ETV Bharat / bharat

ಕಿಡ್ನಿ ಕಸಿ ಬಳಿಕ ಮೊದಲ ಹೇಳಿಕೆ ನೀಡಿದ ಲಾಲು ಪ್ರಸಾದ್: ಆರೋಗ್ಯ ವಿಚಾರಿಸಿದ ಮೋದಿ - ರೋಹಣಿ ಆಚಾರ್ಯ

ತಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್​ ಯಾದವ್ ಧನ್ಯವಾದ ತಿಳಿಸಿದ್ದಾರೆ.

video-of-lalu-yadav-came-for-first-time-after-kidney-trasnplant-operation
ಕಿಡ್ನಿ ಕಸಿ ಬಳಿಕ ಮೊದಲ ಹೇಳಿಕೆ ನೀಡಿದ ಲಾಲು ಪ್ರಸಾದ್: ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
author img

By

Published : Dec 6, 2022, 6:09 PM IST

ಪಾಟ್ನಾ (ಬಿಹಾರ): ಸಿಂಗಾಪುರದಲ್ಲಿ ಕಿಡ್ನಿ ಶಸ್ತ್ರಚಿಕಿತ್ಸೆ ನಂತರ ಮೊದಲ ಬಾರಿಗೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್​ ಯಾದವ್​ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, ತಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಲಾಲು ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.

ಬಹು ಕಾಯಿಲೆಗಳಿಂದ ಬಳಲುತ್ತಿದ್ದ ಹಿರಿಯ ರಾಜಕಾರಣಿ ಲಾಲು ಅವರಿಗೆ ಎರಡೂ ಕಿಡ್ನಿಗಳ ಸಹ ಹಾನಿಯಾಗಿದ್ದವು. ಹೀಗಾಗಿ ಕಿಡ್ನಿ ಕಸಿಗಾಗಿ ಸಿಂಗಾಪುರಕ್ಕೆ ಕುಟುಂಬ ಕರೆದುಕೊಂಡು ಹೋಗಿದ್ದು, ಅಲ್ಲಿ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಿದ್ದರು. ಮಗಳು ರೋಹಿಣಿ ಆಚಾರ್ಯ ತಮ್ಮ ಒಂದು ಕಿಡ್ನಿಯನ್ನು ತಂದೆಗೆ ದಾನ ಮಾಡಿದ್ದಾರೆ.

ನಿನ್ನೆಯಷ್ಟೇ ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ ಲಾಲು ಅವರನ್ನು ಸ್ಥಳಾಂತರಿಸಲಾಗಿತ್ತು. ಇದೀಗ ಚೇತರಿಸಿಕೊಳ್ಳುತ್ತಿರುವ ಲಾಲು 'ನನಗಾಗಿ ನೀವೆಲ್ಲರೂ ಪ್ರಾರ್ಥಿಸಿದ್ದೀರಿ, ನೀವು ಸಹ ಚೆನ್ನಾಗಿರುತ್ತೀರಿ. ಎಲ್ಲರಿಗೂ ಧನ್ಯವಾದ' ಎಂದು ಹೇಳಿಕೆ ನೀಡಿದ್ದಾರೆ. ಪ್ರಸ್ತುತ ಅವರು ಸಿಂಗಾಪುರದಲ್ಲೇ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ.

ತೇಜಸ್ವಿಗೆ ಮೋದಿ ಕರೆ: ಲಾಲು ಪ್ರಸಾದ್​ ಆರೋಗ್ಯದ ವಿಚಾರಣೆ ಕುರಿತಾಗಿ ಪ್ರಧಾನಿ ಮೋದಿ, ಬಿಹಾರ ಡಿಸಿಎಂ ಆಗಿರುವ ಲಾಲು ಪುತ್ರ ತೇಜಸ್ವಿ ಯಾದವ್​ ಅವರಿಗೆ ದೂರವಾಣಿ ಕರೆ ಮಾಡಿದ್ದಾರೆ. ಲಾಲು ಆರೋಗ್ಯ ಸುಧಾರಣೆ ಬಗ್ಗೆ ಪ್ರಧಾನಿ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಲಾಲು ಪ್ರಸಾದ್​ ಯಾದವ್​ ಕಿಡ್ನಿ ಆಪರೇಷನ್​ ಸಕ್ಸ​ಸ್​.. ಮಾಜಿ ಸಿಎಂಗೆ ಮಗಳಿಂದ ಜೀವದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.