ಮುಂಬೈ(ಮಹಾರಾಷ್ಟ್ರ): ನರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ ಅರುಣ್ ಬಾಲಿ(79) ಅವರು ಶುಕ್ರವಾರ ಮುಂಬೈನಲ್ಲಿ ನಿಧನರಾಗಿದ್ದಾರೆ.
3 ಇಡಿಯಟ್ಸ್, ಕೇದಾರನಾಥ್, ಪಾಣಿಪತ್ ಮತ್ತು ಟಿವಿ ಶೋಗಳಾದ ಕುಮುಮ್: ಏಕ್ ಪ್ಯಾರ ಸಾ ಬಂಧನ್, ಚಾಣಕ್ಯ, ದೂಸ್ರಾ ಕೇವಲ್, ಮರ್ಯಾದಾ ಮತ್ತು ಆರೋಹನ್ ಸೇರಿ ಹಲವು ಸಿನಿಮಾಗಳಲ್ಲಿನ ಪಾತ್ರಗಳಿಗೆ ನಟ ಜನಪ್ರಿಯರಾಗಿದ್ದರು.
ಅಪರೂಪದ ಮೈಸ್ತೇನಿಯಾ ಗ್ರ್ಯಾವಿಸ್ ಎಂಬ ನರ ಸಂಬಂಧಿ ಕಾಯಿಲೆಗೆಯಿಂದ ನಟ ಬಳಲುತ್ತಿದ್ದರು. ಅಲ್ಲದೇ ಅವರು ಈ ವರ್ಷದ ಆರಂಭದಲ್ಲಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ತೆರೆ ಕಂಡಿರುವ ಅಮಿತಾಬ್ ಬಚ್ಚನ್-ರಶ್ಮಿಕಾ ಮಂದಣ್ಣ ಅಭಿನಯದ 'ಗುಡ್ ಬೈ' ಅವರ ಕೊನೆಯ ಚಿತ್ರವಾಗಿದೆ.
ಇದನ್ನೂ ಓದಿ: ಓ ಪರಿ ಆಲ್ಬಂ ಹಾಡಿನ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ ಡಿಎಸ್ಪಿ