ಮೇಷ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ಜನರ ವೈವಾಹಿಕ ಜೀವನದಲ್ಲಿ ಪರಸ್ಪರ ಅನ್ಯೋನ್ಯತೆಯನ್ನು ತೋರಲಿದ್ದಾರೆ. ನಿಮ್ಮ ನಡುವೆ ಇರುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನೀವು ಸಾಕಷ್ಟು ಮಟ್ಟಿಗೆ ಯಶಸ್ವಿಯಾಗಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವವರ ಬದುಕಿನಲ್ಲಿ ಈ ವಾರದಲ್ಲಿ ಸಾಕಷ್ಟು ಏರುಪೇರು ಉಂಟಾಗಬಹುದು. ಯಾರಾದರೂ ಒಬ್ಬರು ನಿಮ್ಮ ಬದುಕಿನಲ್ಲಿ ಪ್ರವೇಶಿಸಬಹುದು. ಇದು ನಿಮ್ಮ ಪ್ರೇಮ ಜೀವನದ ಮೇಲೆ ಪರಿಣಾಮ ಬೀರಲಿದೆ. ಯಾರಾದರೂ ಒಬ್ಬ ಗೆಳೆಯರೊಂದಿಗೆ ನಿಮ್ಮ ಆಪ್ತತೆಯು ಹೆಚ್ಚಲಿದೆ ಹಾಗೂ ನಿಮ್ಮ ಪ್ರೇಮ ಬದುಕಿನಲ್ಲಿ ಸಮಸ್ಯೆಗಳನ್ನುಂಟು ಮಾಡಬಹುದು. ಈ ಬಾರಿ ನೀವು ದೀರ್ಘ ಪ್ರವಾಸವನ್ನು ಕೈಗೊಳ್ಳಬಹುದು. ನೀವು ಧಾರ್ಮಿಕ ಪ್ರವಾಸ ಕೈಗೊಳ್ಳಬಹುದು ಅಥವಾ ಕುಟುಂಬದ ಸದಸ್ಯರೊಂದಿಗೆ ರಜಾ ಸಮಯವನ್ನು ಸಂಭ್ರಮಿಸಲು ನಿಮಗೆ ಅವಕಾಶ ದೊರೆಯಬಹುದು. ಇದು ನಿಮ್ಮ ಸಂತಸವನ್ನು ದುಪ್ಪಟ್ಟುಗೊಳಿಸಲಿದೆ. ಆದಾಯದಲ್ಲಿ ವೃದ್ಧಿ ಉಂಟಾಗಲಿದೆ. ಉದ್ಯೋಗದಲ್ಲಿ ನಿಮ್ಮ ಸ್ಥಾನವು ಸುಭದ್ರವಾಗಿರಲಿದೆ. ನಿಮ್ಮ ಕೆಲಸದಲ್ಲಿ ಪ್ರಾವಿಣ್ಯತೆಯನ್ನು ಗಳಿಸಲಿದ್ದೀರಿ ಹಾಗೂ ಕೆಲಸದಲ್ಲಿ ಇದರ ಲಾಭವನ್ನು ಪಡೆಯಲಿದ್ದೀರಿ. ವ್ಯಾಪಾರೋದ್ಯಮಿಗಳ ಕಠಿಣ ಶ್ರಮಕ್ಕೆ ಯಶಸ್ಸು ದೊರೆಯಲಿದೆ. ಈಗ ವಿರಮಿಸುವ ಸಮಯ ಸಮೀಪಿಸಿದೆ.
