ಅಮೃತಸರ (ಪಂಜಾಬ್) : ವಾರಿಸ್ ಪಂಜಾಬ್ ಸಂಘಟನೆಯ ಮುಖಂಡ ಅಮೃತಪಾಲ್ ಸಿಂಗ್ ಅವರ ಸಹೋದ್ಯೋಗಿ ತುಫಾನ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿರುವ ಕ್ರಮವನ್ನು ಖಂಡಿಸಿ ನಡೆದ ಭಾರಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಅಪಾರದ ಪ್ರಮಾಣದ ಕಾರ್ಯಕರ್ತರನ್ನು ಚದುರಿಸಲು ನಡೆದ ಕಾರ್ಯಾಚರಣೆ ವೇಳೆ ಹಿಂಸಾಚಾರ ಭುಗಿಲೆದ್ದಿದೆ. ಅಮೃತಪಾಲ್ ಸಿಂಗ್ ಬೆಂಬಲಿಗರ ದಾಳಿಯಿಂದಾಗಿ ಹಲವು ಪೊಲೀಸರು ಗಾಯಗೊಂಡಿದ್ದಾರೆ.
ಅಪಾರ ಪ್ರಮಾಣದ ಬೆಂಬಲಿಗರೊಂದಿಗೆ ಅಜ್ನಾಲ್ ಪೊಲೀಸ್ ಠಾಣೆಯನ್ನು ಸುತ್ತುವರಿದು ವಾರಿಸ್ ಸಂಘಟನೆ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಅಮೃತಸರದ ಅಜ್ನಾಲಾ ಪಿಎಸ್‌ನ ಹೊರಗೆ 'ವಾರಿಸ್ ಪಂಜಾಬ್ ದೇ' ಮುಖ್ಯಸ್ಥ ಅಮೃತಪಾಲ್ ಸಿಂಗ್ ಬೆಂಬಲಿಗರು ಕತ್ತಿಗಳು ಮತ್ತು ಬಂದೂಕುಗಳೊಂದಿಗೆ ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ ಮುನ್ನುಗ್ಗಿದ್ದಾರೆ. ಅಮೃತಪಾಲ್ ಸಿಂಗ್ ಆಪ್ತ ಸಹಾಯಕ ಲವ್‌ಪ್ರೀತ್ ತೂಫಾನ್ ಬಂಧನದ ವಿರುದ್ಧ ಪ್ರತಿಭಟಿಸಲು ಅವರು ಪಿಎಸ್ ಹೊರಗೆ ಬೆಳಗ್ಗೆಯಿಂದಲೇ ಜಮಾಯಿಸಿದ್ದರು.
-
#WATCH |Amritsar | 'Waris Punjab De' chief Amritpal Singh says, "...FIR registered only with a political motive. If they don't cancel the case in 1hr, Admin will be responsible for whatever happens next...They think we can't do anything, so this show of strength was necessary..." pic.twitter.com/Cl5Tz5b9wS
— ANI (@ANI) February 23, 2023 " class="align-text-top noRightClick twitterSection" data="
">#WATCH |Amritsar | 'Waris Punjab De' chief Amritpal Singh says, "...FIR registered only with a political motive. If they don't cancel the case in 1hr, Admin will be responsible for whatever happens next...They think we can't do anything, so this show of strength was necessary..." pic.twitter.com/Cl5Tz5b9wS
— ANI (@ANI) February 23, 2023#WATCH |Amritsar | 'Waris Punjab De' chief Amritpal Singh says, "...FIR registered only with a political motive. If they don't cancel the case in 1hr, Admin will be responsible for whatever happens next...They think we can't do anything, so this show of strength was necessary..." pic.twitter.com/Cl5Tz5b9wS
— ANI (@ANI) February 23, 2023
ಪ್ರತಿಭಟನೆಗೂ ಮುನ್ನ ಮಾತನಾಡಿದ ವಾರಿಸ್ ಪಂಜಾಬ್ ಸಂಘಟನೆಯ ಮುಖಂಡ ಅಮೃತಪಾಲ್ ಸಿಂಗ್, ತಮ್ಮ ಸಹಚರ ತುಫಾನ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಒಂದು ಗಂಟೆಯಲ್ಲಿ ಆತನ ವಿರುದ್ಧದ ಎಫ್ಐಆರ್ ರದ್ದು ಮಾಡದಿದ್ದರೆ, ಮುಂದಾಗುವ ಪರಿಣಾಮಗಳಿಗೆ ನೀವೇ ಹೊಣೆ ಎಂದು ಎಚ್ಚರಿಕೆ ನೀಡಿದ್ದರು.
