ಸಿಂಗ್ರೌಲಿ, ಮಧ್ಯಪ್ರದೇಶ: ಉಷ್ಣವಿದ್ಯುತ್ ಸ್ಥಾವರದ ಚಿಮಣಿಯಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಕಾರ್ಮಿಕರನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ರಕ್ಷಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಸಿಂಗ್ರೌಲಿಯಲ್ಲಿರುವ ವಿಂಧ್ಯಾಚಲ ಸೂಪರ್ ಥರ್ಮಲ್ ಪವರ್ ಸ್ಟೇಷನ್ನಲ್ಲಿ ಈ ಘಟನೆ ಜರುಗಿದ್ದು, ಚಿಮಣಿಯಲ್ಲಿನ ಮೆಕ್ಯಾನಿಕಲ್ ಲಿಫ್ಟ್ನ ದೋಷದಿಂದಾಗಿ ಇಬ್ಬರು ಕಾರ್ಮಿಕರು, ಸುಮಾರು 50 ಮೀಟರ್ ಎತ್ತರದಲ್ಲಿ ಸಿಲುಕಿದ್ದರು.
ಈ ವೇಳೆ ಸ್ಥಳಕ್ಕೆ ಧಾವಿಸಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಕಾರ್ಮಿಕರನ್ನು ರಕ್ಷಿಸಿದ್ದಾರೆ.