ETV Bharat / bharat

ಪ್ರಿಪೇಯ್ಡ್‌ ಮೊಬೈಲ್‌ ರಿಚಾರ್ಜ್‌ ಆಯ್ತು, ಇದೀಗ ಪ್ರಿಪೇಯ್ಡ್‌ ವಿದ್ಯುತ್‌ ಮೀಟರ್‌ ಪ್ರಯೋಗ! ಏನಿದು? ಸಂಪೂರ್ಣ ಮಾಹಿತಿ ಇಲ್ಲಿದೆ..

author img

By

Published : Jul 1, 2021, 5:11 PM IST

ಸ್ಮಾರ್ಟ್ ಮೀಟರ್ ಎನ್ನುವುದು ಹೊಸ ರೀತಿಯ ವಿದ್ಯುತ್ ಮೀಟರ್. ಇದು ಮೀಟರ್ ರೀಡಿಂಗ್‌ಗಳನ್ನು ವಿದ್ಯುತ್​ ಪೂರೈಕೆದಾರರು ಮತ್ತು ಗ್ರಾಹಕರಿಗೆ ನೆಟ್​ವರ್ಕ್​ ಮೂಲಕ ಕಳುಹಿಸಬಹುದು. ಹೊಸ ವ್ಯವಸ್ಥೆಯು ಬಿಲ್ಲಿಂಗ್ ಪ್ರಕ್ರಿಯೆಯಲ್ಲಿ ಮನುಷ್ಯನ ಹಸ್ತಕ್ಷೇಪ ಕಡಿಮೆ ಮಾಡುವುದರ ಜೊತೆಗೆ, ಒಂದು ಪ್ರದೇಶದಲ್ಲಿ ನಿಜವಾಗಿಯೂ ಎಷ್ಟು ಪ್ರಮಾಣದ ವಿದ್ಯುತ್​ ಅಗತ್ಯವಿದೆ ಎಂಬ ಮಾಹಿತಿಯನ್ನು ಡಿಸ್ಕಾಮ್‌ಗಳಿಗೆ ನೀಡುತ್ತದೆ. ಹಾಂ, ಇಷ್ಟೇ ಅಲ್ಲ. ಈ ಬಗ್ಗೆ ಇನ್ನೂ ಹೆಚ್ಚಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ..

what-is-a-prepaid-smart-electricity-meter
ಪ್ರಿಪೇಯ್ಡ್ ಸ್ಮಾರ್ಟ್ ವಿದ್ಯುತ್ ಮೀಟರ್

ನವದೆಹಲಿ: ಭಾರತದ ವಿದ್ಯುತ್ ಪೂರೈಕೆ, ಬಳಕೆ ವ್ಯವಸ್ಥೆಯಲ್ಲಿನ ಲೋಪಗಳನ್ನು ನಿವಾರಿಸಿ, ಈ ಕ್ಷೇತ್ರದಲ್ಲಾಗುವ ಅವ್ಯವಹಾರದ ತಡೆಗೆ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಂತೆ ಕಾಣುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಬುಧವಾರ 3.03 ಲಕ್ಷ ಕೋಟಿ ರೂ ಮೌಲ್ಯದ ಹೊಸ ಯೋಜನೆಗೆ ನಾಂದಿ ಹಾಡಿದೆ.

