ಮಧ್ಯಪ್ರದೇಶ: ಬಾಂಧವಗಂದ ಮಗಧಿ ವಲಯದಲ್ಲಿರುವ ರಾಜ್‌ಬೆಹರ ಅಣೆಕಟ್ಟಿನ ಬಳಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗೆ ಹುಲಿಯೊಂದು ಗೋಡೆ ಮೇಲೆ ನಡೆದುಕೊಂಡು ಹೋಗಿರುವ ದೃಶ್ಯ ಸೆರೆಯಾಗಿದೆ.
ಹುಲಿಯ ಚಲನವಲನ ಚಿತ್ರಿಸಬೇಕು ಎಂಬ ಆಸೆ ಎಲ್ಲ ವನ್ಯಜೀವಿ ಛಾಯಾಗ್ರಾಹಕನ ಕನಸು. ಹಾಗೆಯೇ ಹುಲಿರಾಯ ಛಾಯಾಗ್ರಾಹಕನ ಕನಸನ್ನು ನನಸು ಮಾಡಿದ್ದಾನೆ.
ಜೂನ್ 9ರ ಸಂಜೆ ಸಫಾರಿ ಸಮಯದಲ್ಲಿ ಪ್ರವಾಸಿಗರಿಗೆ ಹುಲಿ ನೋಡಬೇಕೆಂಬ ಆಸೆ ಇತ್ತು. ಇದೇ ವೇಳೆ, ಹುಲಿ ಒಂದು ಕ್ಷಣ ನಿಂತು ಪ್ರವಾಸಿಗರ ಆಸೆಯನ್ನು ವ್ಯಾಘ್ರ ಈಡೇರಿಸಿದೆ.