ಬದ್ಧವಾಗಿದೆ ಎಂದು ಶ್ರುತಪಡಿಸುತ್ತದೆ.

ಆರ್ಥಿಕ ವಿಶ್ಲೇಷಣೆಗಳ ಪ್ರಕಾರ, ಹೀಗೆ ಆಮದು ನಿಷೇಧ ವಸ್ತುಗಳ ಮೇಲೆ ದೇಶದ ಜನತೆ ಒಂದು ವರ್ಷ ವ್ಯಯಿಸುವ ಮೊತ್ತ 42 ಲಕ್ಷ ಕೋಟಿ. ಕೋವಿಡ್‌ 19 ಕಾರಣಕ್ಕಾಗಿ ದೇಶದ ಅರ್ಥಿಕೆಯ ಬೆಳವಣಿಗೆ ದರ ಕುಗ್ಗಿದೆ. ಆದರೂ, ಈ ಎಲ್ಲ ಉಪಕ್ರಮಗಳ ಕಾರಣದಿಂದಾಗಿ 2025ರ ವೇಳೆಗೆ ದೇಶದ ಇಲೆಕ್ಟ್ರಾನಿಕ್ಸ್‌ ವಸ್ತುಗಳ ಮಾರುಕಟ್ಟೆ ದ್ವಿಗುಣವಾಗುವ ಸಾಧ್ಯತೆ ಇದೆ. ಇದು 1.5 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆ ಇದೆ ಎನ್ನುತ್ತದೆ ಆರ್ಥಿಕ ಅಂದಾಜುಗಳು.

ದೇಶದಲ್ಲಿ ವ್ಯಾಪಾರ ಕೊರತೆ (ರಫ್ತಿನ ಮೌಲ್ಯಕ್ಕಿಂತ ಆಮದು ವಸ್ತುಗಳ ಮೌಲ್ಯ ಹೆಚ್ಚಳ) ಬಹುದೊಡ್ಡ ಸಮಸ್ಯೆ. ಇದನ್ನು ಸರಿ ಪಡಿಸುವುದು ನಮ್ಮ ಸರ್ಕಾರದ ಮುಂದಿರುವ ದೊಡ್ಡ ಸವಾಲು. ಉದಾಹರಣೆಗೆ ಕೇಂದ್ರ ಸರ್ಕಾರದ ವಾಣಿಜ್ಯ ಇಲಾಖೆಯ ಅಂಕಿ ಅಂಶ ಪ್ರಕಾರ, 2019ರಲ್ಲಿ ದೇಶದ ವಾಣಿಜ್ಯ ವಹಿವಾಟಿನಲ್ಲಿ ಆಮದುಗಳು ದೇಶದ ರಫ್ತುಗಳನ್ನು ಮೀರಿದ ಅಸಮತೋಲನದಿಂದಾಗಿ ದೇಶವು 12 ಲಕ್ಷ ಕೋಟಿ ರೂ.ಗಳ ವ್ಯಾಪಾರ ಕೊರತೆಯನ್ನು ಕಂಡಿದೆ. ಈ ಮೊತ್ತ ದೇಶದ ಜಿಡಿಪಿಯ ಹಲವು ಪಟ್ಟುಗಳಷ್ಟಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಉತ್ಪನ್ನಗಳ ಬೇಡಿಕೆಯನ್ನು ಹೆಚ್ಚಿಸಲು ದೀರ್ಘಾವಧಿಯ ನೀತಿಯನ್ನು ರೂಪಿಸಲೇನೇಕಿದೆ. ಹಾಗಾದಾಗ ಮಾತ್ರ ವಿದೇಶಗಳ ಮೇಲಿನ ಅವಲಂಬನೆ ಕಡಿಮೆಗೊಳಿಸಲು ಸಾಧ್ಯವಿದೆ. ಇದು ಸಾಧ್ಯವಾದರೆ ಮಾತ್ರ ನಮ್ಮ ಕೈಗಾರಿಕಾ ಬೆಳವಣಿಯ ಗತಿ ಬದಲಾಗುತ್ತದೆ. ದೇಶ ಸೂಪರ್‌ ಪವರ್‌ ಆಗಿ ಹೊರ ಹೊಮ್ಮಲು ಸಾಧ್ಯವಿದೆ. ನಮ್ಮ ಗುರಿ ದೇಶವನ್ನು ಉತ್ಪಾದನಾ ವಲಯದಲ್ಲಿ ಸ್ವಾವಲಂಬಿಯಾಗಿಸುವುದರ ಜೊತೆಗೆ ಶ್ರೀಮಂತಗೊಳಿಸಲು ಸಾಧ್ಯವಿದೆ.

