ದರ್ಭಾಂಗ (ಬಿಹಾರ): ಮೂಢನಂಬಿಕೆಯ ಹೆಸರಲ್ಲಿ ಎರಡೂವರೆ ವರ್ಷದ ಮಗುವನ್ನು ಬಲಿಕೊಟ್ಟ ಪ್ರಕರಣ ಇಲ್ಲಿನ ದರ್ಭಾಂಗದಲ್ಲಿ ವರದಿಯಾಗಿದೆ. ಮಗುವಿನ ಶವ ಪೋಷಕರ ಮನೆಯಲ್ಲಿ ಪತ್ತೆಯಾಗಿದೆ. ಹೀಗಾಗಿ, ಆರೋಪಿ ತಾಯಿ ಕಂಬಕ್ಕೆ ಕಟ್ಟಿ ವಿವಸ್ತ್ರಗೊಳಿಸಿ ಸಾರ್ವಜನಿಕರು ಥಳಿಸಿದ್ದಾರೆ.
ಗುಲ್ಬಿಯಾದೇವಿ ಮತ್ತು ಶ್ಯಾಮ್ ಚೌಪಾಲ್ ದಂಪತಿಯ ಮಗ ಆಯುಷ್ (2) ಸೋಮವಾರ ನಾಪತ್ತೆಯಾಗಿದ್ದ. ಮಂಗಳವಾರ ಸಕತ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶೇರ್‌ಪುರ ನಾರಾಯಣಪುರದ ದರ್ಗಾ ತೋಲಾದಲ್ಲಿ ಶವ ಪತ್ತೆಯಾಗಿದೆ. ತಕ್ಷಣ ಸುದ್ದಿ ಎಲ್ಲೆಡೆ ಹರಡಿ ಕೂಡಲೇ ನೂರಾರು ಜನ ಅಲ್ಲಿ ಜಮಾಯಿಸಿದ್ದಾರೆ. ನೆರೆಹೊರೆಯ ಮಹಿಳೆಯೊಬ್ಬರು ತಂತ್ರ ಮಾಡಿ ಮಗು ಕೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದರಿಂದ ಜನ ಆಕ್ರೋಶಗೊಂಡು ಮಹಿಳೆಗೆ ಥಳಿಸಿದ್ದಾರೆ.
ಪೆಟ್ರೋಲ್ ಎರಚಿ ಸುಟ್ಟು ಹಾಕಲು ಯತ್ನ: ಕೋಪಗೊಂಡ ಜನರು ಮಹಿಳೆಯನ್ನು ಅಮಾನುಷವಾಗಿ ಥಳಿಸಿದ್ದಾರೆ. ಅಲ್ಲದೇ ಪೆಟ್ರೋಲ್ ಎರಚಿ ಸುಡುವ ಯತ್ನ ನಡೆಸಿದ್ದಾರೆ. ಅದೃಷ್ಟವಶಾತ್ ಸ್ಥಳಕ್ಕೆ ಪೊಲೀಸರು ಆಗಮಿಸಿ ಜನರ ಹಿಡಿತದಿಂದ ಮಹಿಳೆ ರಕ್ಷಿಸಿ ಚಿಕಿತ್ಸೆಗಾಗಿ ಡಿಎಂಸಿಹೆಚ್ಗೆ ಕಳುಹಿಸಿದ್ದಾರೆ. ಸದ್ಯ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆರೋಪಿ ಮನೆ ಬಳಿ ಮಗು ಪತ್ತೆ: ಪೊಲೀಸ್ ಸಿಬ್ಬಂದಿ ಸೋಮವಾರ ಸುಮಾರು 1 ಗಂಟೆಯ ವೇಳೆಗೆ ಸಾಕಷ್ಟು ಹುಡುಕಾಟ ನಡೆಸಿದರೂ ಮಗುವಿನ ಸುಳಿವು ಸಿಕ್ಕಿರಲಿಲ್ಲ. ನಂತರ ಹುಡುಕಾಟ ಮುಂದುವರೆಸಿದಾಗ ಮನೆಯ ಬಳಿ ಶವ ಪತ್ತೆಯಾಗಿದೆ. ಅಲ್ಲಿ ಮೃತದೇಹದ ಸುತ್ತ ತಂತ್ರ ಮಾಡಲಾಗಿತ್ತು ಎಂಬುದು ತಿಳಿದು ಬಂದಿದೆ.
ಮಗುವಿನ ಕೊಲೆ ಹಾಗೂ ಗುಂಪು ಹಲ್ಲೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಕಾನೂನು ಕೈಗೆ ತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಹೀಗಾಗಿ, ಪ್ರಕರಣದ ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅವಾಸಿಯಾ ಕುಮಾರ್ ತಿಳಿಸಿದ್ದಾರೆ.
ಓದಿ: ಹಿಂಗೋಲಿ ಮೂಢನಂಬಿಕೆಯ ಪರಮಾವಧಿ.. ಆರು ತಿಂಗಳ ಹಸುಳೆಗೆ ಮಹಿಳೆಯರಿಂದ ಪೂಜೆ