ಅಕ್ರಮ ಕರಪತ್ರಗಳ ರದ್ಧತಿಗೆ ಆಗ್ರಹ : ಇಂದು ನಾನು ಸುಮಾರು 150 ಸಹೋದ್ಯೋಗಿಗಳ ಗುಂಪಿನೊಂದಿಗೆ ಅಜ್ನಾಲಾವನ್ನು ತೊರೆಯುತ್ತಿದ್ದೇನೆ. ಅಲ್ಲಿ ತನ್ನ ಸಹೋದ್ಯೋಗಿ ತುಫಾನ್ ಸಿಂಗ್‌ಗೆ ಅಕ್ರಮವಾಗಿ ಚಿತ್ರಹಿಂಸೆ ನೀಡುತ್ತಿರುವುದನ್ನು ನಿಲ್ಲಿಸುವಂತೆ ಪೊಲೀಸ್ ಆಡಳಿತಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು. ಖಾಲಿ ಪೇಪರ್ ಮೇಲೆ ಸಹೋದ್ಯೋಗಿಯ ಸಹಿ ಮಾಡಿಸಿಕೊಂಡು ಚಿತ್ರಹಿಂಸೆ ನೀಡಲಾಗುತ್ತಿದೆ. ಈ ರೀತಿಯ ಹಿಂಸೆಯನ್ನು ನಿಲ್ಲಿಸದಿದ್ದರೆ ಸಂಘಟನೆಯು ತನ್ನ ಯೋಜನೆಯ ಪ್ರಕಾರ ಕೆಲಸ ಮಾಡಬೇಕಾಗುತ್ತದೆ ಎಂದಿದ್ದಾರೆ. ಮತ್ತೊಂದೆಡೆ ಬಿಯಾಸ್ ಸೇತುವೆಯ ಮೇಲೆ ಸಂಗತ್ ನಿಲ್ಲಿಸಲಾಗುತ್ತಿದೆ ಮತ್ತು ಸಚ್ಖಂಡ್ ಶ್ರೀ ಹರ್ಮಂದಿರ್ ಸಾಹಿಬ್ ತಲುಪುವ ಸಂಘಟನೆಗಳಿಗೆ ಪೊಲೀಸ್ ಆಡಳಿತವು ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ತಮ್ಮ ಹಾಗೂ ಸಹೋದ್ಯೋಗಿಗಳ ವಿರುದ್ಧದ ಕಾನೂನು ಬಾಹಿರ ಕ್ರಮಗಳನ್ನು ನಿಲ್ಲಿಸದೇ ಇದ್ದರೆ, ಪ್ರತಿಭಟನೆ ನಡೆಸಿ ಪರಿಹಾರ ಕಂಡುಕೊಳ್ಳುವುದಾಗಿ ಅಮೃತಪಾಲ್ ಎಚ್ಚರಿಸಿದ್ದಾರೆ. ಇದಲ್ಲದೇ ಈ ಸಂಬಂಧ ಪೊಲೀಸ್ ತನಿಖಾಧಿಕಾರಿಯೊಂದಿಗೆ ಮಾತನಾಡಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಇದೀಗ ಅಮೃತಪಾಲ್ ಸಿಂಗ್ ಹಾಗೂ ಅವರು ಬೆಂಬಲಿಗರು ಪೊಲೀಸ್ ಠಾಣೆಯನ್ನು ಸುತ್ತುವರೆದಿರುವ ವಿಡಿಯೋಗಳು ಸಹ ವೈರಲ್ ಆಗುತ್ತಿವೆ. ಸಿಟ್ಟಿಗೆದ್ದ ಸಂಘಟನೆಯ ಕಾರ್ಯಕರ್ತರು ಪೊಲೀಸರ ಮೇಲೆ ತೀಕ್ಷ್ಣವಾದ ಪದಗಳನ್ನು ಬಳಸಿದ್ದಾರೆ.
