ETV Bharat / bharat

ಕಾಲಿಗೆ ಮಸಾಜ್ ಮಾಡುವಂತೆ ಹೇಳಿ​ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ವೇದ ಶಾಲೆಯ ಶಿಕ್ಷಕ ಅರೆಸ್ಟ್​ - ಅತ್ಯಾಚಾರ ಆರೋಪದಡಿ ವಾಶಿಮ್ ವೇದ ಶಾಲೆಯ ಶಿಕ್ಷಕನ ಬಂಧನ

Maharashtra Rape Case: ತನ್ನ ಕಾಲಿಗೆ ಮಸಾಜ್​ ಮಾಡುವಂತೆ ಹೇಳಿ 12 ವರ್ಷದ ವಿದ್ಯಾರ್ಥಿನಿ ಮೇಲೆ ವೇದ ಶಾಲೆಯೊಂದರ ಶಿಕ್ಷಕನೇ ಅತ್ಯಾಚಾರ ಮಾಡಿರುವ ಆರೋಪ ಪ್ರಕರಣ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ.

Rape in Maharashtra
12 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
author img

By

Published : Dec 25, 2021, 12:13 PM IST

ವಾಶಿಮ್ (ಮಹಾರಾಷ್ಟ್ರ): ಗುರುವನ್ನ ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಆದರೆ ಅಂತಹ ಗುರುವೇ ಕೆಲವೊಮ್ಮೆ ಕಾಮುಕ ರೂಪ ತಾಳಿರುವ ಅನೇಕ ಉದಾಹರಣೆಗಳನ್ನ ನಾವು ನೋಡಿದ್ದೇವೆ. ಇದೀಗ ಅಂತಹದ್ದೇ ಒಂದು ಘಟನೆ ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ವೇದ ಶಾಲೆಯೊಂದರ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.

ವಾಶಿಮ್ ನಗರದ ಶ್ರೀ ನರಸಿಂಗ್ ಸರಸ್ವತಿ ಸ್ವಾಮಿ ಮಹಾರಾಜ್ ವೇದಪಾಠ ಶಾಲೆಯ ಅಜಯ್ ಪಾಠಕ್ ಎಂಬ ಶಿಕ್ಷಕ ತನ್ನ ಕಾಲಿಗೆ ಮಸಾಜ್​ ಮಾಡುವಂತೆ ಹೇಳಿ 12 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ಬೆಂಗಳೂರು: ಗಾಂಜಾ ನಶೆಯಲ್ಲಿ ಮನೆಗೆ ನುಗ್ಗಿ ಸ್ನೇಹಿತನಿಂದಲೇ ಯುವಕನ ಬರ್ಬರ ಕೊಲೆ!

ಸಂತ್ರಸ್ತೆ ಘಟನೆಯ ಬಗ್ಗೆ ಹೇಳಿಕೊಂಡ ನಂತರ ಆಕೆಯ ಪೋಷಕರು ಮತ್ತು ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕ ಶಿಕ್ಷಕನನ್ನು ಕಂಬಿ ಹಿಂದೆ ನಿಲ್ಲಿಸಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.