ನವದೆಹಲಿ: ಸರಿ ಸುಮಾರು 68 ವರ್ಷಗಳ ನಂತರ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಮರಳಿ ತವರು ಗೂಡು ಸೇರಿಕೊಂಡಿದ್ದು, ಬರೋಬ್ಬರಿ 18,000 ಕೋಟಿ ರೂಪಾಯಿಗೆ ಟಾಟಾ ಸನ್ಸ್ ಗ್ರೂಪ್ ಪಾಲಾಗಿದೆ. ತಮ್ಮ ತೆಕ್ಕೆಗೆ ಏರ್ ಇಂಡಿಯಾ ಸೇರಿಕೊಳ್ಳುತ್ತಿದ್ದಂತೆ ರತನ್ ಟಾಟಾ ಟ್ವೀಟ್ ಮಾಡಿ ಸಂತಸ ಹೊರಹಾಕಿದ್ದಾರೆ.
"ವೆಲ್ ಕಮ್ ಬ್ಯಾಕ್, ಏರ್ ಇಂಡಿಯಾ"("Welcome back, Air India,") ಎಂದು ಟ್ವಿಟರ್ನಲ್ಲಿ ಬರೆದುಕೊಳ್ಳುವ ಮೂಲಕ ರತನ್ ಟಾಟಾ ತಮ್ಮ ಸಂತಸ ಹೊರಹಾಕಿದ್ದಾರೆ.
-
Welcome back, Air India 🛬🏠 pic.twitter.com/euIREDIzkV
— Ratan N. Tata (@RNTata2000) October 8, 2021 " class="align-text-top noRightClick twitterSection" data="
">Welcome back, Air India 🛬🏠 pic.twitter.com/euIREDIzkV
— Ratan N. Tata (@RNTata2000) October 8, 2021Welcome back, Air India 🛬🏠 pic.twitter.com/euIREDIzkV
— Ratan N. Tata (@RNTata2000) October 8, 2021
1953ರಲ್ಲಿ ಭಾರತ ಸರ್ಕಾರದ ಪಾಲಾಗಿದ್ದ ಎರ್ ಇಂಡಿಯಾ 2007 ರ ನಂತರ ಸಾಲದ ಸುಳಿಗೆ ಸಿಲುಕಿಕೊಂಡಿತ್ತು. ಹೀಗಾಗಿ 2001ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ಎರ್ಲೈನ್ ಮಾರಾಟದ ಮೊದಲ ಪ್ರಯತ್ನ ಮಾಡಿತ್ತು. ಈ ವೇಳೆ ಶೇ. 40ರಷ್ಟು ಷೇರು ಮಾರಾಟ ಮಾಡಲಾಗಿತ್ತು. 2002-03 ಏರ್ ಇಂಡಿಯಾ ಕಂಪನಿ 133 ಕೋಟಿ ರೂ. ಹಾಗೂ 2003-04ರಲ್ಲಿ 105 ಕೋಟಿ ರೂ. ಲಾಭದಲ್ಲಿತ್ತು. ಆ ಬಳಿಕ
ಇದನ್ನೂ ಓದಿರಿ: ಮರಳಿ ಗೂಡು ಸೇರಿದ Air India..18,000 ಕೋಟಿ ರೂಗೆ TATA ಗ್ರೂಪ್ ಪಾಲಾದ ಸಂಸ್ಥೆ
2018ರಲ್ಲೂ ನಮೋ ಸರ್ಕಾರ ಏರ್ ಇಂಡಿಯಾ ಮಾರಾಟ ಮಾಡುವ ಕಸರತ್ತು ನಡೆಸಿತ್ತು. ಆದರೆ, ಈ ವೇಳೆ ಅದು ಸಫಲ ಆಗಿರಲಿಲ್ಲ. ಇದಾದ ಬಳಿಕ ವಿಮಾನಯಾನ ಸಂಸ್ಥೆಯ ಒಟ್ಟು ಸಾಲದ ಮೊತ್ತ 61,562 ಕೋಟಿ ರೂ. ಆಗಿದೆ. ಹೀಗಾಗಿ ನಮೋ ಸರ್ಕಾರ ಈ ಸಲ 18,000 ಕೋಟಿ ರೂ.ಗೆ ವಿಮಾನಯಾನ ಸಂಸ್ಥೆ ಮಾರುವಲ್ಲಿ ಯಶಸ್ವಿಯಾಗಿದೆ.
1932ರ ಅಕ್ಟೋಬರ್ನಲ್ಲಿ 'ಟಾಟಾ ಏರ್‌ಲೈನ್ಸ್' ಹೆಸರಿನಲ್ಲಿ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ ಸ್ಥಾಪಿಸಿತ್ತು. 1953 ರಲ್ಲಿ ಭಾರತ ಸರ್ಕಾರವು ಇದನ್ನು ರಾಷ್ಟ್ರೀಕರಣಗೊಳಿಸಿತ್ತು. ಆದರೆ, ಕಳೆದ ಕೆಲ ವರ್ಷಗಳಿಂದ ಏರ್ ಇಂಡಿಯಾ ವಿಮಾನಯಾನವು ಭಾರೀ ನಷ್ಟ ಅನುಭವಿಸುತ್ತಿತ್ತು. ಹೀಗಾಗಿ ಇದೀಗ ಶೇ. 100ರಷ್ಟು ಷೇರು ಮಾರಾಟ ಮಾಡಲಾಗಿದೆ.