ETV Bharat / bharat

ಪ್ರಾದೇಶಿಕ ಪಕ್ಷಗಳು VS ಬಿಜೆಪಿ: 6 ರಾಜ್ಯದ 7 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ, ಮತದಾನ

ದೇಶದ ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮೂರು ದಿನಗಳ ನಂತರ ಫಲಿತಾಂಶ ಘೋಷಣೆಯಾಗಲಿದೆ.

ಉಪಚುನಾವಣೆ
election
author img

By

Published : Nov 3, 2022, 8:07 AM IST

ನವದೆಹಲಿ: ಆರು ರಾಜ್ಯಗಳಲ್ಲಿ ಖಾಲಿ ಇರುವ ಏಳು ವಿಧಾನಸಭೆ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದೆ. ಮತದಾನ ಪ್ರಕ್ರಿಯೆ ಬೆಳಗ್ಗೆ 7 ಗಂಟೆಯಿಂದ ಪ್ರಾರಂಭಗೊಂಡಿದೆ. ಮಹಾರಾಷ್ಟ್ರದ ಅಂಧೇರಿ ಪೂರ್ವ, ತೆಲಂಗಾಣದ ಮುನುಗೋಡು, ಬಿಹಾರದ ಗೋಪಾಲ್‌ಗಂಜ್ ಮತ್ತು ಮೊಕಾಮಾ, ಹರಿಯಾಣದ ಆದಂಪುರ, ಉತ್ತರ ಪ್ರದೇಶದ ಗೋಲಾ ಗೋಕರನಾಥ್ ಮತ್ತು ಒಡಿಶಾದ ಧಮ್‌ನಗರ ಕ್ಷೇತ್ರಗಳಿಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ.

ಮತದಾನದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸಕಲ ಸಿದ್ಧತೆ ಕೈಗೊಂಡಿದೆ. ಹೆಚ್ಚಿನ ಭದ್ರತೆಗಾಗಿ ಪೊಲೀಸರು ಮತ್ತು ಮೀಸಲು ಪಡೆಯ ತುಕಡಿಗಳನ್ನು ನಿಯೋಜಿಲಾಗಿದೆ. ಚುನಾವಣಾ ಅಕ್ರಮಗಳು ನಡೆಯದಂತೆ ಕೇಂದ್ರ ಚು.ಆಯೋಗ ಕಟ್ಟೆಚ್ಚರ ವಹಿಸಿದೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ಹರಿಯಾಣದಲ್ಲಿ 22 ಅಭ್ಯರ್ಥಿಗಳು ಕಣಕ್ಕೆ: ಹರಿಯಾಣದ ಆದಂಪುರ ಕ್ಷೇತ್ರದ ಉಪಚುನಾವಣೆಗೆ ಒಟ್ಟು 22 ಅಭ್ಯರ್ಥಿಗಳು (ಎಲ್ಲ ಪುರುಷರು) ಕಣದಲ್ಲಿದ್ದಾರೆ. ಹಿಸಾರ್‌ನಿಂದ ಮೂರು ಬಾರಿ ಸಂಸದರಾಗಿರುವ ಕೇಂದ್ರ ಸಚಿವ ಜೈ ಪ್ರಕಾಶ್ ಅವರು ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದು, ಸತ್ಯೇಂದರ್ ಸಿಂಗ್ ಅವರನ್ನು ಆಮ್ ಆದ್ಮಿ ಪಕ್ಷ (ಎಎಪಿ) ಕಣಕ್ಕಿಳಿಸಿದೆ. ಮತ್ತೊಂದೆಡೆ, ಬಿಜೆಪಿ ಹಾಲಿ ಶಾಸಕ ಕುಲದೀಪ್ ಬಿಷ್ಣೋಯ್ ಅವರ ಪುತ್ರ ಭವ್ಯ ಅವರನ್ನ ಚುನಾವಣಾ ಕಣಕ್ಕಿಳಿಸಿದೆ.

ಇದನ್ನೂ ಓದಿ: ಕೊಳ್ಳೇಗಾಲ ನಗರಸಭೆ ಉಪಚುನಾವಣೆ: ಶಾಸಕ ಎನ್ ಮಹೇಶ್ ಕಮಾಲ್ - 7 ಅನರ್ಹರಲ್ಲಿ 6 ಮಂದಿ ಜಯಭೇರಿ

ಉಪಚುನಾವಣೆಯ ಗೆಲುವು ವಿಧಾನಸಭೆಗಳಲ್ಲಿ ಆಯಾ ಪಕ್ಷಗಳ ಸ್ಥಾನದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೂ ಬಿಜೆಪಿಯನ್ನು ಮಣಿಸಲು ಪ್ರಾದೇಶಿಕ ಪಕ್ಷಗಳು ಯೋಜನೆ ರೂಪಿಸಿವೆ. ನವೆಂಬರ್ 6ರ ಭಾನುವಾರ ಮತ ಎಣಿಕೆ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.