ETV Bharat / bharat

"ಬಾಲಿವುಡ್‌ನ ಧೋನಿ ಮೊನ್ನೆಯಷ್ಟೇ ನಮ್ಮೊಂದಿಗೆ ಕ್ರಿಕೆಟ್​ ಆಡಿದ್ರು- ಸುಶಾಂತ್​​ರನ್ನ ನೆನೆಯುವ ಸಹರ್ಸಾ ನಿವಾಸಿಗಳು - ಬಿಹಾರದ ಸಹರ್ಸಾದಲ್ಲಿ ಸುಶಾಂತ್ ಕ್ರಿಕೆಟ್

2019 ರ ಮೇ 13 ರಂದು ಸಹರ್ಸಾ ಜಿಲ್ಲೆಯಲ್ಲಿರುವ ಗ್ರಾಮವೊಂದಕ್ಕೆ ತೆರಳಿ ಅಲ್ಲಿನ ಮಕ್ಕಳು, ಯುವಕರೊಂದಿಗೆ ಸುಶಾಂತ್ ಸಿಂಗ್ ಕ್ರಿಕೆಟ್​ ಆಡಿದ್ದರು. ಇಂದು ಸುಶಾಂತ್​ರ 36ನೇ ವರ್ಷದ ಜನ್ಮದಿನದ ಹಿನ್ನೆಲೆ ಅವರೆಲ್ಲರೂ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಈ ವಿಡಿಯೋ, ಫೋಟೋಗಳನ್ನು ಹಂಚಿಕೊಂಡು ಅಗಲಿದ ನಟನನ್ನು ಸ್ಮರಿಸುತ್ತಿದ್ದಾರೆ.

Sushant Singh Rajput played cricket in Saharsa
ಸುಶಾಂತ್
author img

By

Published : Jan 21, 2022, 12:20 PM IST

ಪಾಟ್ನಾ (ಬಿಹಾರ): ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ ನಮ್ಮನಗಲಿ ಒಂದೂವರೆ ವರ್ಷ ಕಳೆದಿದೆ. ಆದರೂ ಬಿಹಾರದ ಸಹರ್ಸಾ ನಿವಾಸಿಗಳು ಮಾತ್ರ "ಬಾಲಿವುಡ್‌ನ ಧೋನಿ ಮೊನ್ನೆಯಷ್ಟೇ ಇಲ್ಲಿಗೆ ಬಂದಿದ್ದರು. ನಮ್ಮೊಂದಿಗೆ ಕ್ರಿಕೆಟ್​ ಆಡಿದ್ದರು" ಎಂದು ಇಂದಿಗೂ ನೆನೆಪಿಸಿಕೊಳ್ಳುತ್ತಾರೆ.

ಸಹರ್ಸಾದಲ್ಲಿ ಕ್ರಿಕೆಟ್​ ಆಡಿದ್ದ ಸುಶಾಂತ್​ ವಿಡಿಯೋ

ಹೌದು.. ಸುಶಾಂತ್ ಸಿಂಗ್​ 2019 ರ ಮೇ 13 ರಂದು ಸಹರ್ಸಾ ಜಿಲ್ಲೆಯಲ್ಲಿರುವ ಗ್ರಾಮವೊಂದಕ್ಕೆ ತೆರಳಿ ಅಲ್ಲಿನ ಮಕ್ಕಳು, ಯುವಕರೊಂದಿಗೆ ಕ್ರಿಕೆಟ್​ ಆಡಿದ್ದರು. ಈ ದೃಶ್ಯದ ವಿಡಿಯೋ ಇಂದಿಗೂ ಅಲ್ಲಿನ ಜನರ ಮೊಬೈಲ್ ಫೋನ್‌ಗಳಲ್ಲಿದೆ. ಎಷ್ಟೋ ಮಂದಿ ಅಂದು ನಟನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಇಂದು ಸುಶಾಂತ್​ರ 36ನೇ ವರ್ಷದ ಜನ್ಮದಿನದ ಹಿನ್ನೆಲೆ ಅವರೆಲ್ಲರೂ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಈ ವಿಡಿಯೋ, ಫೋಟೋಗಳನ್ನು ಹಂಚಿಕೊಂಡು ನಟನನ್ನು ನೆನೆಯುತ್ತಿದ್ದಾರೆ.

ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ಜನ್ಮದಿನ: ಅಗಲಿದ ನಟನ ನೆನಪು ಸದಾ ಜೀವಂತ

1986ರ ಜನವರಿ 21ರಂದು ಪಾಟ್ನಾದಲ್ಲಿ ಹುಟ್ಟಿದ್ದ ರಜಪೂತ್​, 2020ರ ಜೂನ್​​ 14 ರಂದು ಇಹಲೋಕ ತ್ಯಜಿಸಿದ್ದರು. ಬಾಲಿವುಡ್​ನ ಭರವಸೆಯ ನಟನಾಗಿದ್ದ ಸುಶಾಂತ್​​ರ ಸಾವು ಇಂದಿಗೂ ನಿಗೂಢವಾಗಿದ್ದು, ತನಿಖೆ ನಡೆಯುತ್ತಲೇ ಇದೆ. ಇವರ ಸರಳ ವ್ಯಕ್ತಿತ್ವವನ್ನು ತೋರಿಸುವ ಅನೇಕ ವಿಡಿಯೋಗಳು ನಮಗೆ ಸಿಗುತ್ತವೆ..

ಜಾಹಿರಾತು:-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.