ETV Bharat / bharat

ವಾರದ ಭವಿಷ್ಯ: ಈ ವಾರ ನಿಮಗೆ ಉತ್ತಮ ಫಲ.. ಮನಸ್ಸಿನಲ್ಲಿ ಸಂತಸ - Panchanga

ಅಕ್ಟೋಬರ್ 22 ರಿಂದ 28ರವರೆಗಿನ ವಾರದ ಭವಿಷ್ಯ ಇಲ್ಲಿದೆ.

Etv Bharat
ವಾರದ ರಾಶಿ ಭವಿಷ್ಯ
author img

By ETV Bharat Karnataka Team

Published : Oct 22, 2023, 7:17 AM IST

ಮೇಷ: ವಾರದ ಆರಂಭಿಕ ದಿನಗಳಿಂದಲೇ ನಿಮ್ಮ ವ್ಯವಹಾರದ ಕುರಿತು ಸಕ್ರಿಯರಾಗಲಿದ್ದೀರಿ. ಕುಟುಂಬದಿಂದ ಸ್ವಲ್ಪ ಅಂತರ ಕಾಪಾಡುವ ಅನಿವಾರ್ಯತೆ ಉಂಟಾಗಬಹುದು. ಆದರೆ ಕೆಲಸದಲ್ಲಿ ಉತ್ತಮ ಸಾಧನೆ ಮಾಡಲಿದ್ದೀರಿ. ನಿಮ್ಮ ದಕ್ಷತೆಯ ಕಾರಣ ಉತ್ತಮ ಕಾರ್ಯಸಾಧನೆ ಮಾಡಲಿದ್ದೀರಿ. ವ್ಯವಹಾರದಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಮುಂದೆ ಸಾಗಬೇಕು. ಏನಾದರೂ ಸರ್ಕಾರಿ ಯೋಜನೆಯ ಲಾಭವನ್ನು ನೀವು ಗಳಿಸಲಿದ್ದೀರಿ. ವ್ಯವಹಾರದಲ್ಲಿ ಸಾಕಷ್ಟು ಏರುಪೇರು ಉಂಟಾಗಬಹುದು. ವ್ಯವಹಾರದ ಪಾಲುಗಾರಿಕೆಯಲ್ಲಿ ಒತ್ತಡ ಹೆಚ್ಚಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿನಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಬಹುದು. ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಬಹುದು. ನಿಮ್ಮ ಜೀವನ ಸಂಗಾತಿಯು ಕೋಪಗೊಳ್ಳಬಹುದು. ಇದನ್ನು ನೀವು ಇಷ್ಟಪಡದೆ ಇರಬಹುದು. ಅಲ್ಲದೆ ಅವರ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಅದರೆ ಪ್ರೇಮಿಗಳಿಗೆ ಈ ವಾರವು ಒಳ್ಳೆಯದು. ನಿಮ್ಮ ಸಂಬಂಧವು ಚೆನ್ನಾಗಿರಲಿದೆ. ನಿಮ್ಮ ನಡುವಿನ ಅನ್ಯೋನ್ಯತೆಯು ಹೆಚ್ಚಲಿದೆ.