ಕೇಸ್ ರದ್ದು ಮಾಡದಿದ್ದರೆ ಪರಿಣಾಮ ನೆಟ್ಟಗಿರಲ್ಲ: ರಾಜಕೀಯ ದುರುದ್ದೇಶದಿಂದ ಎಫ್ಐಆರ್ ದಾಖಲಿಸಲಾಗಿದೆ. ಒಂದು ಗಂಟೆಯಲ್ಲಿ ಪ್ರಕರಣವನ್ನು ಕೈಬಿಡದಿದ್ದರೆ, ಮುಂದಿನ ಎಲ್ಲ ಘಟನೆಗಳಿಗೆ ನೀವೇ ಹೊಣೆ ಎಂದು ಪೊಲೀಸ್ ಅಧಿಕಾರಿಗಳಿಗೆ ಅಮೃತಪಾಲ್ ಸಿಂಗ್ ಎಚ್ಚರಿಕೆ ಕೂಡಾ ನೀಡಿದ್ದಾರೆ. ನಮ್ಮ ಬೇಡಿಕೆ ಈಡೇರಿಸದೇ ಇದ್ದರೆ ಇಲ್ಲಿ ಸೇರಿರುವ ಜನರನ್ನು ತಡೆಯುವುದು ಅಸಾಧ್ಯ, ಆಗ ನಾವೂ ಏನೂ ಮಾಡಲು ಸಾಧ್ಯವಿಲ್ಲ. ಈ ಶಕ್ತಿ ಪ್ರದರ್ಶನ ಅಗತ್ಯವಾಗಿತ್ತು ಎಂದು ಅಮೃತಪಾಲ್ ಸಿಂಗ್ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದಾರೆ.
30 ಜನರ ವಿರುದ್ಧ ಕೇಸ್ ದಾಖಲು: ಅಮೃತಪಾಲ್ ಸಿಂಗ್ ಬೆಂಬಲಿಗರು ಪೊಲೀಸ್ ಠಾಣೆಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು, ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೇ ಈ ವೇಳೆ ಹಲವು ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಸಂಘಟನೆಯವರು ಬಂದೂಕುಗಳು, ಕತ್ತಿಗಳು ಮತ್ತು ಕೋಲುಗಳೊಂದಿಗೆ ಪೊಲೀಸ್ ಠಾಣೆಯನ್ನು ಸುತ್ತುವರೆದಿದ್ದಾರೆ. ಅವರನ್ನು ತಡೆಯಲು ಪೊಲೀಸರು ಬ್ಯಾರಿಕೇಡ್ ಹಾಕಿದಾಗ ಅದನ್ನು ಮುರಿದು ಠಾಣೆಗೆ ನುಗ್ಗಿದ್ದಾರೆ. ಈ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಅಮೃತಪಾಲ್ ಅವರ ಸಹಚರ ತುಫಾನ್ ಸಿಂಗ್ ಸೇರಿದಂತೆ ಒಟ್ಟು 30 ಜನರ ವಿರುದ್ಧ ಅಮೃತಸರದ ಅಜ್ನಾಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬಹುಕೋಟಿ ವಂಚಕ ಸುಕೇಶ್ ಜೈಲಿನ ಕೊಠಡಿಯಲ್ಲಿ ಐಷಾರಾಮಿ ವಸ್ತುಗಳು ಪತ್ತೆ