ವೃಷಭ: ಈ ವಾರವು ನಿಮಗೆ ಮುಂದೆ ಸಾಗಲು ಉತ್ತೇಜನ ನೀಡಲಿದೆ. ವಾರದ ಆರಂಭದಲ್ಲಿ ವಿವಾಹಿತ ವ್ಯಕ್ತಿಗಳು ಒಳ್ಳೆಯ ಮನೋಚಿತ್ತವನ್ನು ಹೊಂದಿರಲಿದ್ದಾರೆ. ನೀವು ಎಲ್ಲಾದರೂ ಒಟ್ಟಿಗೆ ವಾಕ್ಗೆ ಹೋಗಬಹುದು. ಪ್ರೇಮ ಸಂಬಂಧದಲ್ಲಿರುವವರು ತಮ್ಮ ಸಂಗಾತಿಯನ್ನು ಅವರ ಕುಟುಂಬದ ಸದಸ್ಯರ ಜೊತೆ ಭೇಟಿಯಾದ ನಂತರ ತುಂಬಾ ಸಂತಸ ಹೊಂದಿರಲಿದ್ದಾರೆ. ನೀವು ಉದ್ಯೋಗದಲ್ಲಿ ಆಸಕ್ತಿ ತೋರಲಿದ್ದೀರಿ. ಆದರೂ ಕೆಲ ಜನರು ನಿಮ್ಮ ವಿರುದ್ಧ ನಿಲ್ಲಬಹುದು. ಇದು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸಲಿದೆ. ಆದರೂ ನಿಮ್ಮ ಸಾಮರ್ಥ್ಯದ ಕಾರಣ ನಿಮ್ಮ ಕೆಲಸಕ್ಕೆ ನೀವು ಅಂಟಿಕೊಳ್ಳಲಿದ್ದೀರಿ. ನೀವು ಇದರ ಸದಾವಕಾಶವನ್ನು ಮಾಡಿಕೊಳ್ಳಲಿದ್ದೀರಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಹೆಚ್ಚು ಜಾಗರೂಕತೆಯಿಂದ ಕೆಲಸ ಮಾಡಬೇಕು. ಕಂಪ್ಯೂಟರ್ ಕಾರಣದಿಂದಾಗಿ ನೀವು ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾದೀತು. ಈ ವಾರದಲ್ಲಿ ನಿಮ್ಮ ಗೆಳೆಯರ ಸಂಪೂರ್ಣ ಬೆಂಬಲ ಪಡೆಯಲಿದ್ದೀರಿ. ಅವರು ನಿಮ್ಮ ವ್ಯವಹಾರದಲ್ಲಿ ನಿಮಗೆ ಸಹಾಯ ಮಾಡಲಿದ್ದಾರೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು.
ಮಿಥುನ: ಈ ವಾರದಲ್ಲಿ ನೀವು ಸಾಕಷ್ಟು ಏರುಪೇರು ಕಾಣಬಹುದು. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ತೃಪ್ತಿ ಅನುಭವಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯೊಂದಿಗೆ ಏನಾದರೂ ಹೊಸ ಕೆಲಸದಲ್ಲಿ ಕೈ ಹಾಕಲು ಯತ್ನಿಸಲಿದ್ದೀರಿ. ಇದು ಆರ್ಥಿಕ ಲಾಭವನ್ನು ತಂದು ಕೊಡಲಿದೆ. ನಿಮ್ಮ ಪ್ರೇಮ ಜೀವನಕ್ಕೆ ಇದು ಸಕಾಲ. ಪ್ರೇಮಿಯ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳಿ. ನಿಮ್ಮ ಮನಸ್ಸಿನಲ್ಲಿರುವ ಏನಾದರೂ ವಿಷಯದ ಕುರಿತು ನಿಮಗೆ ಚಿಂತೆ ಕಾಡಬಹುದು. ನಿಮ್ಮ ಮನಸ್ಸಿನಲ್ಲಿ ಕೆಲವೊಂದು ಕೆಟ್ಟ ಯೋಚನೆಗಳು ಬರಬಹುದು. ಆದರೆ ಅವುಗಳಿಂದ ದೂರವಿರಲು ಯತ್ನಿಸಿ. ಏಕೆಂದರೆ ಅವು ನಿಮ್ಮ ಆರೋಗ್ಯವನ್ನು ಕೆಡಿಸಬಹುದು ಹಾಗೂ ನೀವು ಅನಾರೋಗ್ಯಕ್ಕೆ ತುತ್ತಾಗಬಹುದು. ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಕಠಿಣ ಶ್ರಮ ತೋರಲಿದ್ದಾರೆ. ಅವರು ಇದರಿಂದ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಆದರೆ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ತಮ್ಮ ಪ್ರಯತ್ನವನ್ನು ಹೆಚ್ಚಿಸಲು ಯತ್ನಿಸಬೇಕು. ಆಗ ಮಾತ್ರವೇ ವ್ಯವಹಾರವು ಬೆಳೆಯಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ಕಠಿಣ ಶ್ರಮ ತೋರಬೇಕು.
