ನವದೆಹಲಿ: ಭಾರತದಲ್ಲಿ ಆಯುಧಗಳನ್ನು ಪೂಜಿಸುವುದು ಇತರರ ನೆಲದ ಮೇಲೆ ಪ್ರಾಬಲ್ಯ ಸಾಧಿಸಲು ಅಲ್ಲ. ಸ್ವಂತ ಭೂಮಿಯ ರಕ್ಷಣೆಗಾಗಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯ ದ್ವಾರಕಾದಲ್ಲಿ ಮಂಗಳವಾರ ರಾಮ್ ಲೀಲಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ತಾಳ್ಮೆಯ ಮೂಲಕ ಸಾಮರಸ್ಯ ಕಾಪಾಡಿಕೊಳ್ಳುವ ಮಹತ್ವ ಪ್ರತಿಪಾದಿಸಿದ ಅವರು, ವಿಜಯ ದಶಮಿಯಂದು ಶಸ್ತ್ರಪೂಜೆಯ ಸಂಪ್ರದಾಯವೂ ಇದೆ. ಭಾರತದ ನೆಲದಲ್ಲಿ ಆಯುಧಗಳನ್ನು ಪೂಜಿಸುವುದು ಯಾವುದೇ ನೆಲದ ಮೇಲೆ ಅಧಿಪತ್ಯ ಸಾಧಿಸಲು ಅಲ್ಲ. ಸ್ವಂತ ಭೂಮಿಯನ್ನು ರಕ್ಷಿಸಲು ಈ ಪದ್ಧತಿ ನಡೆಯುತ್ತದೆ. ನಮ್ಮ ಶಕ್ತಿ ಪೂಜೆ ಕೇವಲ ನಮಗಾಗಿ ಅಲ್ಲ, ಇಡೀ ಜಗತ್ತಿನ ಒಳಿತಿಗೆ'' ಎಂದರು.
'ರಾವಣ ದಹನ್' ಕೇವಲ ಪ್ರತಿಕೃತಿಯ ದಹನವಾಗಬಾರದು. ಜಾತೀಯತೆ ಮತ್ತು ಪ್ರಾದೇಶಿಕತೆಯ ಹೆಸರಿನಲ್ಲಿ 'ಮಾ ಭಾರತಿ'ಯನ್ನು ವಿಭಜಿಸಲು ಪ್ರಯತ್ನಿಸುವ ಶಕ್ತಿಗಳ ದಹನವಾಗಬೇಕು ಎಂದು ಹೇಳಿದರು. ಇದೇ ವೇಳೆ ಕನಿಷ್ಠ ಒಂದು ಬಡ ಕುಟುಂಬದ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಉನ್ನತೀಕರಿಸುವುದೂ ಸೇರಿದಂತೆ 10 ಪ್ರತಿಜ್ಞೆಗಳನ್ನು ತೆಗೆದುಕೊಳ್ಳುವಂತೆ ಮೋದಿ ದೇಶದ ಜನರಿಗೆ ಕರೆ ಕೊಟ್ಟರು.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ಉಲ್ಲೇಖಿಸಿದ ಪ್ರಧಾನಿ, ರಾಮ ಮಂದಿರ ನಿರ್ಮಾಣವನ್ನು ವೀಕ್ಷಿಸಲು ನಾವು ಸಾಕಷ್ಟು ಅದೃಷ್ಟಶಾಲಿಯಾಗಿದ್ದೇವೆ. ಮುಂದಿನ ರಾಮನವಮಿಯಂದು ರಾಮಲಾಲಾ ದೇವಾಲಯದಲ್ಲಿ ಪ್ರತಿಧ್ವನಿಸುವ ಪ್ರತಿಯೊಂದು ಟಿಪ್ಪಣಿಯು ಜಗತ್ತಿಗೆ ಸಂತೋಷ ತರಲಿದೆ. ರಾಮ ಮಂದಿರದಲ್ಲಿ ನೆಲೆಸಲು ರಾಮನಿಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಶ್ರೀರಾಮ ಈಗಷ್ಟೇ ಆಗಮಿಸಲಿದ್ದಾರೆ. ಇದು ನಮ್ಮ ತಾಳ್ಮೆಯ ವಿಜಯದ ಸಂಕೇತ ಎಂದರು.
ಇದನ್ನೂ ಓದಿ: ನಾಲ್ಕು ವರ್ಷಗಳ ಬಳಿಕ ರಾಮಲೀಲಾದಲ್ಲಿ ಪ್ರಧಾನಿಯಿಂದ ರಾವಣ ದಹನ... ದೇಶದ ಜನರಿಗೆ ಮೋದಿ ದಸರಾ ಶುಭಾಶಯ