ಇದರ ಜೊತೆಗೆ ಯೋಜನೆಯು ದಕ್ಷ ವಿತರಣಾ ಕಾರ್ಯವಿಧಾನದ ಮೂಲಕ ಗ್ರಾಹಕರಿಗೆ ವಿದ್ಯುತ್ ಸರಬರಾಜಿನ ಪ್ರಮಾಣ, ವಿಶ್ವಾಸಾರ್ಹತೆ ಮತ್ತು ಕೈಗೆಟುಕುವಿಕೆಯನ್ನು ಸುಧಾರಿಸಲು ಪ್ರಯತ್ನಿಸುತ್ತದೆ. ಈ ಉದ್ದೇಶಕ್ಕಾಗಿ ದೇಶಾದ್ಯಂತ 25 ಕೋಟಿ ಪ್ರಿಪೇಯ್ಡ್ ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಸಲು ಸರ್ಕಾರ ಡಿಸ್ಕಾಮ್‌ಗಳಿಗೆ ಸೂಚನೆ ನೀಡಿದೆ. ಈ ಯೋಜನೆಯ ಮೊದಲ ಹಂತದಲ್ಲಿ ಕೃಷಿಕ ಗ್ರಾಹಕರನ್ನು ಹೊರತುಪಡಿಸಿ ಉಳಿದೆಲ್ಲಾ ಗ್ರಾಹಕರಿಗೆ 10 ಕೋಟಿ ಮೀಟರ್‌ಗಳನ್ನು ಡಿಸೆಂಬರ್ 2023 ರೊಳಗೆ ಅಳವಡಿಸಲು ನಿರ್ಧರಿಸಲಾಗಿದೆ.

ಸ್ಮಾರ್ಟ್​ ಅಥವಾ ಪ್ರಿಪೇಯ್ಡ್ ಮೀಟರುಗಳನ್ನು​ ಹೊಂದಲು ಇಚ್ಚಿಸುವ ಗ್ರಾಹಕರು ಈ ವಿದ್ಯುತ್​ ಸಂಪರ್ಕ ಪಡೆಯಬಹುದು. ಗ್ರಾಹಕರು ಈ ವ್ಯವಸ್ಥೆಯ ಮೂಲಕ ವಿದ್ಯುತ್​ ದರ, ವಿತರಣಾ ಕಂಪನಿ ಒದಗಿಸುವ ಕಂಪನಿಗಳಿಂದ ಬಳಕೆ ಮಾಡಿದ ವಿದ್ಯುತ್​ ಕುರಿತು ಸರಿಯಾದ ವಿವರ ಪಡೆಯಬಹುದಾಗಿದೆ. ಅಷ್ಟೇ ಅಲ್ಲ, ಈ ಸ್ಮಾರ್ಟ್​ ಸೇವೆ ಪಡೆಯಲು ಗ್ರಾಹಕರು ಸ್ವತಃ ಪ್ರಿಪೇಯ್ಡ್​ ಮೀಟರ್​ ಅಳವಡಿಸಿಕೊಳ್ಳಬಹುದು ಅಥವಾ ಡಿಸ್ಕಾಂನಿಂದಲೂ ಪಡೆಯಬಹುದಾಗಿದೆ.

ಸರ್ಕಾರದ ನೀಡಿರುವ ಮಾಹಿತಿ ಪ್ರಕಾರ, ಈ ಸ್ಮಾರ್ಟ್ ಮೀಟರ್‌ಗಳು ಗ್ರಾಹಕರಿಗೆ ತಮ್ಮ ವಿದ್ಯುತ್ ಬಳಕೆಯನ್ನು ಮಾಸಿಕ ಆಧಾರದ ಬದಲು ರಿಯಲ್​-ಟೈಮ್​ ಬಳಕೆ ಆಧಾರದ ಮೇಲೆ ಪಾವತಿಯಾದ ಹಣವನ್ನು ತಿಳಿದುಕೊಳ್ಳಲು ಸಹಾಯ ಮಾಡಿಕೊಡುತ್ತದೆ. ಪ್ರಿಪೇಯ್ಡ್ ವಿದ್ಯುತ್ ಸ್ಮಾರ್ಟ್ ಮೀಟರ್‌ ಅನ್ನು ಅಳವಡಿಸಿಕೊಂಡ ಮೇಲೆ ಮೊಬೈಲ್​ನಿಂದಲೇ ರೀಚಾರ್ಜ್ ಮಾಡಬಹುದಾಗಿದೆ. ಹಾಗೆಯೇ ಹಣವನ್ನು ಮೊದಲು ಪಾವತಿ ಮಾಡಿ ವಿದ್ಯುತ್ ಖರೀದಿಸಬಹುದು. ನೀವು ಹೀಗೆ ಬಳಕೆ ಮಾಡಿಕೊಂಡ ವಿದ್ಯುತ್ ಹಾಗೂ ಅವುಗಳ ಸಂಕ್ಷಿಪ್ತ ವಿವರಗಳನ್ನು ಸ್ಮಾರ್ಟ್ ಮೀಟರ್ ಒಳಗೊಂಡಿರುತ್ತದೆ.