ಕರ್ಕಾಟಕ: ಈ ವಾರವು ನಿಮ್ಮ ಪಾಲಿಗೆ ಒಳ್ಳೆಯದು. ಆದರೆ ವಾರದ ಆರಂಭಿಕ ದಿನಗಳು ಸ್ವಲ್ಪ ದುರ್ಬಲವಾಗಿರಬಹುದು. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸ್ವಲ್ಪ ಒತ್ತಡ ಎದುರಿಸಲಿದ್ದಾರೆ. ಇದಕ್ಕಾಗಿ ನಿಮ್ಮ ವರ್ತನೆಯನ್ನು ನೀವು ಸರಿಪಡಿಸಬೇಕು. ನಿಮ್ಮನ್ನು ನೀವೇ ಹಿರಿಯರಂತೆ ವರ್ತಿಸುವುದನ್ನು ನಿಲ್ಲಿಸಿ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರ ಅನುಕೂಲಕರ. ಸಂಬಂಧದಲ್ಲಿ ಪ್ರೇಮವು ಹೆಚ್ಚಲಿದ್ದು ಇದು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲಿದೆ. ಸದ್ಯಕ್ಕೆ ನೀವು ವೆಚ್ಚಗಳ ಬಲೆಯಲ್ಲಿ ಸಿಲುಕಿ ಹಾಕಿಕೊಳ್ಳಬಹುದು. ಮಾನಸಿಕ ಒತ್ತಡವು ನಿಮ್ಮನ್ನು ಕಾಡಬಹುದು. ಇದರಿಂದ ಹೊರಬರಲು ನಿಮಗೆ ಸಾಧ್ಯವಾಗದಂತೆ ಕಾಣಬಹುದು. ಆದರೆ ಪರಿಸ್ಥಿತಿ ಹಾಗಿಲ್ಲ. ಇದು ನಿಮ್ಮ ಭ್ರಮೆಯಷ್ಟೇ. ತಾಳ್ಮೆ ವಹಿಸಿ ಹಾಗೂ ನಿಮ್ಮ ಕೆಲಸದ ಮೇಲೆ ಗಮನ ಹರಿಸಿ. ಈ ವಾರ ಉದ್ಯೋಗದಲ್ಲಿರುವವರಿಗೆ ಅನುಕೂಲಕರ ಎನಿಸಲಿದೆ. ನಿಮ್ಮ ಕಠಿಣ ಶ್ರಮವು ಯಶಸ್ಸಿನ ಹೊಸ ಅಧ್ಯಾಯವನ್ನು ತೆರೆಯಲಿದೆ. ವ್ಯವಹಾರದ ವಿಚಾರದಲ್ಲಿ ಹೇಳುವುದಾದರೆ, ಈ ಬಾರಿ ಹೆಚ್ಚಿನ ಏರುಪೇರು ಉಂಟಾಗಬಹುದು. ಅನೇಕ ಕೆಲಸಗಳು ನಿಮ್ಮ ಕೈಯಲ್ಲಿ ಬಾಕಿಯಾಗಬಹುದು.