ವೃಷಭ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಬಾಕಿ ಉಳಿದಿರುವ ಕೆಲಸವು ಪೂರ್ಣಗೊಳ್ಳುವ ಕಾರಣ ನಿಮ್ಮ ಮನಸ್ಸಿನಲ್ಲಿ ಸಂತಸದ ಭಾವನೆ ಇರಲಿದೆ. ಮನಸ್ಸಿನಲ್ಲಿ ಆತ್ಮವಿಶ್ವಾಸ ಹೆಚ್ಚಲಿದೆ. ಕೆಲಸದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ನಿಮ್ಮ ಹಿರಿಯರ ಜೊತೆಗೆ ಉತ್ತಮ ಸಂಬಂಧವನ್ನು ನೀವು ಹೊಂದಿರಲಿದ್ದು ಇದರಿಂದ ಕೆಲಸದಲ್ಲಿ ನಿಮಗೆ ಪ್ರಯೋಜನ ಉಂಟಾಗಲಿದೆ. ನೀವು ಧೃತಿಗೆಡಬಹುದು. ಆದರೆ ಧೈರ್ಯದಿಂದ ಇರಿ. ಆದಾಯದಲ್ಲಿ ಕುಸಿತ ಉಂಟಾಗಲಿದೆ. ನಿಮ್ಮ ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ಕುಟುಂಬದ ಸದಸ್ಯರು ನಿಮ್ಮನ್ನು ಬೆಂಬಲಿಸಲಿದ್ದಾರೆ. ನಿಮ್ಮ ವೈವಾಹಿಕ ಬದುಕಿನಲ್ಲಿ ಒಂದಷ್ಟು ಒತ್ತಡ ಕಂಡುಬರಬಹುದು. ಪ್ರೇಮ ಸಂಬಂಧಕ್ಕೆ ಸಮಯವು ಚೆನ್ನಾಗಿದೆ. ಆದರೆ ನಿಮ್ಮಿಬ್ಬರ ನಡುವೆ ಅನಗತ್ಯ ವಾಗ್ವಾದ ಉಂಟಾಗಬಹುದು. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅಧ್ಯಯನದಲ್ಲಿ ಸಾಕಷ್ಟು ಪ್ರಯತ್ನ ಮಾಡಿದ ನಂತರ ನಿಮಗೆ ಯಶಸ್ಸು ದೊರೆಯಲಿದೆ. ಸ್ಪರ್ಧೆಯಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ನಿಮ್ಮ ಕಠಿಣ ಶ್ರಮಕ್ಕೆ ಯಶಸ್ಸು ದೊರೆಯಲಿದೆ. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ಮಿಥುನ: ಈ ವಾರದಲ್ಲಿ ನೀವು ಎರಡು ವಿಷಯಗಳಿಗೆ ಗಮನ ನೀಡಬೇಕು. ಆರೋಗ್ಯ ಮತ್ತು ಪ್ರೇಮ ಸಂಬಂಧದ ದೃಷ್ಟಿಯಿಂದ ಈ ವಾರವು ಒಳ್ಳೆಯದಲ್ಲ. ನೀವು ಅನಾರೋಗ್ಯಕ್ಕೆ ತುತ್ತಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಹೊಟ್ಟೆಗೆ ಸಂಬಂಧಿಸಿದ ಯಾವುದಾದರೂ ಸಮಸ್ಯೆಯು ನಿಮ್ಮನ್ನು ಬಾಧಿಸಬಹುದು. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ಅಗತ್ಯ ಬಿದ್ದರೆ ವೈದ್ಯರನ್ನು ಸಂಪರ್ಕಿಸಲು ಮರೆಯಬೇಡಿ. ಆರೋಗ್ಯವನ್ನು ನಿರ್ಲಕ್ಷಿಸಿದರೆ ಹಾನಿಯುಂಟಾಗಬಹುದು. ಈ ವಾರವು ಪ್ರೇಮ ಸಂಬಂಧದಲ್ಲಿ ದುರ್ಬಲವೆನಿಸಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿನಲ್ಲಿ ಒತ್ತಡ ಹೆಚ್ಚುವುದರಿಂದ ಚಿಂತೆಗೀಡಾಗಬಹುದು. ಆದರೆ ಪ್ರಯತ್ನ ಪಡುವ ಮೂಲಕ ಮುಂದೆ ಸಾಗಲಿದ್ದಾರೆ. ವ್ಯವಹಾರದ ದೃಷ್ಟಿಯಿಂದ ಸಮಯವು ಒಳ್ಳೆಯದು. ಆದರೆ ನಿಮ್ಮ ಮಾನಸಿಕ ಉದ್ವೇಗವು ಹೆಚ್ಚಬಹುದು. ಉದ್ಯೋಗದ ದೃಷ್ಟಿಯಿಂದ ಸಮಯವು ಚೆನ್ನಾಗಿದೆ. ಆದರೆ ಸವಾಲುಗಳು ಹೆಚ್ಚಬಹುದು. ಹೀಗಾಗಿ ಕೆಲಸವನ್ನು ಬದಲಾಯಿಸಲು ನೀವು ಪ್ರಯತ್ನಿಸಬಹುದು. ವಾರದ ಆರಂಭಿಕ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲ ದಿನಗಳು ಪ್ರಯಾಣಿಸಲು ಉತ್ತಮ.

