ETV Bharat / bharat

ಭಾರೀ ಮಳೆಯ ನಡುವೆಯೂ ವಾರಣಾಸಿಯಲ್ಲಿ ವೈಭವದ ಗಂಗಾ ಆರತಿ: ವಿಡಿಯೋ - ಗಂಗಾ ಆರತಿ

ವಾರಣಾಸಿಯಲ್ಲಿ ಭಾರಿ ಮಳೆ, ಗಾಳಿಯ ನಡುವೆಯೂ ಗಂಗಾ ಆರತಿ ನೆರವೇರಿಸಲಾಯಿತು.

varanasi ganga aarti
ವಾರಣಾಸಿಯಲ್ಲಿ ವೈಭವದ ಗಂಗಾ ಆರತಿ
author img

By

Published : Apr 1, 2023, 9:50 AM IST

ವಾರಣಾಸಿಯಲ್ಲಿ ವೈಭವದ ಗಂಗಾ ಆರತಿ

ವಾರಣಾಸಿ(ಉತ್ತರ ಪ್ರದೇಶ): ಧಾರ್ಮಿಕ ನಗರಿ ವಾರಣಾಸಿಯಲ್ಲಿ ಭಾರಿ ಮಳೆಯ ನಡುವೆ ಗಂಗಾ ಆರತಿ ನೆರವೇರಿಸಲಾಯಿತು. ಶುಕ್ರವಾರ ಸಂಜೆ ವಾರಣಾಸಿಯ ಗಂಗಾ ನದಿಯ ದಡದಲ್ಲಿ ನಡೆದ ಆರತಿಯಲ್ಲಿ ವರುಣ ದೇವ ಗಂಗಾಮಾತೆಗೆ ಅಭಿಷೇಕ ಮಾಡಿದನು. ಮಳೆಯಲ್ಲೂ ಅರ್ಚಕರು ಪೂಜೆ ನಿಲ್ಲಿಸದೆ ಆರತಿ ಮುಂದುವರಿಸಿದರು. ಈ ಸಮಯದಲ್ಲಿ ದಶಾಶ್ವಮೇಧ ಸೇರಿದಂತೆ ಇತರ ಘಾಟ್‌ಗಳಲ್ಲಿ ವೈಭವದ ಗಂಗಾ ಆರತಿ ನೆರವೇರಿತು.

ಭಾರಿ ಮಳೆಯ ನಡುವೆ ಕಾಶಿಯ ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಸೇವಾ ನಿಧಿ ವತಿಯಿಂದ ಆಯೋಜಿಸುವ ಗಂಗಾ ಆರತಿಯನ್ನು ನೋಡಲು ವಿವಿಐಪಿಗಳಿಂದ ಹಿಡಿದು ಸಾಮಾನ್ಯ ಜನರು ದೇಶ ಮತ್ತು ಪ್ರಪಂಚದ ಮೂಲೆ ಮೂಲೆಗಳಿಂದ ಬರುತ್ತಾರೆ. ಶುಕ್ರವಾರ ಸಂಜೆ ಹವಾಮಾನ ವೈಪರೀತ್ಯದ ನಡುವೆ ದಿಢೀರ್‌ ಆರಂಭವಾದ ಭಾರಿ ಮಳೆ, ಗಾಳಿ ನಡುವೆ ಗಂಗಾ ಆರತಿ ನಡೆಯಿತು.

varanasi ganga aarti
ವಾರಣಾಸಿಯಲ್ಲಿ ವೈಭವದ ಗಂಗಾ ಆರತಿ

ಘಾಟ್‌ನಲ್ಲಿ ಸಂಜೆ ಗಂಗಾ ಆರತಿ ಆರಂಭವಾಗುವ ಮುನ್ನ ಭಾರಿ ಮಳೆ ಸುರಿಯಿತು. ಈ ವೇಳೆ ಅಲ್ಲಿದ್ದ ಜನರು ಸುರಕ್ಷಿತ ಸ್ಥಳದತ್ತ ಓಡಿದರು. ಆದರೆ ಸ್ವಲ್ಪ ಸಮಯದ ನಂತರ ಕಂಸಾಳೆಗಳ ಸದ್ದು ಪ್ರಾರಂಭವಾಯಿತು. ಮಳೆಯ ನಡುವೆಯೇ ನಡೆದ ಗಂಗಾ ಆರತಿ ವೀಕ್ಷಿಸಲು ಸಾವಿರಾರು ಜನರು ನೆರೆದಿದ್ದರು.

