ಮುಂಬೈ : ಭಾರತದಲ್ಲಿ ಉಲ್ಬಣಗೊಳ್ಳುತ್ತಿರುವ ಸಾಂಕ್ರಾಮಿಕದ ವಿನಾಶಕಾರಿ ಪರಿಣಾಮವು ದೆಹಲಿಯಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಆದರೆ, ಹೆಚ್ಚಿನ ಜನಸಂಖ್ಯಾ ಸಾಂದ್ರತೆ ಹೊಂದಿರುವ ಮುಂಬೈ, ಎರಡನೇ ತರಂಗ ಹೆಚ್ಚಾದಂತೆ ಹಾಸಿಗೆಗಳು ಮತ್ತು ಆಮ್ಲಜನಕದ ಕೊರತೆ ಎದುರಿಸಿತು.
ಕನಿಷ್ಟ 12.3 ಮಿಲಿಯನ್ ಜನಸಂಖ್ಯೆ ಹೊಂದಿರುವ ನಗರವು ಉತ್ತಮವಾಗಿ ಕೊರೊನಾ ನಿಭಾಯಿಸಿ, ಸುಪ್ರೀಂಕೋರ್ಟ್ ಮತ್ತು ಬಾಂಬೆ ಹೈಕೋರ್ಟ್ ಎರಡರಿಂದಲೂ "ಮುಂಬೈ ಮಾದರಿ" ಎಂಬ ಶ್ಲಾಘನೆ ಗಳಿಸಲು ಸಾಧ್ಯವಾಯಿತು.
ಏಪ್ರಿಲ್‌ನಲ್ಲಿ 11,000ಕ್ಕಿಂತ ಹೆಚ್ಚು ದೈನಂದಿನ ಪ್ರಕರಣಗಳಿಗೆ ಹೋಲಿಸಿದರೆ, ಮುಂಬೈ ಸೋಮವಾರ 1,794 ಪ್ರಕರಣ ವರದಿಯಾಗಿವೆ.
ಈ ನಿಟ್ಟಿನಲ್ಲಿ ಈಟಿವಿ ಭಾರತದ ಜತೆ ಮಾತನಾಡಿದ ಬಿಎಂಸಿಯ ಪುರಸಭೆ ಹೆಚ್ಚುವರಿ ಆಯುಕ್ತ ಸುರೇಶ್ ಕಕನಿ, "ವೈದ್ಯಕೀಯ ಸೌಲಭ್ಯಗಳ ಕೊರತೆಯ ಮಧ್ಯೆ ಮುಂಬೈ ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ಯಶಸ್ವಿಯಾಗಿದೆ ಮತ್ತು ನಗರವು ಕೋವಿಡ್ -19 ಮೂರನೇ ತರಂಗಕ್ಕೆ ಸಜ್ಜುಗೊಂಡಿದೆ" ಎಂದು ಹೇಳಿದರು.
"ಮುಂಬೈ ಕೋವಿಡ್ ರೋಗಿಗಳನ್ನು ಪತ್ತೆಹಚ್ಚುವ, ಪರೀಕ್ಷಿಸುವ ಮತ್ತು ಚಿಕಿತ್ಸೆ ನೀಡುವ ಮೂಲ ತತ್ವವನ್ನು ಅನುಸರಿಸಿದೆವು. ಸ್ವ್ಯಾಬ್ ಸಂಗ್ರಹಕ್ಕಾಗಿ ಶಾಪಿಂಗ್ ಮಾಲ್‌ಗಳು, ಸಬ್ಜಿ ಮಂಡಿ, ಮೀನು ಮಾರುಕಟ್ಟೆ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ನಾವು ಕೇಂದ್ರಗಳನ್ನು ತೆರೆದಿದ್ದೇವೆ.
ಅಕ್ಟೋಬರ್ ಮತ್ತು ಫೆಬ್ರವರಿ ನಡುವೆ, ಮುಂಬೈನಲ್ಲಿ ಕೋವಿಡ್-19 ಪ್ರಕರಣಗಳು ಕಡಿಮೆಯಾದಾಗ, ಈ ತಾತ್ಕಾಲಿಕ ಸೌಲಭ್ಯಗಳನ್ನು ಕಿತ್ತು ಹಾಕಬೇಕೆಂದು ನಮಗೆ ಸೂಚಿಸಲಾಯಿತು.
ಆದರೆ, ಮಾರ್ಚ್ 31ರವರೆಗೆ ಅದರೊಂದಿಗೆ ಮುಂದುವರಿಯಲು ನಾವು ನಿರ್ಧರಿಸಿದ್ದೇವೆ. ಅದು ಕಾರ್ಯನಿರ್ವಹಿಸಲು ನಾವು ಸ್ವಲ್ಪ ಹಣವನ್ನು ಖರ್ಚು ಮಾಡಬೇಕಾಗಿದ್ದರೂ ಸಹ ಅವುಗಳನ್ನು ನಿರ್ವಹಿಸುತ್ತೇವೆ" ಎಂದು ಹೇಳಿದರು.
"ನಾವು ರೆಮ್ಡೆಸಿವಿರ್ನಂತಹ ಔಷಧಿಗಳ ಕೊರತೆಯನ್ನು ನಿರೀಕ್ಷಿಸಿದ್ದೇವೆ ಮತ್ತು ಅದರಲ್ಲಿ 2 ಲಕ್ಷ ಬಾಟಲುಗಳನ್ನು ಸಂಗ್ರಹಿಸಲು ಟೆಂಡರ್ ಕರೆದಿದ್ದೇವೆ. ಆದ್ದರಿಂದ, ಮುಂಬೈನ ಯಾವುದೇ ಸಾರ್ವಜನಿಕ ಆಸ್ಪತ್ರೆಯಲ್ಲಿ ರೆಮ್ಡೆಸಿವಿರ್ ಕೊರತೆಯಿಲ್ಲ" ಎಂದು ಹೇಳಿದರು.