ಕರ್ಕಾಟಕ: ನಿಮ್ಮ ವ್ಯವಹಾರಕ್ಕೆ ವೇಗ ದೊರೆಯಲಿದೆ. ಹೊಸ ಆರ್ಡರ್‌ ದೊರೆಯುವುದರಿಂದ ನಿಮ್ಮ ಕೆಲಸದ ಒತ್ತಡ ಹೆಚ್ಚಬಹುದು. ಸರ್ಕಾರಿ ವಲಯದಿಂದ ನೀವು ಹೆಚ್ಚಿನ ಲಾಭ ಪಡೆಯಬಹುದು. ಈ ಬಾರಿ ನೀವು ಹೊಸ ಆಸ್ತಿಯನ್ನು ಖರೀದಿಸಬಹುದು. ಆಸ್ತಿಗೆ ಸಂಬಂಧಿಸಿದ ಕೆಲಸದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಉದ್ಯೋಗದಲ್ಲಿರುವವರು ನಿಮ್ಮ ಕೆಲಸದಲ್ಲಿ ನಿರ್ಲಕ್ಷ್ಯ ತೋರಬಾರದು. ಏಕೆಂದರೆ ಇದು ಕೆಲಸದಲ್ಲಿ ಕೆಟ್ಟ ಫಲಿತಾಂಶವನ್ನು ತಂದು ಕೊಡಬಹುದು. ವೈವಾಹಿಕ ಬದುಕಿನ ಒತ್ತಡ ಕಡಿಮೆಯಾಗಲಿದೆ. ಜೀವನ ಸಂಗಾತಿಯ ಬೆಂಬಲವು ನಿಮಗೆ ಮುಂದೆ ಸಾಗಲು ಪ್ರೇರಣೆ ನೀಡಬಹುದು. ಕುಟುಂಬದ ಸದಸ್ಯರು ಅಥವಾ ಮನೆಯ ವಾತಾವರಣದ ಕಾರಣ ಪ್ರೇಮ ಜೀವನದಲ್ಲಿ ಸಮಸ್ಯೆಗಳು ಉಂಟಾಗಬಹುದು. ವಾರದ ಕೊನೆಯ 2 ದಿನಗಳು ಪ್ರಯಾಣಿಸಲು ಉತ್ತಮ. ವಿದ್ಯಾರ್ಥಿಗಳು ತಮ್ಮ ಏಕಾಗ್ರತೆಯನ್ನು ಹೆಚ್ಚಿಸಲು ಯತ್ನಿಸಬೇಕು. ಏಕೆಂದರೆ ಅವರ ಏಕಾಗ್ರತೆಯು ಈ ವಾರದಲ್ಲಿ ದುರ್ಬಲಗೊಳ್ಳುವ ಸಾಧ್ಯತೆ ಇದೆ.

