ETV Bharat / bharat

ವಿದ್ಯಾರಂಭ ಆಚರಣೆ; ಗುರುವಾಗಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ ಇಸ್ರೊ ಅಧ್ಯಕ್ಷ ಸೋಮನಾಥ್

author img

By ANI

Published : Oct 24, 2023, 5:55 PM IST

ತಿರುವನಂತಪುರದಲ್ಲಿ ನಡೆದ ವಿದ್ಯಾರಂಭಂ ಆಚರಣೆಯಲ್ಲಿ ಇಸ್ರೊ ಅಧ್ಯಕ್ಷ ಎಸ್​. ಸೋಮನಾಥ್ ಭಾಗಿಯಾಗಿದ್ದರು.

Vidyarambham
Vidyarambham

ತಿರುವನಂತಪುರಂ: ವಿಜಯದಶಮಿ ಅಂಗವಾಗಿ ಕೇರಳದ ತಿರುವನಂತಪುರಂನಲ್ಲಿ ನಡೆದ ವಿದ್ಯಾರಂಭಂ ಆಚರಣೆಯಲ್ಲಿ ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್.ಸೋಮನಾಥ್ ಇಂದು ಭಾಗಿಯಾದರು.

"ನಾನು ಇಂದು ಬೆಳಿಗ್ಗೆ ವಿಜಯದಶಮಿಯ ಸಂದರ್ಭದಲ್ಲಿ ಇಲ್ಲಿಗೆ ಬಂದಿದ್ದೇನೆ. ವಿದ್ಯಾರಂಭ ಇದು ವರ್ಣಮಾಲೆಗಳನ್ನು ದೇವರು ಮತ್ತು ದೇವತೆಗಳಾಗಿ ಪೂಜಿಸುವ ಸಂಸ್ಕೃತಿಯಾಗಿದೆ. ಇಂದಿನ ದಿನ ಚಿಕ್ಕ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಆರಂಭಿಸಲಾಗುತ್ತದೆ. ಗುರುವಿನಿಂದ ಆಗುವ ಕಲಿಕೆಯನ್ನು ಪೂಜಿಸುವ ಪ್ರಕ್ರಿಯೆಯ ಮೂಲಕ ಮಕ್ಕಳು ಶಿಕ್ಷಣದ ಹೊಸ ಅಧ್ಯಾಯವನ್ನು ಆರಂಭಿಸುತ್ತಾರೆ." ಎಂದು ಸೋಮನಾಥ್ ಕೇರಳದ ತಿರುವನಂತಪುರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.

"ನಾನು ಜೀವಮಾನದಲ್ಲಿ ಮರೆಯಲಾಗದ ಅನುಭವ ಪಡೆಯಲು ಇಲ್ಲಿಗೆ ಬಂದಿದ್ದೇನೆ. ಈ ಆಚರಣೆಯ ಭಾಗವಾಗಲು ನಿಜವಾಗಿಯೂ ಸಂತೋಷವಾಗಿದೆ. ಈ ಹಿಂದೆ ನನ್ನ ಪೋಷಕರು ಮತ್ತು ಅಜ್ಜಿಯರಿಂದ ನಾನು ಪಡೆದ ಜ್ಞಾನವನ್ನು ಯುವ ಪೀಳಿಗೆಗೆ ಸಾಗಿಸಲು ಸಂತೋಷವಾಗುತ್ತಿದೆ" ಎಂದು ಅವರು ಹೇಳಿದರು.

ಕೇರಳದಲ್ಲಿ 'ವಿದ್ಯಾರಂಭಂ' ಸಮಾರಂಭವನ್ನು ಸಾಮಾನ್ಯವಾಗಿ ನವರಾತ್ರಿಯ ಕೊನೆಯ ದಿನದಂದು ಆಚರಿಸಲಾಗುತ್ತದೆ. ಚಿಕ್ಕಮಕ್ಕಳಿಗೆ ಪ್ರಥಮ ಬಾರಿಗೆ ಔಪಚಾರಿಕ ಶಿಕ್ಷಣ ಆರಂಭಿಸುವ ಶುಭ ಘಳಿಗೆ ಇದಾಗಿದೆ.

