ಬಿಲಾಸ್ಪುರ್(ಛತ್ತೀಸ್ಗಢ): ಕಳ್ಳತನದ ಆರೋಪದ ಮೇಲೆ ವಾಚ್ಮ್ಯಾನ್ಯೋರ್ವನನ್ನು ತಲೆ ಕೆಳಗಾಗಿ ಮರಕ್ಕೆ ಕಟ್ಟಿ ಗ್ರಾಮಸ್ಥರು ಥಳಿಸಿರುವ ಅಮಾನವೀಯ ಘಟನೆ ಛತ್ತೀಸ್ಗಢನ ಬಿಲಾಸ್ಪುರ್ದಲ್ಲಿ ನಡೆದಿದೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಛತ್ತೀಸ್ಗಢದ ಬಿಲಾಸ್ಪುರ್ನ ಭಟ್ಟಗಾಂವ್ನಲ್ಲಿ ಕಳ್ಳತನ ಮಾಡಿರುವ ಶಂಕೆ ಮೇಲೆ ವಾಚ್ಮ್ಯಾನ್ಯೋರ್ವನನ್ನ ಹಿಡಿದು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈತನ ವಿಚಾರಣೆ ನಡೆಸಿದ ಪೊಲೀಸರು ಕೆಲ ಗಂಟೆಗಳ ಬಳಿಕ ಬಿಡುಗಡೆ ಮಾಡಿದ್ದಾರೆ. ಆದರೆ, ಗ್ರಾಮದ ಕೆಲವರು ಆತನನ್ನು ಹಿಡಿದು ದೊಣ್ಣೆಯಿಂದ ಥಳಿಸಿದ್ದಾರೆ. ಇದರ ಬೆನ್ನಲ್ಲೇ ತಲೆಕೆಳಗಾಗಿ ಮರಕ್ಕೆ ಕಟ್ಟಿ ಹಾಕಿ, ಹಿಂಸೆ ನೀಡಿದ್ದಾರೆ. ರಾತ್ರಿಯಿಡೀ ಮರದಲ್ಲೇ ತಲೆಕೆಳಗಾಗಿ ವ್ಯಕ್ತಿ ನೇತಾಡಿದ್ದಾನೆ. ತನ್ನನ್ನು ಕೆಳಗಿಳಿಸುವಂತೆ ಅನೇಕ ಸಲ ಮನವಿ ಮಾಡಿದ್ರೂ, ಯಾರು ಸಹ ಆತನ ಮಾತು ಕೇಳಿಲ್ಲ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಬಲಪಡಿಸಿ; ಹೆಚ್ ಕೆ ಪಾಟೀಲ್ಗೆ ಸೋನಿಯಾ ಕಿವಿಮಾತು
ಛತ್ತೀಸ್ಗಢದ ರತನ್ಪುರ ಪ್ರದೇಶದಲ್ಲಿ ವಾಸವಾಗಿರುವ ವ್ಯಕ್ತಿ ವಾಚ್ಮ್ಯಾನ್ ಆಗಿ ಕೆಲಸ ಮಾಡ್ತಿದ್ದು, ಆತನ ಮೇಲೆ ಗ್ರಾಮಸ್ಥರು ಕಳ್ಳತನದ ಆರೋಪ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ವಿಶ್ವಜಿತ್ ಭಾರ್ಗವ್, ಶಿವರಾಜ್, ಮನೀಶ್ ಎಂಬುವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.