ಸಿಂಹ: ಈ ವಾರವು ನಿಮಗೆ ದುರ್ಬಲವೆನಿಸಲಿದೆ. ವಾರದ ಆರಂಭದಲ್ಲಿ ನಿಮ್ಮ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಅಲ್ಲದೆ ಮಾನಸಿಕ ಚಂಚಲತೆಯು ನಿಮ್ಮನ್ನು ಕಾಡಬಹುದು. ವಾರದ ನಡುವಿನ ದಿನಗಳು ಉತ್ತಮ. ನಿಮ್ಮ ನಿರೀಕ್ಷಿತ ಕೆಲಸಗಳು ಪೂರ್ಣಗೊಳ್ಳಲಿದ್ದು ಇದು ನಿಮ್ಮ ಮುಖದಲ್ಲಿ ಸಂತಸವನ್ನು ಮೂಡಿಸಲಿದೆ. ನಿಮಗೆ ಅದೃಷ್ಟದ ಬೆಂಬಲ ದೊರೆಯಲಿದೆ. ಹೀಗಾಗಿ ಕೆಲಸವು ಶೀಘ್ರವಾಗಿ ಮುಗಿಯಲಿದೆ. ಅಲ್ಲದೆ ಬಾಕಿ ಉಳಿದ ಕೆಲಸ ಸಹ ಮತ್ತೆ ಪ್ರಾರಂಭಗೊಳ್ಳಲಿದೆ. ಕೆಲಸದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ಪರಿಸ್ಥಿತಿಯು ನಿಮ್ಮ ಪರವಾಗಿದ್ದು ಇದರಿಂದ ನಿಮಗೆ ಲಾಭ ಉಂಟಾಗಲಿದೆ. ವ್ಯವಹಾರ ನಡೆಸಲು ಈ ಸಮಯ ಅನುಕೂಲಕರ. ತಮ್ಮ ಕೌಟುಂಬಿಕ ಜೀವನದಲ್ಲಿನ ಚಿಂತೆಗಳನ್ನು ದೂರ ಮಾಡುವುದಕ್ಕಾಗಿ ವಿವಾಹಿತ ವ್ಯಕ್ತಿಗಳು ಎಲ್ಲಾದರೂ ಪ್ರಯಾಣಕ್ಕೆ ಹೋಗಬಹುದು. ಪ್ರೇಮ ಸಂಬಂಧದಲ್ಲಿರುವವರಿಗೆ ಸಮಯವು ಚೆನ್ನಾಗಿದೆ. ನಿಮ್ಮ‌ ಸಂಗಾತಿಯನ್ನು ಮತ್ತೆ ಮತ್ತೆ ಭೇಟಿ ಮಾಡಲು ಯತ್ನಿಸಲಿದ್ದೀರಿ. ವಾರದ ಕೊನೆಯ 2 ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ಕನ್ಯಾ: ಈ ವಾರ ನಿಮಗೆ ಅದ್ಭುತ ಫಲ ದೊರೆಯಲಿದೆ. ನಿಮ್ಮ ಮನಸ್ಸಿನ ಭಾವನೆಗಳನ್ನು ನೀವು ವ್ಯಕ್ತಪಡಿಸಲಿದ್ದು ಇದು ನಿಮ್ಮ ಪ್ರೇಮ ಜೀವನ ಸುಧಾರಿಸಲಿದೆ ಹಾಗೂ ಅನ್ಯೋನ್ಯತೆಯನ್ನು ಹೆಚ್ಚಿಸಲಿದೆ. ನಿಮ್ಮ ಪ್ರೇಮಿಗೆ ನೀವು ಭಾವನಾತ್ಮಕವಾಗಿ ಸ್ಪಂದಿಸಲಿದ್ದೀರಿ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಸಾಕಷ್ಟು ಏರುಪೇರಿನ ನಡುವೆ ಮುಂದೆ ಸಾಗಲಿದೆ. ನಿಮ್ಮ ಜೀವನ ಸಂಗಾತಿ ಹಾಗೂ ನೀವಿಬ್ಬರೂ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುವ ಸಾಧ್ಯತೆ ಇದೆ. ಅಲ್ಲದೆ ನಿಮ್ಮ ನಡುವೆ ಸಮನ್ವಯದ ಕೊರತೆ ಕಂಡುಬರಬಹುದು. ಆದರೆ ಇದನ್ನೆಲ್ಲ ಮೀರಿ ನೀವು ಮುಂದೆ ನಡೆದರೆ ಮತ್ತು ನಿಮ್ಮ ಸಂಬಂಧಕ್ಕೆ ಒಂದಷ್ಟು ಸಮಯವನ್ನು ನೀಡಿದರೆ ಎಲ್ಲವೂ ಸರಿ ಎನಿಸುತ್ತದೆ. ಈ ವಾರ ವ್ಯಾಪಾರಿಗಳಿಗೆ ಅತ್ಯುತ್ತಮ ಫಲ ದೊರೆಯಲಿದೆ. ನಿಮ್ಮ ಸಾಮರ್ಥ್ಯ ಮತ್ತು ಹಿಂದಿನ ಪ್ರಯತ್ನಕ್ಕೆ ಉತ್ತಮ ಫಲ ದೊರೆಯುತ್ತದೆ. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನಿಮ್ಮ ಕಿರಿಯರ ಕುರಿತು ಎಚ್ಚರಿಕೆ ವಹಿಸಿ. ಅವರು ಈ ಸಂದರ್ಭದಲ್ಲಿ ಸಮಸ್ಯೆಯನ್ನುಂಟು ಮಾಡಬಹುದು. ಈ ವಾರವು ಪ್ರಯಾಣಿಸುವುದಕ್ಕೆ ಅತ್ಯುತ್ತಮ. ಕೌಟುಂಬಿಕ ಸಮಸ್ಯೆಯ ಕಾರಣ ವಿದ್ಯಾರ್ಥಿಗಳು ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು.

