ಹ್ಯಾಂಡಲ್ ಮೇಲೆ ಕೈ ಇಡದೇ, ಹೆಲ್ಮೆಟ್ ಕೂಡಾ ಧರಿಸದೆ, ಬೈಕ್ನ ಹಿಂಬದಿ ಸೀಟ್ನಲ್ಲಿ ಕೈಕಟ್ಟಿ ಕುಳಿತು ಸವಾರನೊಬ್ಬ ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಕಂಡ ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ಕೂಡ ಬೈಕ್ ಸವಾರನ ಸಾಹಸಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋವನ್ನು ಮತ್ತೊಬ್ಬ ವ್ಯಕ್ತಿ ಸೆರೆಹಿಡಿದಿದ್ದು, ಡೇಂಜರಸ್ ಸ್ಟಂಟ್ ಮಾಡುತ್ತಿದ್ದ ಆ ಬೈಕ್ ಸವಾರನ ಬಳಿ, "ಈ ಜಾದೂ ಹೇಗೆ? ಗಾಡಿ ಯಾರು ಓಡಿಸ್ತಾ ಇದಾರೆ? ಮೇಲಿರೋನಾ?" ಎಂದೆಲ್ಲಾ ಆಶ್ಚರ್ಯಚಕಿತನಾಗಿ ಕೇಳಿದ್ದಾನೆ. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಹರಿಬಿಟ್ಟಿದ್ದಾನೆ. ಇದನ್ನು ಸಾವಿರಾರು ತಮ್ಮ ಟ್ವಿಟರ್ ಖಾತೆಗಳಲ್ಲಿ ಶೇರ್ ಮಾಡಿದ್ದಾರೆ.
ಈ ವಿಡಿಯೋ ಹಂಚಿಕೊಂಡಿರುವ ಆನಂದ್ ಮಹೀಂದ್ರಾ, 1972ರ ಹಿಂದಿ ಚಲನಚಿತ್ರ 'ಪರಿಚಯ್'ನಲ್ಲಿ ಕಿಶೋರ್ ಕುಮಾರ್ ಕಂಠಸಿರಿಯ ಹಾಡಿನ ಸಾಲುಗಳನ್ನು ಕೊಂಚ ಬದಲಾಯಿಸಿ ಬರೆದಿದ್ದಾರೆ. ಮುಸಾಫಿರ್ ಹೂ ಯಾರೋ... ನಾ ಚಾಲಕ್, ನಾ ಟಿಕಾನಾ.. (ಗೆಳೆಯರೇ ನಾನೊಬ್ಬ ಪ್ರವಾಸಿಗ.. ಇಲ್ಲಿ ಚಾಲಕನಿಲ್ಲ, ನನಗೆ ಯಾವುದೇ ಜಾಗವಿಲ್ಲ) ಎಂದಿದ್ದಾರೆ.
-
Love this…Musafir hoon yaaron… na chalak hai, na thikaana.. https://t.co/9sYxZaDhlk
— anand mahindra (@anandmahindra) October 20, 2021 " class="align-text-top noRightClick twitterSection" data="
">Love this…Musafir hoon yaaron… na chalak hai, na thikaana.. https://t.co/9sYxZaDhlk
— anand mahindra (@anandmahindra) October 20, 2021Love this…Musafir hoon yaaron… na chalak hai, na thikaana.. https://t.co/9sYxZaDhlk
— anand mahindra (@anandmahindra) October 20, 2021
ಡಾ. ಅಜಯಿತ ಎಂಬವರು ಈ ವಿಡಿಯೋವನ್ನು ಹಂಚಿಕೊಂಡು, "ನಾನು ಭಾರತಕ್ಕೆ ಚಾಲಕ ರಹಿತ ವಾಹನಗಳನ್ನು ತರಲು ಬಯಸಿದ್ದೇನೆ, ಆದ್ರೆ ಅಷ್ಟರಲ್ಲಿ ಭಾರತದಲ್ಲಿ ಇಂತಹ ವಾಹನ ಬಂದಾಗಿದೆ" ಎಂದು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಸ್ಪೇಸ್‌ಎಕ್ಸ್ (SpaceX) ಕಂಪನಿ ಸಂಸ್ಥಾಪಕ ಹಾಗೂ ಟೆಸ್ಲಾ ಮೋಟಾರ್ಸ್ ಸಿಇಒ ಎಲೋನ್ ಮಸ್ಕ್ ಅವರು ಹೇಳುವಂತೆ ಬರೆದುಕೊಂಡಿದ್ದಾರೆ.