ಕೋಲ್ಕತ್ತಾ(ಪಶ್ಚಿಮ ಬಂಗಾಳ): ಇಲ್ಲಿನ ವಿಧಾನಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಶನಿವಾರ ಮುಕ್ತಾಯಗೊಂಡ ನಂತರ ಇವಿಎಂಗಳಿಗೆ ಮೊಹರು ಹಾಕುತ್ತಿದ್ದಾಗ ಡೊಮ್ಜೂರ್ನಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ.
ಈ ಕುರಿತು ಮಾತನಾಡಿದ ಡೊಮ್ಜೂರ್ನ ಬಿಜೆಪಿ ಅಭ್ಯರ್ಥಿ ರಾಜೀಬ್ ಬ್ಯಾನರ್ಜಿ, ಇದ್ದಕ್ಕಿದ್ದಂತೆ ಕೆಲವು ಟಿಎಂಸಿ ಗೂಂಡಾಗಳು ನಮ್ಮ ಜನರ ಮೇಲೆ ಹಲ್ಲೆ ನಡೆಸಿದ್ದಾರೆ. ದಾಳಿಕೋರರು ಇತರೆ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ 396 ವಿಧಾನಸಭಾ ಕ್ಷೇತ್ರಗಳ ಪೈಕಿ ನಿನ್ನೆ 4ನೇ ಹಂತದಲ್ಲಿ 44 ಕ್ಷೇತ್ರಗಳಿಗೆ ವೋಟಿಂಗ್ ಆಗಿದ್ದು, ಶೇ. 76.16 ರಷ್ಟು ಮತದಾನವಾಗಿದೆ.
ನಾಲ್ಕನೇ ಸುತ್ತಿನ ಮತದಾನದ ಸಂದರ್ಭದಲ್ಲಿ ಕೂಚ್ ಬೆಹಾರ್‌ದಲ್ಲಿ ಭಾರಿ ಹಿಂಸಾಚಾರ ನಡೆದಿದೆ. ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ನಾಲ್ವರು ಟಿಎಎಂಸಿ ಕಾರ್ಯಕರ್ತರನ್ನು, ಸಿಆರ್‌ಪಿಎಫ್ ಯೋಧರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಶಾಂತಿಯುತ ಮತದಾನ ನಡೆಯುತ್ತಿದ್ದಾಗ ಸಿಆರ್‌ಪಿಎಫ್ ಯೋಧರು ಗುಂಡು ಹಾರಿಸಿದ್ದೇಕೆ ಎಂದು ಟಿಎಂಸಿ ಪ್ರಶ್ನಿಸಿದೆ.