ತುಲಾ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ನೀವು ಮನೆಯ ಒಂದಷ್ಟು ಕೆಲಸವನ್ನು ಮಾಡಲಿದ್ದು ಇದು ನಿಮ್ಮ ವೆಚ್ಚವನ್ನು ತಗ್ಗಿಸಲಿದೆ ಹಾಗೂ ಆದಾಯವನ್ನು ವೃದ್ಧಿಸಲಿದೆ. ಒಟ್ಟಾರೆಯಾಗಿ ನೀವು ಸಂತಸ ಅನುಭವಿಸಲಿದ್ದೀರಿ. ವ್ಯವಹಾರದ ವಿಚಾರದಲ್ಲಿ ಸಾಕಷ್ಟು ಏರುಪೇರು ಕಾಣಿಸಿಕೊಳ್ಳಲಿದೆ. ಸರಿಯಾಗಿ ಜ್ಞಾನವಿಲ್ಲದ ಕೆಲಸದಲ್ಲಿ ತೊಡಗಿಸಿಕೊಳ್ಳಬೇಡಿ ಹಾಗೂ ಈ ಕೆಲಸವನ್ನು ಸರ್ಕಾರಿ ನೌಕರರಿಗೆ ಕಳುಹಿಸಬೇಡಿ. ಇಲ್ಲದಿದ್ದರೆ ನಿಮಗೆ ಸಮಸ್ಯೆ ಎದುರಾಗಬಹುದು. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನೀವು ಕಠಿಣ ಶ್ರಮ ಪಡಲಿದ್ದೀರಿ ಹಾಗೂ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ನೀವು ಜೀವನ ಸಂಗಾತಿಯಿಂದ ಉತ್ತಮ ಸಹಕಾರವನ್ನು ಪಡೆಯಲಿದ್ದೀರಿ. ನೀವು ಅವರಿಗಾಗಿ ಏನಾದರೂ ಕೆಲಸವನ್ನು ಮಾಡಲಿದ್ದೀರಿ. ಅವರಿಂದಾಗಿ ಲಾಭವನ್ನು ಗಳಿಸಲಿದ್ದೀರಿ. ನಿಮ್ಮ ಜೀವನವನ್ನು ನೀವು ಆನಂದಿಸಲಿದ್ದೀರಿ. ಅಧ್ಯಯನದ ಇತರ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಲಿದ್ದೀರಿ.

