ETV Bharat / bharat

'ರಾಹುಲ್​ ಗಾಂಧಿ ಯಾತ್ರೆ ಎಫೆಕ್ಟ್​​, ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ಖಚಿತ': ಮಾಣಿಕ್​ ರಾವ್​​ ಠಾಕ್ರೆ

ತೆಲಂಗಾಣದಲ್ಲಿ 70ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ಅಖಿಲ ಭಾರತ ಕಾಂಗ್ರೆಸ್ ವೀಕ್ಷಕ ಮಾಣಿಕ್​ ರಾವ್​​ ಠಾಕ್ರೆ ವ್ಯಕ್ತಪಡಿಸಿದ್ದಾರೆ.

Manikrao Thackeray
ಮಾಣಿಕ್​ ರಾವ್​​ ಠಾಕ್ರೆ
author img

By ETV Bharat Karnataka Team

Published : Dec 3, 2023, 9:39 AM IST

Updated : Dec 3, 2023, 10:00 AM IST

ಹೈದರಾಬಾದ್ (ತೆಲಂಗಾಣ): ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಇಂದು ಬೆಳಗ್ಗೆ 8 ಗಂಟೆಯಿಂದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಶುರುವಾಗಿದೆ. ತೆಲಂಗಾಣದ 119 ಕ್ಷೇತ್ರಗಳ ಫಲಿತಾಂಶವೂ ಇಂದು ಹೊರಬೀಳಲಿದೆ. ತೆಲಂಗಾಣದಲ್ಲಿ ಅಖಿಲ ಭಾರತ ಕಾಂಗ್ರೆಸ್ ವೀಕ್ಷಕ ಮಾಣಿಕ್​ ರಾವ್​​ ಠಾಕ್ರೆ (Manikrao Thackeray) 70ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆಗಳೂ ಸಹ ಇದನ್ನೇ ಸೂಚಿಸಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮಾಣಿಕ್ ರಾವ್​​ ಠಾಕ್ರೆ, "ನಮ್ಮ ಪಕ್ಷದ ಮುಖ್ಯಸ್ಥರಾದ ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಅವರು ನಮ್ಮ ನೀತಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಹೆಚ್ಚಿನ ಪ್ರಭಾವ ಬೀರಿದೆ. ಅದೇ ಕೆಸಿಆರ್ ಅವರು ತೆಲಂಗಾಣದಲ್ಲಿ ರಾಜನಂತೆ ವರ್ತಿಸಿದರು. ಕಾಂಗ್ರೆಸ್ ತೆಲಂಗಾಣ ಜನತೆ ಮೇಲೆ ಪ್ರಭಾವ ಬೀರಿದೆ. ಹಾಗಾಗಿ ಕಾಂಗ್ರೆಸ್ ಬರಲಿ ಎಂದು ಎಲ್ಲರೂ ಬಯಸಿದ್ದಾರೆ. ತೆಲಂಗಾಣ ಉತ್ತಮ ರಾಜ್ಯವಾಗುತ್ತದೆ ಎಂದು ಜನ ಬಯಸಿದ್ದರು, ಆದರೆ, ಅದು ಈವರೆಗೆ ಸಂಭವಿಸಿಲ್ಲ. ಕಾಂಗ್ರೆಸ್ 70ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಸಮೀಕ್ಷೆಗಳೂ ಕೂಡ ಅದನ್ನೇ ಹೇಳಿವೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್​ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಮಾಣಿಕ್​ ರಾವ್​​ ಠಾಕ್ರೆ, ಪ್ರಸ್ತುತ ಅಧಿಕಾರದಲ್ಲಿರುವ ಸಿಎಂ ಕೆಸಿಆರ್ ವಿರುದ್ಧ ವಾಗ್ದಾಳಿ ಕೂಡ ನಡೆಸಿದರು. ಕಾಂಗ್ರೆಸ್ ಜನರನ್ನು ತಲುಪಿದೆ. ಜನರೊಂದಿಗೆ ಸಂಪರ್ಕ ಸಾಧಿಸಿದೆ. ಜನರ ಗಮನ ಪಕ್ಷದತ್ತ ನೆಟ್ಟಿದೆ ಎಂದು ತಿಳಿಸಿದರು.

ಇದನ್ನೂ ಓದಿ: ತೆಲಂಗಾಣ ವಿಧಾನಸಭೆ ಚುನಾವಣೆ: ಕಾಂಗ್ರೆಸ್​ 22 ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ, ಬಿಆರ್​ಎಸ್​ಗೆ ಭಾರಿ ಹಿನ್ನಡೆ

''ಕೆಸಿಆರ್ ಜಾಹೀರಾತಿಗೆ ಬಹಳಷ್ಟು ಹಣ ಖರ್ಚು ಮಾಡಿದ್ದಾರೆ. ತಮ್ಮ ತೋಟದ ಮನೆಯಲ್ಲಿ ಕುಳಿತು ಸರ್ಕಾರ ನಡೆಸಿದ್ದಾರೆ. ಈವರೆಗೆ ಯಾರಿಗೂ ಉದ್ಯೋಗ ನೀಡಿಲ್ಲ. ಆದರೆ, ಕಾಂಗ್ರೆಸ್​ ಎಲ್ಲರೊಂದಿಗೆ ಕುಳಿತು ಮಾತನಾಡಿ ಪಕ್ಷವನ್ನು ಮುನ್ನಡೆಸಿದ್ದೇವೆ. ಎಲ್ಲ ಕೆಲಸಗಳನ್ನು ಚಿಂತನಾಶೀಲವಾಗಿ ಮಾಡಿ, ಕಾರ್ಯಕ್ರಮ ರೂಪಿಸಲಾಗಿದೆ. ಉತ್ತಮ ವಾತಾವರಣ ಸೃಷ್ಟಿಸಲಾಗಿದೆ. ಜನರ ಗಮನವನ್ನು ಕಾಂಗ್ರೆಸ್​ನತ್ತ ಕೇಂದ್ರೀಕರಿಸುವ ಕೆಲಸ ನಡೆದಿದೆ. ಹಾಗಾಗಿ ನಾವು ತೆಲಂಗಾಣದಲ್ಲಿ ಗೆಲ್ಲಲಿದ್ದೇವೆ" ಎಂದು ಹೇಳಿದರು.

ಇದನ್ನೂ ಓದಿ: ನಾಲ್ಕು ವಿಧಾನಸಭೆಗಳ ಫಲಿತಾಂಶ: 2024ರ ಚುನಾವಣೆಗೂ ಮುನ್ನ ಬಿಜೆಪಿ, ಕಾಂಗ್ರೆಸ್‌ಗೆ ಅಗ್ನಿಪರೀಕ್ಷೆ

ತೆಲಂಗಾಣದ 199 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಸೇರಿ 109 ಪಕ್ಷಗಳ 2,290 ಅಭ್ಯರ್ಥಿಗಳ ಭವಿಷ್ಯ ಇಂದು ಮತ ಎಣಿಕೆಯಲ್ಲಿ ಬಹಿರಂಗವಾಗಲಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆ ಇದೆ.

Last Updated : Dec 3, 2023, 10:00 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.