ಗಂಗಾ ಸೇವಾ ನಿಧಿ ಹಾಗೂ ಗಂಗೋತ್ರಿ ಸೇವಾ ಸಮಿತಿ ವತಿಯಿಂದ ನಡೆದ ಆರತಿಯಲ್ಲಿ ಸಂಧ್ಯಾ ವಂದನೆ ಆರಂಭವಾಗುತ್ತಿದ್ದಂತೆಯೇ ಮಳೆಯ ಆರ್ಭಟ ಜೋರಾಯಿತು. ಭಕ್ತರು ಸಹ ಈ ದೃಶ್ಯವನ್ನು ಕಣ್ತುಂಬಿಕೊಂಡರು ಮತ್ತು ಕ್ಯಾಮರಾಗಳಲ್ಲಿ ಕ್ಷಣವನ್ನು ಸೆರೆಹಿಡಿಯುತ್ತಿದ್ದರು. ಈ ಅದ್ಭುತ ಕಾಕತಾಳೀಯವಾಗಿತ್ತು.

varanasi ganga aarti
ವಾರಣಾಸಿಯಲ್ಲಿ ವೈಭವದ ಗಂಗಾ ಆರತಿ

ಮೊದಲು ಹತ್ತಿ ದೀಪಗಳ ಆರತಿ ನಂತರ ಕರ್ಪೂರದ ಆರತಿ ಜತೆಗೆ ಗಂಗಾಮಾತೆಯ ಔಪಚಾರಿಕ ಪೂಜೆ ನಡೆಯಿತು. ವಾರಣಾಸಿಯ ಧಾರ್ಮಿಕ ನಗರಿ ಕಾಶಿ ತನ್ನ ಸಂಪ್ರದಾಯಗಳು ಮತ್ತು ಧಾರ್ಮಿಕ ನಂಬಿಕೆಗಳನ್ನು ಅನುಸರಿಸುತ್ತದೆ. ಶುಕ್ರವಾರ ಸಂಜೆ ಅಸ್ಸಿ ಘಾಟ್‌ನಲ್ಲಿ ಜೈ ಮಾ ಗಂಗಾ ಸೇವಾ ಸಮಿತಿ ಆಯೋಜಿಸಿದ್ದ ಗಂಗಾ ಆರತಿಯಲ್ಲಿ ಮತ್ತೊಮ್ಮೆ ಈ ದೃಶ್ಯ ಸಾಕ್ಷಿಯಾಗಿದೆ.

ಗಂಗಾ ಆರತಿಯಲ್ಲಿ ಒಂದು ಕಡೆ ಗಂಗಾಮಾತೆಯ ಪೂಜೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ವರಣ ದೇವನಿಂದ ಜಲಾಭಿಷೇಕ ನಡೆಯುತ್ತಿತ್ತು. ಈ ಅದ್ಭುತ ಕಾಕತಾಳೀಯ ಕಾಶಿಯಲ್ಲಿ ಅಪರೂಪವಾಗಿ ಕಂಡು ಬರುತ್ತದೆ. ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ ನಗರದ ಹಲವು ಪ್ರದೇಶಗಳು ಜಲಾವೃತವಾಗಿದ್ದವು. ಹವಾಮಾನ ಇಲಾಖೆಯ ಪ್ರಕಾರ ವಾರಣಾಸಿಯಲ್ಲಿ ಇಂದು(ಏಪ್ರಿಲ್ 1) ಕೂಡ ಮಳೆ ಮುಂದುವರಿಯುವ ಸಾಧ್ಯತೆಯಿದೆ.

ಪೌರಾಣಿಕ ಹಿನ್ನೆಲೆ: ವಾರಣಾಸಿಯಲ್ಲಿ ಕಾಶಿ ವಿಶ್ವನಾಥನ ತಟದಲ್ಲಿರುವ ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿ ಮಾಡಲಾಗುತ್ತದೆ. 1991 ರಿಂದ ವಾರಣಾಸಿಯಲ್ಲಿ ಗಂಗಾ ಆರತಿ ಆಚರಿಸಿಕೊಂಡು ಬರಲಾಗುತ್ತಿದೆ. ಸೂರ್ಯಾಸ್ತದ ನಂತರ ಈ ಆರತಿ ನಡೆಯುತ್ತದೆ. ಗಂಗಾ ಆರತಿಯನ್ನು ಶಂಖನಾದದೊಂದಿಗೆ ಪ್ರಾರಂಭಿಸಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತದೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: ಗಂಗಾನದಿ ತಟದಲ್ಲಿ ನಡೆದ 'ಗಂಗಾ ಆರತಿ' ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.