ವೃಶ್ಚಿಕ: ಈ ವಾರವು ನಿಮಗೆ ಅನುಕೂಲಕರ. ಗೆಳೆಯರನ್ನು ನೀವು ಭೇಟಿಯಾಗಲಿದ್ದು ಸಾಕಷ್ಟು ಮನರಂಜನೆ ನಿಮಗೆ ದೊರೆಯಲಿದೆ. ಎಲ್ಲಾದರೂ ವಾಕ್‌ ಗೆ ಹೋಗಲಿದ್ದೀರಿ. ವಾರದ ಆರಂಭದಲ್ಲಿ ಪ್ರಯಾಣಿಸುವ ಸಾಧ್ಯತೆ ಇದೆ. ಖರ್ಚುವೆಚ್ಚದಲ್ಲಿ ಬೇಗನೆ ಹೆಚ್ಚಳ ಉಂಟಾಗಬಹುದು. ಇದರಿಂದ ನಿಮ್ಮ ಮೇಲಿನ ಒತ್ತಡವು ಹೆಚ್ಚಾಗಬಹುದು. ಆದಾಯದಲ್ಲಿ ಕುಸಿತ ಉಂಟಾಗಬಹುದು. ಹೀಗಾಗಿ ಇವೆರಡರ ನಡುವೆ ಸಮನ್ವಯ ಸಾಧಿಸುವುದ್ಕಕಾಗಿ ನೀವು ಗಮನ ಹರಿಸಬೇಕು. ಇಲ್ಲದಿದ್ದರೆ ಸಮಸ್ಯೆಯುಂಟಾಗಬಹುದು. ಕೆಲಸದ ಪರಿಸ್ಥಿತಿಯು ಅನುಕೂಲಕರವಾಗಿದೆ. ಆದರೆ ನೀವು ಅತ್ತಿತ್ತ ಓಡಾಡುವ ಅಗತ್ಯ ಬೀಳಬಹುದು. ಕೆಲವರಿಗೆ ವಿದೇಶಕ್ಕೆ ಹೋಗುವ ಅವಕಾಶ ಲಭಿಸಬಹುದು. ಕೆಲಸ ಪಡೆಯುವುದಕ್ಕಾಗಿ ನೀವು ಅಲ್ಲಿ ಒಂದಷ್ಟು ಸಮಯವನ್ನು ಕಳೆಯಬೇಕಾದೀತು. ಈ ವಾರವು ವ್ಯಾಪಾರೋದ್ಯಮಿಗಳಿಗೆ ಉತ್ತಮ ಫಲ ನೀಡಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಸಮಯ ಸಾಧಾರಣ ಫಲ ನೀಡಲಿದೆ. ವಿವಾಹಿತ ವ್ಯಕ್ತಿಗಳಿಗೆ ಕೌಟುಂಬಿಕ ವೆಚ್ಚಗಳು ಉಂಟಾಗಬಹುದು. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ಧನು: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ನೀವು ಯೋಚಿಸಿದ ಹಾಗೂ ಬಯಸಿದ ಕೆಲಸಗಳು ಈ ಸಮಯದಲ್ಲಿ ಪೂರ್ಣಗೊಳ್ಳಲಿವೆ. ಬಾಕಿ ಉಳಿದಿರುವ ಯೋಜನೆಗಳು ಪೂರ್ಣಗೊಳ್ಳಲಿವೆ. ವ್ಯವಹಾರವಾಗಿರಲಿ ಅಥವಾ ಉದ್ಯೋಗವಾಗಿರಲಿ, ನೀವು ಉತ್ತಮ ಸಾಧನೆ ಮಾಡಲಿದ್ದೀರಿ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ಆದಾಯದಲ್ಲಿ ಕ್ಷಿಪ್ರಗತಿಯಲ್ಲಿ ಹೆಚ್ಚಳ ಉಂಟಾಗಲಿದೆ. ಈ ಆದಾಯವನ್ನು ನೀವು ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಇದರ ಪ್ರಯೋಜನವನ್ನು ನೀವು ಗಳಿಸಬಹುದು. ಈ ಬಾರಿ ನೀವು ಆಸ್ತಿ ಖರೀದಿಸುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ವಾರದ ಕೊನೆಯ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲ ದಿನಗಳು ಪ್ರಯಾಣಿಸಲು ಉತ್ತಮ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಅನೇಕ ಅಡಚಣೆಗಳನ್ನು ಎದುರಿಸಬಹುದು. ಹೀಗಾಗಿ ಅಧ್ಯಯನದಲ್ಲಿ ಹೆಚ್ಚು ಗಮನ ಕೇಂದ್ರೀಕರಿಸಿ. ವಿವಾಹಿತ ವ್ಯಕ್ತಿಗಳಿಗೆ ಸಮಯವು ಅನುಕೂಲಕರವಾಗಿದೆ. ಪ್ರೇಮ ಸಂಬಂಧದಲ್ಲಿರುವ ಜನರು ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು.