ಸಿಂಹ: ಈ ವಾರ ನಿಮ್ಮ ಪಾಲಿಗೆ ಸಂಪೂರ್ಣವಾಗಿ ಅನುಕೂಲಕರವಾಗಿದೆ. ವೈವಾಹಿಕ ಬದುಕಿನ ಒತ್ತಡದ ನಡುವೆಯೂ ನಿಮ್ಮ ಸಂಬಂಧದಲ್ಲಿ ಅನುರಾಗದ ಅನೇಕ ಕ್ಷಣಗಳು ಎದುರಾಗಬಹುದು. ನೀವು ಪರಸ್ಪರ ಗೌರವ ನೀಡಲಿದ್ದೀರಿ. ಅವರು ಒಟ್ಟಿಗೆ ಎಲ್ಲಾದರೂ ವಾಕ್ಗೆ ಹೋಗಬಹುದು. ಈ ವಾರದ ಆರಂಭಿಕ ದಿನಗಳು ಪ್ರೇಮ ಜೀವನಕ್ಕೆ ಅನುಕೂಲಕರ ಎನಿಸಲಿವೆ. ನಿಮ್ಮ ಪ್ರಣಯದ ಮೂಲಕ ನಿಮ್ಮ ಪ್ರೇಮ ಸಂಗಾತಿಯ ಹೃದಯವನ್ನು ನೀವು ಗೆಲ್ಲಲಿದ್ದೀರಿ. ಪ್ರತಿ ದಿನವೂ ಇದರ ಅನುಕೂಲವನ್ನು ಪಡೆಯಲು ಯತ್ನಿಸಿ. ಒಳ್ಳೆಯ ಯೋಗವು ನಿಮ್ಮ ವೈಯಕ್ತಿಕ ಹಾಗೂ ವೃತ್ತಿ ಬದುಕಿಗೆ ಸಹಾಯ ಮಾಡಲಿದ್ದು, ನಿಮ್ಮನ್ನು ಮುಂದಕ್ಕೆ ಒಯ್ಯಲಿದೆ. ಉದ್ಯೋಗದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ದೊರೆತರೆ, ವ್ಯವಹಾರದಲ್ಲಿ ನೀವು ಲಾಭವನ್ನು ಗಳಿಸಲಿದ್ದೀರಿ. ಅಲ್ಲದೆ ಕೆಲಸದಲ್ಲಿಯೂ ಹೆಚ್ಚಳ ಉಂಟಾಗಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಕಠಿಣ ಶ್ರಮ ತೋರಬೇಕು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ಕನ್ಯಾ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವೈವಾಹಿಕ ಬದುಕಿನ ಕುರಿತು ಮಾತನಾಡುವುದಾದರೆ ನಿಮ್ಮ ಪ್ರಯತ್ನದ ಮೂಲಕ ನಿಮ್ಮ ಜೀವನ ಸಂಗಾತಿಯ ಕುಟುಂಬದ ಸದಸ್ಯರಿಗೆ ನೀವು ಸಹಾಯ ಮಾಡಬೇಕಾದೀತು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ದುರ್ಬಲ ಎನಿಸಲಿದೆ. ಪರಸ್ಪರ ಮಾತುಕತೆಯು ಹಾದಿ ತಪ್ಪದಂತೆ ನೋಡಿಕೊಳ್ಳಿ. ಏಕೆಂದರೆ ಇದು ನಿಮ್ಮ ನಡುವಿನ ಸಾಮರಸ್ಯವನ್ನು ಕೆಡಿಸಲಿದೆ. ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಗಳಿಸಲು ಯಾರನ್ನೂ ಅವಲಂಬಿಸಬೇಕಾದ ಅಗತ್ಯವಿಲ್ಲ. ಆದರೆ ಕಠಿಣ ಶ್ರಮ ಪಟ್ಟು ಮುಂದೆ ಸಾಗಿರಿ. ಉದ್ಯೋಗದ ಕುರಿತು ಸಾಕಷ್ಟು ಗಂಭೀರತೆಯನ್ನು ತೋರಬೇಕು. ದೂರದ ಕೆಲವೊಂದು ಪ್ರದೇಶಗಳು ಮತ್ತು ರಾಜ್ಯಗಳಿಗೆ ನೀವು ಪ್ರಯಾಣಿಸಬೇಕಾದೀತು. ನೀವು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ವಿದೇಶಕ್ಕೆ ಹೋಗುವ ಅವಕಾಶ ನಿಮಗೆ ದೊರೆಯಬಹುದು. ನಿಮ್ಮ ವೆಚ್ಚಗಳಲ್ಲಿ ವೇಗವಾಗಿ ಹೆಚ್ಚಳ ಉಂಟಾಗಬಹುದು. ಇದು ನಿಮ್ಮ ಚಿಂತೆಗೆ ಕಾರಣವೆನಿಸಬಹುದು. ನಿಮ್ಮ ಆದಾಯವೂ ಚೆನ್ನಾಗಿರಲಿದೆ. ಇದು ನಿಮ್ಮ ಸಂತಸಕ್ಕೆ ಕಾರಣವೆನಿಸಲಿದೆ.