1. 'ಪ್ರಿಪೇಯ್ಡ್ ಸ್ಮಾರ್ಟ್ ವಿದ್ಯುತ್ ಮೀಟರ್' ಎಂದರೇನು?

ಹೆಸರೇ ಸೂಚಿಸುವಂತೆ, ಸ್ಮಾರ್ಟ್ ಮೀಟರ್ ಎನ್ನುವುದು ಹೊಸ ರೀತಿಯ ವಿದ್ಯುತ್ ಮೀಟರ್. ಇದು ಮೀಟರ್ ರೀಡಿಂಗ್‌ಗಳನ್ನು ವಿದ್ಯುತ್​ ಪೂರೈಕೆದಾರರಿಗೆ ಮತ್ತು ಗ್ರಾಹಕರಿಗೆ ನೆಟ್​ವರ್ಕ್​ ಮೂಲಕ ಕಳುಹಿಸಬಹುದು. ಹೊಸ ವ್ಯವಸ್ಥೆಯು ಬಿಲ್ಲಿಂಗ್ ಪ್ರಕ್ರಿಯೆಯಲ್ಲಿ ಮನುಷ್ಯನ ಹಸ್ತಕ್ಷೇಪ ಕಡಿಮೆ ಮಾಡುವುದರ ಜೊತೆಗೆ, ಒಂದು ಪ್ರದೇಶದಲ್ಲಿ ನಿಜವಾಗಿಯೂ ಎಷ್ಟು ಪ್ರಮಾಣದ ವಿದ್ಯುತ್​ ಅಗತ್ಯವಿದೆ ಎಂಬ ಮಾಹಿತಿಯನ್ನು ಡಿಸ್ಕಾಮ್‌ಗಳಿಗೆ ನೀಡುತ್ತದೆ.

2. ಹಾಗಿದ್ದರೆ, ಸ್ಮಾರ್ಟ್ ಮೀಟರ್‌ನ ಕಾರ್ಯವಿಧಾನ ಹೇಗೆ?

ಗ್ರಾಹಕರು ವಿದ್ಯುತ್ ಬಳಸುವ ಮೊದಲೇ ಮೊತ್ತವನ್ನು ಪಾವತಿಸುತ್ತಾರೆ. ಗ್ರಾಹಕರ ಖಾತೆಯಲ್ಲಿ ಲಭ್ಯವಿರುವ ಮೊತ್ತವನ್ನು ಆಧರಿಸಿ ಪ್ರಿಪೇಯ್ಡ್ ಮೀಟರ್‌ಗಳು ಕಾರ್ಯನಿರ್ವಹಿಸುತ್ತವೆ. ತಮ್ಮ ಖಾತೆಯಲ್ಲಿ ಯಾವುದೇ ಬಾಕಿ ಮೊತ್ತವಿಲ್ಲದಿದ್ದರೆ, ಪೂರೈಕೆ ಸಂಪರ್ಕ ಕಡಿತಗೊಳ್ಳುತ್ತದೆ. ಆದರೆ ವಿದ್ಯುತ್ ವಿತರಣಾ ಕಂಪನಿಯು ಗ್ರಾಹಕರ ಮೇಲೆ ಯಾವುದೇ ಹೆಚ್ಚುವರಿ ಮೊತ್ತವನ್ನು ವಿಧಿಸುವುದಿಲ್ಲ.

3. ಅನುಕೂಲಗಳ ಬಗ್ಗೆ ತಿಳಿದುಕೊಳ್ಳೋಣ..

ಮೀಟರಿಂಗ್, ಬಿಲ್ಲಿಂಗ್ ಮತ್ತು ಕಲೆಕ್ಷನ್ ಪ್ರೋಸೆಸ್ ಮತ್ತು ಇತ್ಯಾದಿಗಳಲ್ಲಿ ಮನೆಮನೆಗೆ ತಿರುಗುವ ಪ್ರಮೇಯ ಇರುವುದಿಲ್ಲ. ಅಂದರೆ ಆದಷ್ಟು ಕಡಿಮೆ ಖರ್ಚಿನಲ್ಲಿ ಈ ವೆಚ್ಚವನ್ನು ಭರಿಸಬೇಕು ಎಂಬ ಉದ್ದೇಶವನ್ನು ಹೊಂದಲಾಗಿದೆ. ಒಟ್ಟಿನಲ್ಲಿ ವಿದ್ಯುತ್ ಇಲಾಖೆಯಲ್ಲಿ ಸುಧಾರಣೆ ತರುವ ಗುರುತರ ಪ್ರಯತ್ನ ಇದಾಗಿದೆ. ಅಷ್ಟೇ ಅಲ್ಲದೆ, ವಿದ್ಯುತ್ ಬಿಲ್ ಕಲೆಕ್ಷನ್‌ನಲ್ಲಿಯೂ ನಡೆಯುತ್ತಿರುವ ಅವ್ಯವಹಾರವನ್ನು ತಡೆಯುವ ಉದ್ದೇಶವನ್ನು ಸರ್ಕಾರ ಹೊಂದಿದೆ.

4. ನಿಮ್ಮ ಖಾತೆಯನ್ನು ಹೀಗೆ ರೀಚಾರ್ಜ್ ಮಾಡಿ..

ವಿದ್ಯುತ್ ವಿತರಣಾ ಕಂಪನಿಗಳ ಬಿಲ್ ಕೌಂಟರ್‌ಗಳಲ್ಲಿ ಅಥವಾ ಪೇಟಿಎಂನಂತಹ ಆನ್‌ಲೈನ್ ಅಪ್ಲಿಕೇಶನ್‌ಗಳಲ್ಲಿ ಗ್ರಾಹಕರು ರೀಚಾರ್ಜ್ ಮಾಡಬಹುದು.

5.ಬಾಕಿ ಮೊತ್ತ ಪರಿಶೀಲಿಸುವ ವಿವಿಧ ವಿಧಾನಗಳು ಯಾವುವು?

ಎನರ್ಜಿ ಮೀಟರ್‌ಗಳಲ್ಲಿ ಪುಶ್ ಬಟನ್ ಒತ್ತುವ ಮೂಲಕ ಅಥವಾ ಮೀಟರ್ ಸ್ಥಳದಲ್ಲಿನ ಸಿಐಯು (ಗ್ರಾಹಕ ಇಂಟರ್ಫೇಸ್ ಯೂನಿಟ್) ಅನ್ನು ಬಳಸಿಕೊಂಡು ಅಥವಾ ಟೋಲ್-ಫ್ರೀ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ಅಥವಾ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸುವ ಮೂಲಕ ಬಾಕಿ ಮೊತ್ತವನ್ನು ಪರಿಶೀಲಿಸಬಹುದು. ರೀಚಾರ್ಜ್, ಕಡಿಮೆ ಹಣ, ಸಂಪರ್ಕ ಕಡಿತದಂತಹ ಸಮಯದಲ್ಲಿ ಗ್ರಾಹಕರನ್ನು SMS ಮೂಲಕ ಎಚ್ಚರಿಸಲಾಗುತ್ತದೆ.

ಇದನ್ನೂ ಓದಿ: ನೀವು ಲಸಿಕೆ ಹಾಕಿಸಿಕೊಂಡಿದ್ದೀರಾ? ಹಾಗಿದ್ದರೆ ಈ ದೇಶಗಳಿಗೆ ಪ್ರಯಾಣಿಸಬಹುದು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.