ETV Bharat / bharat

ಮದ್ಯ ಸೇವನೆಯಲ್ಲಿ ದೇಶದಲ್ಲಿಯೇ ಈ ರಾಜ್ಯಕ್ಕೆ ಎರಡನೇ ಸ್ಥಾನ - ಮದ್ಯ ಸೇವನೆ ಕುರಿತು ಆರ್ಥಿಕ ಸಂಶೋಧನಾ ಸಂಸ್ಥೆ ವರದಿ

ದೇಶದಲ್ಲಿ ಮದ್ಯ ಪ್ರಿಯರ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿ ಉತ್ತರಪ್ರದೇಶ ಇದ್ದರೆ, ಪಶ್ಚಿಮ ಬಂಗಾಳ ಎರಡನೇ ಸ್ಥಾನದಲ್ಲಿದೆ ಎಂದು ಆರ್ಥಿಕ ಸಂಶೋಧನಾ ಸಂಸ್ಥೆಯ ವರದಿ ಒಂದು ತಿಳಿಸಿದೆ.

west-bengal-second-highest-in-people-consuming-alcohol
ಮದ್ಯ ಸೇವನೆ
author img

By

Published : Aug 13, 2021, 4:28 PM IST

Updated : Aug 13, 2021, 5:02 PM IST

ಕೋಲ್ಕತ್ತಾ: ಮದ್ಯ ಸೇವಿಸುವವರ ಸಂಖ್ಯೆಯಲ್ಲಿ ಉತ್ತರಪ್ರದೇಶ ನಂಬರ್ ಒನ್ ಸ್ಥಾನದಲ್ಲಿದ್ದರೆ, ಪಶ್ಚಿಮ ಬಂಗಾಳ ಎರಡನೇ ಸ್ಥಾನದಲ್ಲಿದೆ ಎಂದು ಆರ್ಥಿಕ ಸಂಶೋಧನಾ ಸಂಸ್ಥೆ ICRIER ಮತ್ತು ಕಾನೂನು ಸಲಹಾ ಸಂಸ್ಥೆ PLR ಚೇಂಬರ್ಸ್ ಜಂಟಿ ಅಧ್ಯಯನ ಹೇಳಿದೆ.

ಅಧ್ಯಯನದ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಸುಮಾರು 1.4 ಕೋಟಿ ಜನರು ಮದ್ಯ ಸೇವನೆ ಮಾಡ್ತಾರೆ. ಇದರಿಂದಾಗಿ ರಾಜ್ಯಕ್ಕೆ ಹೆಚ್ಚಿನ ಆದಾಯ ಹರಿದು ಬರುತ್ತಿದೆ. ಇತ್ತೀಚೆಗೆ ಮುಕ್ತ ಮಾರುಕಟ್ಟೆಯಿಂದ ಕಡಿಮೆ ಎಕ್ಸ್​ ಡಿಸ್ಟಿಲರಿ ಬೆಲೆಗೆ ತಿದ್ದುಪಡಿ ಮಾಡಲಾಗಿದ್ದು, ಮದ್ಯದ ಮೇಲಿನ ತೆರಿಗೆ ಹೆಚ್ಚಳವಾಗಿದೆ. ಮಾರುಕಟ್ಟೆಯಲ್ಲಿ ಚಿಲ್ಲರೆ ಹಣದುಬ್ಬರ ಹೆಚ್ಚಾದ್ದರಿಂದ ಭಾರತ ತಯಾರಿಸಿದ ವಿದೇಶಿ ಮದ್ಯದ ಮಾರಾಟದಲ್ಲಿ ಗಣನೀಯ ಇಳಿಕೆಯಾಗಿದೆ.

ಅಬಕಾರಿ ಸುಂಕ ಹೆಚ್ಚಾಗಿದ್ದಕ್ಕೆ ಗ್ರಾಹಕರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋದನ್ನು ಗಣನೆಗೆ ತೆಗೆದುಕೊಂಡು ಈ ಸಮಸ್ಯೆ ಬಗ್ಗೆ ಅಧ್ಯಯನ ಮಾಡಬೇಕಿದೆ. ಭಾರತವು ಆಲ್ಕೋಹಾಲ್​ ಯುಕ್ತ ಪಾನೀಯಗಳಿಗಾಗಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ.

ಮಾರುಕಟ್ಟೆಯು 2020 ಮತ್ತು 2023 ರ ನಡುವೆ ಶೇಕಡಾ 6.8 ರಷ್ಟು ಸಿಎಜಿಆರ್‌ನಲ್ಲಿ ಬೆಳೆಯುವ ನಿರೀಕ್ಷೆಯಿದೆ. 2015-16 ಮತ್ತು 2018-19ರ ನಡುವಿನ ಅವಧಿಯಲ್ಲಿ ಆಲ್ಕೊಹಾಲ್​ ಯುಕ್ತ ಪಾನೀಯಗಳ ಉತ್ಪಾದನೆಯು ಸುಮಾರು ಶೇಕಡಾ 23.8 ರಷ್ಟು ಹೆಚ್ಚಾಗಿದೆ. ಅಬಕಾರಿ ವಲಯವು ಸುಮಾರು 1.5 ಮಿಲಿಯನ್ ಉದ್ಯೋಗಿಗಳಿಗೆ ಕೆಲಸ ನೀಡಿದೆ. ಮದ್ಯ ಸಾಗಾಟದಲ್ಲಿ ಭಾರತವು ಚಿಲಿ, ಅರ್ಜೆಂಟೀನಾ ಅಥವಾ ಚೀನಾದಂತಹ ದೊಡ್ಡ ರಫ್ತುದಾರನಾಗಲು ಸಾಧ್ಯವಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Last Updated : Aug 13, 2021, 5:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.