ಮಕರ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಮಾನಸಿಕ ಒತ್ತಡದಿಂದ ಹೊರ ಬರಲಿದ್ದೀರಿ. ನಿಮ್ಮ ಆತ್ಮವಿಶ್ವಾಸವು ವೃದ್ಧಿಸಲಿದೆ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಬಹುದು. ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಕೆಲಸದಲ್ಲಿ ಏರುಪೇರು ಉಂಟಾಗಬಹುದು. ಬೇರೆಯವರ ಅನಗತ್ಯ ಮಾತು ಕೇಳಿದರೆ ನಿಮ್ಮ ಮನಸ್ಸು ಹಾಳಾಗಬಹುದು. ಇದರಿಂದಾಗಿ ನೀವು ಕೋಪಗೊಳ್ಳಬಹುದು ಹಾಗೂ ಏನಾದರೂ ಕೆಟ್ಟ ಮಾತನ್ನು ಹೇಳಬಹುದು. ತತ್ಪರಿಣಾಮವಾಗಿ ಕೆಲಸದ ಸ್ಥಳದಲ್ಲಿ ಸಂಘರ್ಷ ಉಂಟಾಗಬಹುದು. ಸಾಧ್ಯವಾದಲ್ಲಿ ಇಂತಹ ಸನ್ನಿವೇಶ ಸೃಷ್ಟಿಯಾಗದಂತೆ ನೋಡಿಕೊಳ್ಳಿ. ವ್ಯವಹಾರದ ಅವಕಾಶಗಳು ಚೆನ್ನಾಗಿವೆ. ಸಮಯವು ಅನುಕೂಲಕವಾಗಿದೆ. ನಿಮ್ಮ ಉತ್ಪಾದಕತೆಯು ಹೆಚ್ಚಲಿದೆ. ಕಠಿಣ ಶ್ರಮದ ಮೂಲಕ ಒಳ್ಳೆಯ ಕಾಮಗಾರಿ ಪಡೆಯಲಿದ್ದೀರಿ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಸಂತಸ ಅನುಭವಿಸಲಿದ್ದಾರೆ. ಆದರೆ ಜೀವನ ಸಂಗಾತಿಯ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಇದು ನಿಮ್ಮ ಚಿಂತೆಗೆ ಕಾರಣವಾಗಬಹುದು. ಪ್ರೇಮ ಸಂಬಂಧದ ವಿಚಾರದಲ್ಲಿ ಸಮಯವು ದುರ್ಬಲವಾಗಿದೆ. ನಿಮ್ಮ ನಡುವಿನ ಸಮನ್ವಯದಲ್ಲಿ ಕೊರತೆ ಉಂಟಾಗಬಹುದು. ಆದಷ್ಟು ಬೇಗನೆ ಸಂತುಲನ ಸಾಧಿಸಲು ಯತ್ನಿಸಿ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಕುಂಭ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ಸಾಕಷ್ಟು ಖರ್ಚುವೆಚ್ಚಗಳು ಉಂಟಾಗಬಹುದು. ಇದು ನಿಮ್ಮ ಚಿಂತೆಗೆ ಕಾರಣವಾಗಬಹುದು. ಉದ್ಯೋಗದಲ್ಲಿರುವವರು ತಮ್ಮ ಕೆಲಸದ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಕೆಲಸದ ಸ್ಥಳದಲ್ಲಿ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ನೋಡಿಕೊಳ್ಳಿ. ಏಕೆಂದರೆ ಅಲ್ಲಿ ಎಲ್ಲರೂ ನಿಮ್ಮ ಮೇಲೆ ನಿಗಾ ಇರಿಸುತ್ತಾರೆ. ವರ್ಗಾವಣೆಯ ಸಾಧ್ಯತೆ ಇದೆ. ನೀವು ಮನಸ್ಸು ಮಾಡಿದರೆ ಕೆಲಸ ಬದಲಾವಣೆಯ ವಿಚಾರದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರ ಯೋಜನೆಯು ಯಶಸ್ವಿಯಾಗಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಿಸಬೇಕಾದೀತು. ಆದರೆ ಇದರಿಂದ ಯಶಸ್ಸು ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ಕೌಟುಂಬಿಕ ಬದುಕಿನಲ್ಲಿ ಪ್ರಣಯದತ್ತ ಆಕರ್ಷಿಸಲಾಗಲಿದ್ದಾರೆ. ಅಲ್ಲದೆ ಸಂಬಂಧದಲ್ಲಿ ಪರಸ್ಪರ ಗೌರವವು ಹೆಚ್ಚಲಿದೆ. ಪ್ರೇಮ ಜೀವನ ಅನುಕೂಲಕರವಾಗಿದೆ. ಆದರೆ ನಿಮ್ಮ ಪ್ರೇಮಿಯು ಅವರ ಬದುಕಿನಲ್ಲಿ ಸಮಸ್ಯೆಯನ್ನು ಎದುರಿಸಬಹುದು. ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಮೀನ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ಈ ವಾರದಲ್ಲಿ ಹೊಸ ಜನರನ್ನು ಭೇಟಿಯಾಗಲು ನಿಮಗೆ ಅವಕಾಶ ದೊರೆಯಲಿದೆ. ನೀವು ಹೊಸ ಸಂಪರ್ಕಗಳನ್ನು ಪಡೆಯಬಹುದು. ಪ್ರಯಾಣಕ್ಕೆ ಹೋಗಲು ಮತ್ತು ರಜಾಕಾಲವನ್ನು ಕಳೆಯಲು ನಿಮಗೆ ಅವಕಾಶ ದೊರೆಯಲಿದೆ. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ ಹಾಗೂ ಪರಸ್ಪರ ಪ್ರೇಮವು ಹೆಚ್ಚಲಿದೆ. ನೀವು ವಿವಾಹಿತರಾಗಿದ್ದರೆ ನಿಮ್ಮ ಕೌಟುಂಬಿಕ ಬದುಕಿನಲ್ಲಿ ಸುಧಾರಣೆ ತರಲು ಯತ್ನಿಸಿ. ಹಠಮಾರಿತನದ ಮನೋಭಾವವು ಸಂಬಂಧವನ್ನು ಹದಗೆಡಿಸುತ್ತದೆಯೇ ಹೊರತು ಸುಧಾರಿಸುವುದಿಲ್ಲ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಅನೇಕ ಸ್ಥಳಗಳಿಂದ ನಿಮಗೆ ಲಾಭ ದೊರೆಯಲಿದೆ. ಎಲ್ಲಿಂದಾದರೂ ನಿಮಗೆ ಹಣ ಬರಬಹುದು. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದ್ದು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ಈ ಸಮಯವು ಅನುಕೂಲಕರವಾಗಿದ್ದು ಚೆನ್ನಾಗಿ ಪೂರ್ವಸಿದ್ಧತೆ ಮಾಡಿಕೊಳ್ಳುವ ಮೂಲಕ ಅವರು ಮುಂದೆ ಸಾಗಲಿದ್ದಾರೆ. ವಾರದ ಆರಂಭಿಕ ಮತ್ತು ಕೊನೆಯ ಎರಡು ದಿನ0ಗಳು ಪ್ರಯಾಣಿಸಲು ಅನುಕೂಲಕರ.

ಇದನ್ನೂ ಓದಿ: ಭಾನುವಾರದ ಪಂಚಾಂಗ ಹಾಗೂ ರಾಶಿ ಭವಿಷ್ಯ: ನಿಮಗಿಂದು ಪ್ರೀತಿಪಾತ್ರರಿಂದ ಶುಭ ಸುದ್ದಿ.. ಅನಿರೀಕ್ಷಿತ ಉಡುಗೊರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.