ETV Bharat / bharat

ಮದುವೆಯಾದ ಬಳಿಕ ಇಲ್ಲಿ ನವಜೋಡಿ ಮಾಡುವ ಮೊದಲ ಕೆಲಸ ಇದು..

author img

By

Published : Jun 13, 2021, 7:28 PM IST

ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸ್ವತಂತ್ಯ ಸಿಂಗ್​ರಿಂದ ಈ ವಿನೂತನ ಅಭಿಯಾನಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮದುವೆಯಾದಾಗ ತಮ್ಮ ಹೊಲ ಅಥವಾ ಮನೆ ಮುಂದೆ ಒಂದೊಂದು ಸಸಿ ನೆಟ್ಟರೆ ಮುಂದೊಂದು ದಿನ ಅದರಿಂದ ನಮಗೇ ಲಾಭ. ಮತ್ತೆ ನಮ್ಮ ಹಳ್ಳಿಯು ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ ಎಂಬ ನಂಬಿಕೆಯಿದೆ..

married couple
ನವಜೋಡಿ

ಕೌಶಾಂಬಿ : ಆಧುನಿಕತೆಯ ಭರಾಟೆಯಲ್ಲಿ ಪರಿಸರ ಸಂರಕ್ಷಣೆಯತ್ತ ಗಮನಹರಿಸುವವರ ಸಂಖ್ಯೆ ತೀರಾ ವಿರಳ. ಅಭಿವೃದ್ಧಿಯ ನೆಪದಲ್ಲಿದ್ದ ಮರಗಳನ್ನು ಕಡಿದು ಪರಿಸರ ಹಾಳು ಮಾಡುತ್ತಿರುವ ಈ ಹೊತ್ತಿನಲ್ಲಿ ಜಿಲ್ಲೆಯ ಹಳ್ಳಿಗಳ ನಿವಾಸಿಗಳು ಹೊಸ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದ್ದಾರೆ. ಇಲ್ಲಿ ಮದುವೆಯಾದ ಪ್ರತಿಯೊಬ್ಬ ದಂಪತಿಯು ಗಿಡ ನೆಡುವುದು ಕಡ್ಡಾಯ. ಆ ಗಿಡವನ್ನು ತಮ್ಮ ಮೊದಲ ಮಕ್ಕಳಂತೆ ಹಾರೈಕೆ ಮಾಡುವುದು ಅವರ ಜವಾಬ್ದಾರಿಯೂ ಹೌದು.

ಮೂರತ್‌ಗಂಜ್ ಡೆವಲಪ್‌ಮೆಂಟ್ ಬ್ಲಾಕ್‌ನ ಅಮ್ನಿಲೋಕಿಪುರ ಗ್ರಾಮದ ನಿವಾಸಿಗಳು, ಹೊಸದಾಗಿ ಮದುವೆಯಾದ ಪ್ರತಿ ಜೋಡಿಯೂ ತಮ್ಮ ಮನೆ ಪ್ರವೇಶಿಸುವ ಮುನ್ನ ಕೈದೋಟ ಅಥವಾ ಹೊಲದಲ್ಲಿ ಒಂದು ಸಸಿ ನೆಡಬೇಕು. ಅದನ್ನು ತಮ್ಮ ಮೊದಲ ಮಗುವಿನ ರೀತಿ ಪೋಷಿಸುತ್ತೇವೆ ಎಂದು ಪ್ರತಿಜ್ಞೆ ಮಾಡುಬೇಕಿದೆ. ಅತುಲ್​ ಮತ್ತು ಸಂಧ್ಯಾ ದಂಪತಿ ಇಂದು ಅರಳಿ ಸಸಿ ನೆಡುವ ಮೂಲಕ ಈ ವಿಭಿನ್ನ ಕಾರ್ಯಕ್ಕೆ ಚಾಲನೆ ನೀಡಿದರು.

ಇದನ್ನೂ ಓದಿ:ವಾಯುಮಾಲಿನ್ಯ ತಡೆಗೆ​ 'ಕ್ರಿಷ್ ಕಿಟ್'; ಉಡುಪಿ ವ್ಯಕ್ತಿಯಿಂದ ಅನ್ವೇಷಣೆ

ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸ್ವತಂತ್ಯ ಸಿಂಗ್​ರಿಂದ ಈ ವಿನೂತನ ಅಭಿಯಾನಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮದುವೆಯಾದಾಗ ತಮ್ಮ ಹೊಲ ಅಥವಾ ಮನೆ ಮುಂದೆ ಒಂದೊಂದು ಸಸಿ ನೆಟ್ಟರೆ ಮುಂದೊಂದು ದಿನ ಅದರಿಂದ ನಮಗೇ ಲಾಭ. ಮತ್ತೆ ನಮ್ಮ ಹಳ್ಳಿಯು ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ ಎಂಬ ನಂಬಿಕೆಯಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.