ತುಲಾ: ಈ ವಾರ ನಿಮಗೆ ಅನುಕೂಲಕರ ಎನಿಸಲಿದೆ. ವೈವಾಹಿಕ ಬದುಕು ಚೆನ್ನಾಗಿರಲಿದೆ. ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಎಲ್ಲಾದರೂ ಶಾಪಿಂಗ್ಗೆ ಹೋಗಬಹುದು. ನಿಮ್ಮ ಪ್ರೇಮ ಜೀವನಕ್ಕೆ ಈ ಸಮಯವು ಆನಂದಮಯವಾಗಿದೆ. ನಿಮ್ಮ ಪ್ರೇಮಿಯೊಂದಿಗೆ ನೀವು ಎಲ್ಲಾದರೂ ವಾಕ್ಗೆ ಹೋಗಬಹುದು. ಮುಂದೆ ಸಾಗಲು ನೀವು ಅವಕಾಶ ಪಡೆಯಲಿದ್ದೀರಿ. ಬಾಕಿ ಉಳಿದಿರುವ ನಿಮ್ಮ ಯೋಜನೆಗಳು ಪೂರ್ಣಗೊಳ್ಳಲಿವೆ. ಆರ್ಥಿಕವಾಗಿ ನೀವು ಒಂದಷ್ಟು ಸಾಧನೆ ಮಾಡಲಿದ್ದೀರಿ. ನೀವು ಸರ್ಕಾರಿ ಕ್ಷೇತ್ರದಿಂದ ದೊಡ್ಡ ಮಟ್ಟದ ಲಾಭವನ್ನು ಪಡೆಯಲಿದ್ದೀರಿ. ರಿಯಲ್ ಎಸ್ಟೇಟ್ಗೆ ಸಂಬಂಧಿಸಿದ ವಿಚಾರಗಳು ನಿಮ್ಮ ಗಮನವನ್ನು ಸೆಳೆಯಲಿವೆ. ಉದ್ಯೋಗದಲ್ಲಿ ನಿಮ್ಮ ಸ್ಥಾನವು ಗಟ್ಟಿಗೊಳ್ಳಲಿದೆ. ನಿಮ್ಮ ಕೆಲಸಕ್ಕೆ ನೀವು ಸಂಪೂರ್ಣ ಗಮನ ನೀಡಲಿದ್ದೀರಿ. ವ್ಯವಹಾರದಲ್ಲಿ ಕೆಲವೊಂದು ಪ್ರಮುಖ ವ್ಯಕ್ತಿಗಳ ಜೊತೆಗೆ ಮುಂದೆ ಸಾಗುವ ಅವಕಾಶ ಲಭಿಸಬಹುದು. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಈ ವಾರದಲ್ಲಿ ನೀವು ಏನಾದರೂ ಸಾಧನೆಯನ್ನು ಮಾಡಲಿದ್ದೀರಿ.