ವಿಜಯದಶಮಿ ದಿನದಂದು ಕೇರಳದಾದ್ಯಂತ ಆಚರಿಸಲಾಗುವ ಅನೇಕ ಧಾರ್ಮಿಕ ಆಚರಣೆಗಳ ಪೈಕಿ ವಿದ್ಯಾರಂಭಂ ಅಥವಾ 'ಎಳಿನಿರುತು' ಒಂದಾಗಿದೆ. ವಿದ್ಯಾರಂಭಂ ಎಂದರೆ ಜ್ಞಾನದ ದೀಕ್ಷೆ ಎಂದರ್ಥ. ಈ ದೀಕ್ಷೆಯಲ್ಲಿ, ಒಂದು ತಟ್ಟೆಯಲ್ಲಿ ಅಕ್ಕಿಕಾಳುಗಳನ್ನು ಹಾಕಿ ಆ ಅಕ್ಕಿಯಲ್ಲಿ ಮೊದಲ ಬಾರಿಗೆ ಮಗುವಿಗೆ ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ. ನಂತರ ಗುರುವಿನ ಸ್ಥಾನದಲ್ಲಿರುವ ವ್ಯಕ್ತಿಯು ವ್ಯಕ್ತಿಯು ಚಿನ್ನದ ಉಂಗುರ ಅಥವಾ ನಾಣ್ಯದಿಂದ ಮಗುವಿನ ನಾಲಿಗೆಯ ಮೇಲೆ ಅಕ್ಷರಗಳನ್ನು ನಯವಾಗಿ ಬರೆಯುತ್ತಾರೆ. ಇದು ಸಾಂಕೇತಿಕವಾಗಿ ಬರವಣಿಗೆ ಮತ್ತು ಮಾತನಾಡುವಿಕೆಯ ಪ್ರಾರಂಭವನ್ನು ಸೂಚಿಸುತ್ತದೆ.

ಇದಕ್ಕೂ ಮುನ್ನ ಇಂದು ಕೇರಳ ರಾಜಭವನದಲ್ಲಿಯೂ ವಿದ್ಯಾರಂಭಂ ಆಯೋಜಿಸಲಾಗಿತ್ತು. ತಿರುವನಂತಪುರಂನ ರಾಜಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಮತ್ತೊಂದೆಡೆ ತಿರುವನಂತಪುರಂನ ಪೂಜಾಪ್ಪುರ ಸರಸ್ವತಿ ಮಂಟಪದಲ್ಲಿ ನಡೆದ ವಿದ್ಯಾರಂಭಂ ಸಮಾರಂಭದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಮಕ್ಕಳಿಗೆ ತಮ್ಮ ಮೊದಲ ಅಕ್ಷರಗಳನ್ನು ಬರೆಯಲು ದೀಕ್ಷೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಶಿ ತರೂರ್, "ಇದು 'ವಿದ್ಯಾರಂಭಂ' ನ ವಿಶೇಷ ಸಂದರ್ಭವಾಗಿದೆ. ಇಡೀ ಭಾರತದಲ್ಲಿ ದಸರಾವನ್ನು ವಿಜಯದಶಮಿಯಾಗಿ ಆಚರಿಸಲಾಗುತ್ನ್ನುತದೆ. ಆದರೆ ಕೇರಳದಲ್ಲಿ ವಿಜಯದಶಮಿಯು ಕಲಿಕೆಯ ಪ್ರಾರಂಭದ ದಿನವಾಗಿದೆ. ಇಂದಿನ ದಿನ ಮಕ್ಕಳಿಗೆ ಬರೆಯುವುದನ್ನು ಕಲಿಸುವುದು ಹಿರಿಯರ ಕರ್ತವ್ಯವಾಗಿದೆ." ಎಂದರು.

ಇದನ್ನೂ ಓದಿ: ಚಂದ್ರ ಇಲ್ಲಿಯವರೆಗೆ ತಿಳಿದುಕೊಂಡಿದ್ದಕ್ಕಿಂತ 40 ಮಿಲಿಯನ್ ವರ್ಷ ಹಳೆಯದು; ಚಂದ್ರನ ವಯಸ್ಸೆಷ್ಟು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.