ETV Bharat / bharat

ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣ: ಸಿಬಿಐಯಿಂದ ಆಂಧ್ರ ಸಿಎಂ ಒಎಸ್‌ಡಿ & ಮನೆಯ ಸಹಾಯಕರ ವಿಚಾರಣೆ - ವಿವೇಕಾನಂದ ರೆಡ್ಡಿ

ವೈ.ಎಸ್ ವಿವೇಕಾನಂದ ರೆಡ್ಡಿ ಹತ್ಯೆ ಕೇಸ್​ - ಆಂಧ್ರಪ್ರದೇಶ ಸಿಎಂ ಒಎಸ್‌ಡಿ ಮತ್ತು ಮನೆಯ ಸಹಾಯಕರಿಗೆ ಸಿಬಿಐ ಪ್ರಶ್ನೆ - ಶೀಘ್ರದಲ್ಲೇ ಪ್ರಮುಖ ವ್ಯಕ್ತಿಗಳಿಗೆ ನೋಟಿಸ್

Representative image
ಪ್ರಾತಿನಿಧಿಕ ಚಿತ್ರ
author img

By

Published : Feb 4, 2023, 12:15 PM IST

Updated : Feb 4, 2023, 10:00 PM IST

ಕಡಪ(ಅಮರಾವತಿ): ಕಡಪ ಸಂಸದ ವೈ.ಎಸ್ ಅವಿನಾಶ್ ರೆಡ್ಡಿ ಅವರ ಕಾಲ್ ಡೇಟಾ ವಿಶ್ಲೇಷಣೆ ಆಧರಿಸಿ ಸಿಬಿಐ ಇತ್ತೀಚೆಗೆ ಕೃಷ್ಣಮೋಹನ್ ರೆಡ್ಡಿ ಹಾಗೂ ನವೀನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಎಸ್‌ಪಿ ರಾಮ್‌ಸಿಂಗ್ ನೇತೃತ್ವದಲ್ಲಿ ಸಿಬಿಐ ಅಧಿಕಾರಿಗಳು ಶುಕ್ರವಾರ ಆರು ಗಂಟೆಗೂ ಹೆಚ್ಚು ಕಾಲ ಇಬ್ಬರನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವಿನಾಶ್ ಕಾಲ್ ಡೇಟಾ ಆಧರಿಸಿ ವಿಚಾರಣೆ: ಕಡಪ ಸಂಸದ ಅವಿನಾಶ್ ರೆಡ್ಡಿ ಅವರ ಫೋನ್‌ನಿಂದ ಅನುಮಾನಾಸ್ಪದ ಕರೆ ವಿವರಗಳು ಬಂದ ಹಿನ್ನೆಲೆಯಲ್ಲಿ ಜಗನ್ಮೋಹನ್ ರೆಡ್ಡಿ ಅವರ ಒಎಸ್‌ಡಿ ಕೃಷ್ಣಮೋಹನ್ ರೆಡ್ಡಿ ಮತ್ತು ಸಿಎಂ ಪತ್ನಿ ವೈಎಸ್ ಭಾರತಿ ಅವರ ಆಪ್ತ ಸಹಾಯಕ ನವೀನ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ತಿಳಿದು ಬಂದಿದೆ. ಮಾಜಿ ಸಚಿವ ವೈ.ಎಸ್.ವಿವೇಕಾನಂದ ರೆಡ್ಡಿ ಹತ್ಯೆಯಾದ ದಿನ ಕಡಪಾ ಸಂಸದ ಅವಿನಾಶ್ ರೆಡ್ಡಿ ಎಷ್ಟು ಬಾರಿ ಕರೆ ಮಾಡಿದ್ದರು ಎಂಬ ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಇಬ್ಬರಿಗೂ ಕೇಳಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಹತ್ಯೆಯ ದಿನ ಸಿಎಂ ಜಗನ್ಮೋಹನ್ ರೆಡ್ಡಿ ಅವರ ಪತ್ನಿಗೆ ಕರೆ ಮಾಡಿದ್ದಾರಾ ಎಂಬ ಬಗ್ಗೆಯೇ ತನಿಖಾಧಿಕಾರಿಗಳು ಪ್ರಮುಖವಾಗಿ ಪ್ರಶ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ: ಸಚಿನ್ ಪೈಲಟ್‌ ಬೆಂಬಲಿಗ ಸಚಿವ ರಾಜೇಂದ್ರ ಸಿಂಗ್ ಗೂಢಾ ವಿರುದ್ಧ ಕಿಡ್ನಾಪ್​ ಕೇಸ್

2019 ಮಾರ್ಚ್​​ನಲ್ಲಿ ಕೊಲೆಯಾಗಿದ್ದ ಸಿಎಂ ಜಗನ್​ ಚಿಕ್ಕಪ್ಪ: ಮಾಜಿ ಮುಖ್ಯಮಂತ್ರಿ ಡಾ ವೈಎಸ್ ರಾಜಶೇಖರ ರೆಡ್ಡಿ ಅವರ ಕಿರಿಯ ಸಹೋದರ ಮತ್ತು ಪ್ರಸ್ತುತ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ವೈಎಸ್ ವಿವೇಕಾನಂದ ರೆಡ್ಡಿ ಅವರು ಮಾರ್ಚ್ 15, 2019 ರಂದು ಅವರ ಪುಲಿವೆಂದುಲದ ನಿವಾಸದಲ್ಲಿ ನಿಗೂಢವಾಗಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 2019 ರ ಸಾರ್ವತ್ರಿಕ ಚುನಾವಣೆಗೆ ಒಂದು ತಿಂಗಳ ಮುಂದೆ ಈ ಕೊಲೆ ನಡೆದಿತ್ತು.

ಈ ಹಿಂದೆ ವಿಚಾರಣೆಗೆ ಒಳಪಟ್ಟಿದ್ದ ನವೀನ್​: ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಕಡಪ ಸಂಸದ ವೈಎಸ್ ಅವಿನಾಶ್ ರೆಡ್ಡಿ ಅವರ ಫೋನ್‌ನಿಂದ ನವೀನ್‌ಗೆ ಹಲವಾರು ಫೋನ್ ಕರೆಗಳು ಹೋಗಿರುವುದು ಪತ್ತೆಹಚ್ಚಿದ್ದಾರೆ ಎಂದು ತಿಳಿದು ಬಂದಿದೆ. ನವೀನ್ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ಅವರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವಿನಾಶ್ ಕೂಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಟ್ಟಿದ್ದರು.

ವಿಚಾರಣೆ ನಡೆಸಿದವರ ಹೇಳಿಕೆ ಆಧರಿಸಿ ಮತ್ತಷ್ಟು ಜನರ ವಿಚಾರಣೆ ಸಾಧ್ಯತೆ: ಕೃಷ್ಣಮೋಹನ್ ರೆಡ್ಡಿ ಮತ್ತು ನವೀನ್ ಅವರ ವಿಚಾರಣೆಯ ಆಧಾರದ ಮೇಲೆ ಸಿಬಿಐ ಶೀಘ್ರದಲ್ಲೇ ಪ್ರಕರಣದ ಇತರ ಕೆಲವು ಪ್ರಮುಖ ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: ಆಂಧ್ರಪ್ರದೇಶದಲ್ಲಿ ಸಿಬಿಐ ಸಿಬ್ಬಂದಿಗೆ ಬಾಂಬ್​ ಬೆದರಿಕೆ... ಕಡಪ ತೊರೆಯುವಂತೆ ಸೂಚನೆ

Last Updated : Feb 4, 2023, 10:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.