ವೃಶ್ಚಿಕ: ಈ ವಾರ ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರವಾಗಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಸಂಬಂಧವು ಇನ್ನಷ್ಟು ಗಟ್ಟಿಯಾಗಲಿದೆ. ಸಂಬಂಧದಲ್ಲಿ ಪ್ರೇಮ ಮತ್ತು ಪ್ರಣಯವು ಹೆಚ್ಚಲಿದೆ. ಸಣ್ಣಪುಟ್ಟ ಸಂಘರ್ಷಗಳು ಉಂಟಾಗಬಹುದು. ಆದರೆ ಪ್ರೇಮವು ನೆಲೆಸಲಿದೆ. ಹೀಗಾಗಿ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಜೀವನ ಸಂಗಾತಿಯನ್ನು ಸಂಪೂರ್ಣವಾಗಿ ಅರಿತುಕೊಳ್ಳಿ ಹಾಗೂ ಅವರ ವರ್ತನೆಗೆ ಅನುಗುಣವಾಗಿ ವರ್ತಿಸಿ. ಈ ಮೂಲಕ ಸಂಬಂಧದಲ್ಲಿ ಸಂತಸವನ್ನು ತನ್ನಿರಿ. ಇದು ನಿಮಗೆ ಸಂತಸ ತರಲಿದೆ. ಸಮಯವು ಪ್ರೇಮ ಜೀವನಕ್ಕೆ ಅನುಕೂಲಕರವಾಗಿದೆ. ಅದರೆ ನಿಮ್ಮ ಆಪ್ತ ವ್ಯಕ್ತಿಯು ನಿಮ್ಮ ವಿರೋಧಿಯಾಗಬಹುದು. ನಿಮ್ಮ ಮಾತಿನಲ್ಲಿ ಸಿಹಿತನ ಇರಲಿದ್ದು, ಇದು ಜನರ ಮೇಲೆ ಪ್ರಭಾವ ಬೀರಲಿದೆ. ಅಲ್ಲದೆ ನಿಮ್ಮ ಕೆಲಸದಲ್ಲಿ ಯಶಸ್ಸು ದೊರೆಯಲಿದೆ. ಅದೃಷ್ಟದ ಬಲದಿಂದ ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ. ನಿಮ್ಮ ಆತ್ಮಸ್ಥೈರ್ಯವು ಗಟ್ಟಿಯಾಗಿರಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ.
ಧನು: ಈ ವಾರ ನಿಮಗೆ ಅನುಕೂಲಕರ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ಎಲ್ಲಾದರೂ ದೂರಕ್ಕೆ ಹೋಗಲು ನಿಮಗೆ ಅವಕಾಶ ದೊರೆಯಲಿದೆ. ಇದು ನಿಮ್ಮ ಸಂಬಂಧದಲ್ಲಿ ಹೊಸತನ ತರಲಿದ್ದು ನಿಮ್ಮ ವೈಯಕ್ತಿಕ ಬದುಕನ್ನು ಗಟ್ಟಿಗೊಳಿಸಲಿದೆ. ನಿಮ್ಮ ಪ್ರೇಮದ ಜೀವನದಲ್ಲಿ ಸಾಕಷ್ಟು ಏರುಪೇರು ಕಾಣಿಸಿಕೊಳ್ಳಲಿದೆ. ನಿಮ್ಮ ಪ್ರೇಮಿಯನ್ನು ಜೀವನ ಸಂಗಾತಿಯನ್ನಾಗಿಸುವುದು ಸುಲಭದ ಕೆಲಸವಲ್ಲ. ಇದಕ್ಕಾಗಿ ನೀವು ಸಾಕಷ್ಟು ಶ್ರಮ ಪಡಬೇಕು. ಅವಸರದಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಇದು ನಿಮ್ಮನ್ನು ಸಮಸ್ಯೆಗೆ ದೂಡಬಹುದು. ಮುಖ್ಯವಾಗಿ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಕೆಲಸವಿರಲಿ ಅಥವಾ ಯಾವುದೇ ಸರ್ಕಾರಿ ಟೆಂಡರ್ ಅನ್ನು ಭರ್ತಿ ಮಾಡಲು ನೀವು ಇಚ್ಛಿಸುವುದಾದರೆ ಎಚ್ಚರಿಕೆಯಿಂದ ಹೆಜ್ಜೆ ಇಡಿ. ಸಮಸ್ಯೆಗಳು ಎದುರಾಗಬಹುದು. ಆದರೆ ನಿಮ್ಮ ಕಠಿಣ ಶ್ರಮಕ್ಕೆ ತಕ್ಕುದಾದ ಫಲ ದೊರೆಯಲಿದೆ. ಈ ವಾರ ಉದ್ಯೋಗಿಗಳಿಗೆ ಉತ್ತಮ ಫಲ ದೊರೆಯಲಿದೆ. ನಿಮ್ಮನ್ನು ಬೇರೆ ಎಲ್ಲಾದರೂ ವರ್ಗಾಯಿಸಬಹುದು. ಅಥವಾ ನೀವು ಕೆಲಸ ಮಾಡುವ ವಿಭಾಗವು ಬದಲಾಗಬಹುದು.
