ಯಮುನಾನಗರ (ಹರಿಯಾಣ) : ಯಮುನಾನಗರದ ದಮ್ಲಾದಲ್ಲಿರುವ ಪ್ಲೈ ಕಾರ್ಖಾನೆಯಲ್ಲಿ ರಕ್ಷಾಬಂಧನದಂದ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದೆ. ಈ ಸಮಯದಲ್ಲಿ ಗುಂಪೊಂದು ಓರ್ವ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿ ಹತ್ಯೆಗೈದಿರುವ ಆರೋಪ ಕೇಳಿ ಬಂದಿದೆ.
ಈ ಘಟನೆಯನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋದಲ್ಲಿ ಹಲವಾರು ಜನರು ಹೊಡೆದಾಡಿಕೊಳ್ಳುತ್ತಿದ್ದು, ಸ್ವಲ್ಪಸಮಯದ ನಂತರ ಎಲ್ಲರೂ ಒಂದಾಗಿ ರವೇಂದ್ರ ರಾವಥ್ ಎಂಬಾತನನ್ನು ಥಳಿಸಿದ್ದಾರೆ. ಅಸ್ವಸ್ಥನಾಗಿದ್ದ ಯುವಕನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಯುವಕ ಮೃತಪಟ್ಟಿದ್ದಾನೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಮರಣೋತ್ತರ ಪರೀಕ್ಷೆಯ ಬಳಿಕ ರವೇಂದ್ರ ರಾವಥ್ ಸಂಬಂಧಿಕರು ಗದ್ದಲ ಸೃಷ್ಟಿಸಿದ್ದು, ಮೃತದೇಹವನ್ನು ಕಾರ್ಖಾನೆಗೆ ತೆಗೆದುಕೊಂಡು ಹೋದರು. ಈ ವೇಳೆ ಎರಡೂ ಕಡೆಯವರ ನಡುವೆ ಮಾತುಕತೆ ನಡೆಯಿತು. ಅಂತಿಮವಾಗಿ ಕಾರ್ಖಾನೆ ಮಾಲೀಕ ತನ್ನ ಸ್ವಂತ ಖರ್ಚಿನಲ್ಲಿ ಮೃತದೇಹವನ್ನು ಬಿಹಾರಕ್ಕೆ ಕಳಿಸಿಕೊಟ್ಟರು.
ಇದನ್ನೂ ಓದಿ: 1 ವರ್ಷದ ಹಿಂದೆ ಪೋಷಕರ ಕಣ್ತಪ್ಪಿಸಿ ಬಾಲಕಿಗೆ ವಿವಾಹ : ಪತಿ ಹಾಗೂ ನಾಲ್ವರ ವಿರುದ್ಧ ಪ್ರಕರಣ ದಾಖಲು
ಸದ್ಯ ಘಟನೆಯ ಸಂಬಂಧ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಎರಡು ಗುಂಪುಗಳ ಮಧ್ಯೆ ಯಾಕೆ ಜಗಳ ನಡೆಯಿತು ಎಂಬುದರ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.