ಈ ಹಿನ್ನೆಲೆಯೆಲ್ಲಿ ಈ ಕೆಳಗಿನ ಉಪಕ್ರಮಗಳು ಅಗತ್ಯ. ವಾಹನ, ಕೈಗಾರಿಕೆ ಬಿಡಿಭಾಗಗಳ ತಯಾರಿಕೆಯಲ್ಲಿ ನಮ್ಮಲ್ಲಿನ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವುದು. ಅವುಗಳನ್ನು ಮುಂದಿನ ಹಂತದ ಉತ್ಪಾದನೆಯೊಂದಿಗೆ (ತಯಾರಕ ಸಂಸ್ಥೆಗಳ) ಜೋಡಿಸುವುದು ಮತ್ತು ಅಗತ್ಯ ಮಟ್ಟದಲ್ಲಿ ನೆರವು ನೀಡುವ ವ್ಯವಸ್ಥೆಗಳನ್ನು ಬಲಪಡಿಸುವ ಕ್ರಮಗಳನ್ನು ಕೇಂದ್ರವು ತಕ್ಷಣ ತೆಗೆದುಕೊಳ್ಳಬೇಕು. ನಮ್ಮ ಯುವ ಜನರು ಹಾಗೂ ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಚೀನಾ ಮತ್ತು ಜಪಾನ್‌ಗೆ ಹೋಲಿಸಿದರೆ, ದೇಶ ಹಲವು ಲಾಭಗಳನ್ನು ಹೊಂದಿದೆ. ಭಾರತೀಯರ ಸರಾಸರಿ ವಯಸ್ಸು ತೀರಾ ಕಡಿಮೆ. ಸರಾಸರಿ ಭಾರತೀಯನಿಗೆ 28 ವರ್ಷ. ದೇಶದ ಜನಸಂಖ್ಯೆಯ 64 ಪ್ರತಿಶತದಷ್ಟು ಜನರು ಈ ವಯಸ್ಸಿನವರಾಗಿದ್ದಾರೆ. ಅವರು ಉತ್ಪಾದಕ ಗುಂಪಿನ ವರ್ಗ ಎಂಬುದನ್ನು ದೇಶದ ಆರ್ಥಿಕ ವರದಿಗಳು ಖಚಿತಪಡಿಸಿವೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಸುಶಿಕ್ಷಿತ ಯುವಜನರಲ್ಲಿ ನಿರುದ್ಯೋಗ ದರವನ್ನು ಕಡಿಮೆಗೊಳಿಸಿ ಅವರಿಗೆ ಉದ್ಯೋಗ ಒದಗಿಸಬೇಕು. ನುರಿತ ಕಾರ್ಮಿಕರ ಶೇಕಡಾವಾರು ಪ್ರಮಾಣವನ್ನು ಸುಧಾರಿಸುವುದು ಈ ಕ್ಷಣದ ಜರೂರು. ಇದನ್ನು ಸಾಧಿಸಲು ಸಾಧ್ಯವಾದರೆ ದೇಶದ ಕೈಗಾರಿಕಾ ರಂಗವನ್ನು ಬಲಪಡಿಸಲು ಸಾಧ್ಯವಿದೆ. ಜೊತೆಗೆ, ದೂರದೃಷ್ಟಿಯಿಂದ ಕೂಡಿದ ಕೈಗಾರಿಕಾ ನೀತಿಯನ್ನು ನಾವು ಅಳವಡಿಸಿಕೊಂಡದ್ದೇ ಆದರೆ ನಮ್ಮ ದೇಶದ ಕೈಗಾರಿಕಾ ರಂಗದ ಸಮಸ್ಯೆಗಳಿಗೆ ಮಂಗಳ ಹಾಡಿ, ದೇಶವನ್ನು ಕೈಗಾರಿಕಾ ಸೂಪರ್‌ ಪವರ್‌ ಆಗಿ ಪರಿವರ್ತಿಸಲು ಸಾಧ್ಯವಿದೆ. ಭವಿಷ್ಯದ ದೃಷ್ಟಿಯಿಂದ ಇಂತಹ ಉಪಕ್ರಮದ ಅನಿವಾರ್ಯತೆ ಹಿಂದೆಂದಿಗಿಂತಲೂ ಹೆಚ್ಚಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.