ETV Bharat / bharat

ವಿಶಿಷ್ಟ ಹಳ್ಳಿಗೆ ಪೊಲೀಸರೇ ಪ್ರವೇಶಿಸಿಲ್ಲ.. ಗ್ರಾಮಸ್ಥರು ಇಂದಿಗೂ ಠಾಣೆ ಮೆಟ್ಟಿಲೇರಿಲ್ಲ.. - ಪೊಲೀಸರಿಗೆ ನಿಷೇಧ

ಕೃಷಿ ಚಟುವಟಿಕೆಗಳಲ್ಲಿ ಗ್ರಾಮಸ್ಥರು ಪರಸ್ಪರ ಸಹಾಯ ಮಾಡುತ್ತಾರೆ. ಇಡೀ ದೇಶವು ನಾನಾ ರೀತಿಯ ಅಪರಾಧ ಕೃತ್ಯಗಳಿಗೆ ಸಾಕ್ಷಿಯಾಗುತ್ತಿರುವ ಸಮಯದಲ್ಲಿ, ಈ ಗ್ರಾಮ ಸಮಾಜಕ್ಕೆ ಮಾದರಿಯಾಗಿದೆ..

ಈ ಹಳ್ಳಿಗೆ ಇಲ್ಲಿಯವರೆಗೆ ಪೊಲೀಸರೇ ಪ್ರವೇಶಿಸಿಲ್ಲ

author img

By

Published : May 22, 2021, 6:05 AM IST

ನಾಗಾನ್ (ಅಸ್ಸೋಂ): ಪ್ರಸ್ತುತ ದಿನಮಾನಗಳಲ್ಲಿ ಎಲ್ಲೆಂದರಲ್ಲಿ ಕೊಲೆ, ಸುಲಿಗೆ ನಡೆಯುತ್ತಿವೆ. ಅಪರಾಧ ಪ್ರಕರಣಗಳು ಉಲ್ಬಣಗೊಳ್ಳುತ್ತಲೇ ಇವೆ. ಆದರೆ, ಅಸ್ಸೋಂನ ಈ ಹಳ್ಳಿಗೆ ಈವರೆಗೆ ಪೊಲೀಸರು ಪ್ರವೇಶಿಸಿಲ್ಲ.

ಗ್ರಾಮಸ್ಥರು ಎಂದಿಗೂ ಪೊಲೀಸರ ಬಳಿಗೆ ಹೋಗಬೇಕಾಗಿಲ್ಲ. ಮಧ್ಯ ಅಸ್ಸೋಂನ ನಾಗಾನ್ ಜಿಲ್ಲೆಯ ಧಿಂಗ್ ಕಂದಾಯ ವೃತ್ತದ ಅಡಿ ಬರುವ ಸಹರಿಯಾ ಗಾಂವ್​ಗೆ ಖಾಕಿ ಎಂಟ್ರಿ ಕೊಡುವುದೇ ಇಲ್ಲವಂತೆ.

1998ರಲ್ಲಿ ಸ್ಥಾಪನೆಯಾದ ಮತ್ತು ಮುಖ್ಯವಾಗಿ ಬೋಡೋ ಸಮುದಾಯದ ಜನರು ವಾಸಿಸುವ ಈ ಗ್ರಾಮದಲ್ಲಿ ಕೊಲೆ, ಅತ್ಯಾಚಾರ, ಹಿಂಸೆ, ದೌರ್ಜನ್ಯ ಇತ್ಯಾದಿ ಯಾವುದೇ ಅಪರಾಧಗಳು ನಡೆದಿಲ್ಲ.

ವಿಶಿಷ್ಟ ಹಳ್ಳಿಗೆ ಪೊಲೀಸರೇ ಪ್ರವೇಶಿಸಿಲ್ಲ..

ನಾಗಾವ್ ಪಟ್ಟಣದಿಂದ ಸುಮಾರು 18 ಕಿ.ಮೀ ಮತ್ತು ಡಿಂಗ್‌ನಿಂದ 1.5 ಕಿ.ಮೀ ದೂರದಲ್ಲಿದೆ ಈ ಹಳ್ಳಿ. ಈ ಗ್ರಾಮದ ಜನರು ಮುಖ್ಯವಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ.

ಈ ಗ್ರಾಮವು ನಿಜವಾಗಿಯೂ ಕೋಮು ಸೌಹಾರ್ದತೆ ಮತ್ತು ಜನರಲ್ಲಿ ಏಕತೆಯನ್ನು ಸಂಕೇತಿಸುತ್ತದೆ. ಹಳ್ಳಿಯ ಜನರು ಕಳೆದ ಹಲವಾರು ದಶಕಗಳಿಂದ ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ.

ಸಹರಿಯಾ ಗಾಂವ್‌ನಲ್ಲಿ 170 ಕುಟುಂಬಗಳಿವೆ ಮತ್ತು ಈ ಗ್ರಾಮದಲ್ಲಿ ಸುಮಾರು 600 ಜನ ವಾಸಿಸುತ್ತಾರೆ. ವಿವಿಧ ಕಾರ್ಯಗಳಿಗಾಗಿ ಗ್ರಾಮ ನಿರ್ವಹಣಾ ಸಮಿತಿ ಇದೆ.

ಗ್ರಾಮದ ಎಲ್ಲ ಕುಟುಂಬಗಳು ಬಾಗರುಂಬಾ, ಬಿಹು, ಉರುಕಾ, ಬಾಥೂ ಪೂಜಾದಂತಹ ಹಬ್ಬಗಳು ಮತ್ತು ಇತರ ಎಲ್ಲ ಕೃಷಿ ಸಂಬಂಧಿತ ಚಟುವಟಿಕೆಗಳು ಮತ್ತು ಆಚರಣೆಗಳಂತಹ ವಿವಿಧ ಸಾಂಸ್ಕೃತಿಕ ಉತ್ಸವಗಳನ್ನು ಆಚರಿಸುತ್ತವೆ.

ಕೃಷಿ ಚಟುವಟಿಕೆಗಳಲ್ಲಿ ಗ್ರಾಮಸ್ಥರು ಪರಸ್ಪರ ಸಹಾಯ ಮಾಡುತ್ತಾರೆ. ಇಡೀ ದೇಶವು ನಾನಾ ರೀತಿಯ ಅಪರಾಧ ಕೃತ್ಯಗಳಿಗೆ ಸಾಕ್ಷಿಯಾಗುತ್ತಿರುವ ಸಮಯದಲ್ಲಿ, ಈ ಗ್ರಾಮ ಸಮಾಜಕ್ಕೆ ಮಾದರಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.