ಲೇಹ್(ಲಡಾಖ್): ಚೀನಾದ ಪಡೆಗಳು ಪೂರ್ವ ಲಡಾಖ್ ಮತ್ತು ನಾರ್ದರ್ನ್ ಫ್ರಂಟ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆ ಆಗುತ್ತಿವೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಆತಂಕ ವ್ಯಕ್ತಪಡಿಸಿದ್ದಾರೆ.
ಮಹಾತ್ಮ ಗಾಂಧಿ ಅವರ 152ನೇ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಲೇಹ್ ಟೌನ್ನಲ್ಲಿ ವಿಶ್ವದ ಅತಿ ದೊಡ್ಡ ರಾಷ್ಟ್ರ ಧ್ವಜವನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಗಡಿಯಲ್ಲಿ ಚೀನಾ ಹೆಚ್ಚಾಗಿ ಸೇನೆ ನಿಯೋಜಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
-
#WATCH World's largest Khadi national flag installed in Leh town, inaugurated by Ladakh Lieutenant Governor RK Mathur
— ANI (@ANI) October 2, 2021 " class="align-text-top noRightClick twitterSection" data="
Army Chief General Manoj Mukund Naravane also present pic.twitter.com/6lNxp0lM0n
">#WATCH World's largest Khadi national flag installed in Leh town, inaugurated by Ladakh Lieutenant Governor RK Mathur
— ANI (@ANI) October 2, 2021
Army Chief General Manoj Mukund Naravane also present pic.twitter.com/6lNxp0lM0n#WATCH World's largest Khadi national flag installed in Leh town, inaugurated by Ladakh Lieutenant Governor RK Mathur
— ANI (@ANI) October 2, 2021
Army Chief General Manoj Mukund Naravane also present pic.twitter.com/6lNxp0lM0n
ಇದರ ಜೊತೆಗೆ ಭಯೋತ್ಪಾದನಾ ಸಂಬಂಧಿ ಚಟುವಟಿಕೆಗಳಿಗೆ ಪಾಕಿಸ್ತಾನ ಬೆಂಬಲ ನೀಡಬಾರದು ಎಂದಿರುವ ನರವಾಣೆ, ಈ ಕುರಿತು ಪ್ರತಿ ವಾರ ಮಾತುಕತೆಗಳನ್ನು ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಫೆಬ್ರವರಿಯಿಂದ ಜೂನ್ ಅಂತ್ಯದವರೆಗೆ ಪಾಕ್ನಿಂದ ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ಗಮನಾರ್ಹವಾಗಿ ಕಡಿಮೆಯಾಗಿವೆ. ಆದರೆ ಒಳನುಸುಳುವಿಕೆ ಪ್ರಕರಣಗಳು ಹೆಚ್ಚಾಗಿವೆ. ಈಗಿನ ಕೆಲವು ದಿನಗಳಲ್ಲಿ ಎರಡು ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ಕಾಣಿಸಿಕೊಂಡಿವೆ ಎಂದಿದ್ದಾರೆ.
ಕೆ-9 ವಜ್ರ ಟ್ಯಾಂಕರ್ಗಳ ಬಗ್ಗೆ ಮಾತನಾಡಿದ ಅವರು, ಈ ಟ್ಯಾಂಕರ್ಗಳು ಲಡಾಖ್ನಂಥಹ ಉನ್ನತ ಪ್ರದೇಶಗಳಲ್ಲೂ ಕೂಡಾ ಕೆಲಸ ಮಾಡುತ್ತವೆ. ಈ ಗನ್ಗಳನ್ನು ಎಲ್ಲಾ ರೆಜಿಮೆಂಟ್ಗಳಿಗೂ ನೀಡುತ್ತೇವೆ. ಇವು ನಿಜವಾಗಲೂ ತುಂಬಾ ಉಪಯೋಗಕಾರಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಹದ್ದೂರರ 118ನೇ ಜನ್ಮದಿನ: ಶಾಸ್ತ್ರಿಗಳ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರಗಳು ಇವು..