ಮಕರ: ಈ ವಾರದಲ್ಲಿ ನೀವು ಸಾಕಷ್ಟು ಏರುಪೇರನ್ನು ಕಾಣಬಹುದು. ವೈವಾಹಿಕ ಬದುಕು ಒತ್ತಡಕ್ಕೆ ಸಿಲುಕಬಹುದು. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಅನುಕೂಲಕರ. ನೀವು ಪರಸ್ಪರ ಅನ್ಯೋನ್ಯತೆಯನ್ನು ಸಾಧಿಸಲಿದ್ದೀರಿ. ಮನಸ್ಸಿನ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳಲಿದ್ದೀರಿ. ಕುಟುಂಬದ ವಾತಾವರಣವು ಚೆನ್ನಾಗಿರಲಿದೆ. ಉದ್ಯೋಗದ ಪರಿಸ್ಥಿತಿಯು ಚೆನ್ನಾಗಿರಲಿದೆ. ನಿಮ್ಮ ಕಠಿಣ ಶ್ರಮವು ಮುನ್ನೆಲೆಗೆ ಬರಲಿದೆ ಹಾಗೂ ಯಶಸ್ಸನ್ನು ತಂದು ಕೊಡಲಿದೆ. ವ್ಯವಹಾರದಲ್ಲಿ ತೊಡಗಿಕೊಂಡಿರುವವರು ಸರ್ಕಾರಿ ವಲಯದಿಂದ ಲಾಭ ಗಳಿಸಬಹುದು. ಆರ್ಥಿಕವಾಗಿ ಈ ವಾರ ನಿಮಗೆ ದುರ್ಬಲ ಎನಿಸಲಿದೆ. ನಿಮ್ಮ ವೆಚ್ಚದಲ್ಲಿ ಹೆಚ್ಚಳ ಉಂಟಾಗಲಿದೆ. ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳದೆ ಇದ್ದರೆ ಒಳ್ಳೆಯದು. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ ಅವರಿಗೆ ಗಮನಭಂಗದ ಸಮಸ್ಯೆ ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ವೇಳಾಪಟ್ಟಿಯನ್ನು ರೂಪಿಸಿ ಅವರು ಅಧ್ಯಯನಕ್ಕೆ ಗಮನ ನೀಡಬೇಕು. ವಾರದ ಆರಂಭದಲ್ಲಿ ಅರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ಕುಂಭ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಜೀವನದಲ್ಲಿ ಸಂತುಲನ ನೆಲೆಸಲಿದೆ. ತಿಳಿಯಾದ ಪ್ರಣಯ ಚೇಷ್ಟೆ ಇರಬಹುದು. ಆದರೆ ಸಂಬಂಧದಲ್ಲಿ ಪ್ರೇಮವು ನೆಲೆಸಲಿದೆ. ಈ ವಾರವು ಪ್ರೇಮ ಜೀವನಕ್ಕೆ ಒಳ್ಳೆಯದು. ನಿಮ್ಮ ಪ್ರೇಮಿಯ ಜೊತೆಗೆ ವಿವಾಹದ ಕುರಿತು ಮಾತುಕತೆ ನಡೆಯಬಹುದು. ನಿಮ್ಮ ಯೋಜನೆಗಳು ಯಶಸ್ವಿಯಾಗಲಿವೆ. ಆದಾಯದಲ್ಲಿ ಹೆಚ್ಚಳ ಉಂಟಾಗುವ ಕಾರಣ ನಿಮ್ಮ ಮನಸ್ಸಿನಲ್ಲಿ ಸಂತಸದ ಭಾವನೆ ನೆಲೆಸಲಿದೆ. ಈ ಸಮಯವು ನಿಮ್ಮ ಪಾಲಿಗೆ ಯಶಸ್ವಿ ಎನಿಸಲಿದೆ. ಮಾರುಕಟ್ಟೆಯಲ್ಲಿ ನಿಮ್ಮ ಕೆಲಸವು ಚೆನ್ನಾಗಿರಲಿದೆ. ಇದರಿಂದಾಗಿ ನಿಮಗೆ ಯಶಸ್ಸು ದೊರೆಯಲಿದೆ. ಈ ವಾರ ಉದ್ಯೋಗಿಗಳಿಗೆ ಉತ್ತಮ ಫಲ ದೊರೆಯಲಿದೆ. ಅನಗತ್ಯವಾಗಿ ಮಾತನಾಡಬೇಡಿ. ನಿಮ್ಮ ಕೆಲಸಕ್ಕೆ ಗಮನ ನೀಡಿ. ಆಗ ಮಾತ್ರವೇ ಈ ವಾರವನ್ನು ಚೆನ್ನಾಗಿ ಕಳೆಯಲು ಸಾಧ್ಯ. ಒಂದಷ್ಟು ಖರ್ಚುವೆಚ್ಚಗಳು ಉಂಟಾಗಬಹುದು. ಈ ವರ್ಷ ನೀವು ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಸರ್ಕಾರಿ ಸೇವೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕಾಗಿ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಮಯವು ಅನುಕೂಲಕರವಾಗಿದೆ.
ಮೀನ: ಈ ವಾರ ನಿಮಗೆ ಸಾಮಾನ್ಯವಾಗಿ ಲಾಭದಾಯಕ ಎನಿಸಲಿದೆ. ಅತ್ತೆ ಮಾವಂದಿರ ಜೊತೆಗೆ ಉತ್ತಮ ಸಂಬಂಧವು ರೂಪುಗೊಳ್ಳಲಿದೆ. ಇದರಿಂದಾಗಿ ನಿಮ್ಮ ಕೌಟುಂಬಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಸಂಬಂಧದಲ್ಲಿ ಸಾಮರಸ್ಯವನ್ನು ಕಾಪಾಡಲು ಯತ್ನಿಸಬೇಕು. ನಿಮ್ಮ ಪ್ರೇಮಿಯು ಏನಾದರೂ ವಿಷಯದ ಕುರಿತು ನಿಮ್ಮೆದುರು ಏನನ್ನಾದರೂ ಹೇಳಬಹುದು. ಅವರು ಏನಾದರೂ ವಿಷಯದ ಕುರಿತು ಗರ್ವವನ್ನು ತೋರುತ್ತಿದ್ದಾರೆ ಎಂದು ನಿಮಗೆ ಅನಿಸಬಹುದು. ಇದು ನಿಮ್ಮ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹೀಗಾಗಿ ಒಂದಷ್ಟು ತಾಳ್ಮೆ ಮತ್ತು ಶಾಂತಿಯಿಂದ ವರ್ತಿಸಿ. ಉದ್ಯೋಗದಲ್ಲಿರುವವರು ಕೆಲಸದಲ್ಲಿ ಕಠಿಣ ಶ್ರಮ ತೋರಬೇಕು. ಅಗ ಮಾತ್ರವೇ ಪ್ರಯೋಜನ ಉಂಟಾಗಲಿದೆ. ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ದೊಡ್ಡ ಲಾಭ ಉಂಟಾಗುವ ಸಾಧ್ಯತೆ ಇದೆ. ಎದುರಾಳಿಗಳ ಕುರಿತು ಎಚ್ಚರಿಕೆಯಿಂದ ಇರಿ ಹಾಗೂ ಆತ್ಮವಿಶ್ವಾಸದಿಂದ ಕೆಲಸ ಮಾಡಿ. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ವೆಚ್ಚಕ್ಕೆ ಗಮನ ನೀಡಿ. ಅನಗತ್ಯ ಪ್ರಯಾಣ ಮತ್ತು ಚಿಂತೆಯ ಕಾರಣ ನೀವು ಸಮಸ್ಯೆಗೆ ಈಡಾಗಬಹುದು.