ETV Bharat / bharat

Mann ki baat: ಕೋವಿಡ್ ಜಯಿಸಲು ಲಸಿಕೆಯೊಂದೇ ಮಾರ್ಗ.. ಪುನರುಚ್ಚರಿಸಿದ ಪ್ರಧಾನಿ - ಆಕ್ಸಿಜನ್ ಸರಬರಾಜು

COVID ಜಯಿಸಲು ಲಸಿಕೆಯೊಂದೇ ಮಾರ್ಗ ಎಂಬುದನ್ನು ಪ್ರಧಾನಿ ಮೋದಿ ತಮ್ಮ Mann ki Baat ಕಾರ್ಯಕ್ರಮದಲ್ಲಿ ಪುನರುಚ್ಚರಿಸಿದ್ದಾರೆ. ಅಲ್ಲದೆ, ಮುಂದಿನ ಮನ್​ ಕಿ ಬಾತ್​ನಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಸಲಹೆ ನೀಡುವಂತೆ ಜನತೆಗೆ ಮನವಿ ಮಾಡಿದ್ದಾರೆ.

pm-modi
ಪ್ರಧಾನಿ ಮೋದಿ
author img

By

Published : May 30, 2021, 5:19 PM IST

ನವದೆಹಲಿ: ಕೋವಿಡ್ ವಿರುದ್ಧದ ಹೋರಾಟದಲ್ಲಿ ಗೆಲುವು ಪಡೆಯಲು ಲಸಿಕೆಯೊಂದೇ ಮಾರ್ಗ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ. ಇಂದು 77ನೇ ಮನ್​​ ಕಿ ಬಾತ್​ ಸಂಚಿಕೆಯಲ್ಲಿ ಈ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾವು ಇಡೀ ಜಗತ್ತನ್ನೇ ಕಾಡುತ್ತಿದೆ. ಜನತೆ ಈ ವೇಳೆ ತಮ್ಮ ಪ್ರೀತಿ ಪಾತ್ರರನ್ನೂ ಕಳೆದುಕೊಂಡಿದ್ದಾರೆ. ದೊಡ್ಡ ದೊಡ್ಡ ದೇಶಗಳು ಸಹ ಈ ಬಿಕ್ಕಟ್ಟಿನಿಂದ ಪಾರಾಗಿಲ್ಲ ಎಂದಿದ್ದಾರೆ.

ಕೋವಿಡ್ ನಿಯಮಾವಳಿಗಳನ್ನು ಚಾಚುತಪ್ಪದೆ ಅನುಸರಿಸುವಂತೆ ಮತ್ತೊಮ್ಮೆ ಮನವಿ ಮಾಡಿದ ಮೋದಿ, ಮೊದಲ ಅಲೆಯಲ್ಲಿ ನಾವು ಈ ಬಿಕ್ಕಟ್ಟನ್ನು ಧೈರ್ಯವಾಗಿ ಎದುರಿಸಿದ್ದೇವೆ. ಈ ಬಾರಿಯೂ ಭಾರತ ವೈರಸ್​​​​​​ ಗೆದ್ದು ಬರಲಿದೆ. ಲಸಿಕೆ ಪಡೆಯುವುದು, ಮಾಸ್ಕ್, ಅಂತರ ಕಾಪಾಡಿಕೊಳ್ಳುವುದೇ ನಮ್ಮ ವಿಜಯದ ಹಾದಿಯಾಗಿದೆ ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ.

ಅಲ್ಲದೆ ಜನರಿಗೆ ಮುಂದಿನ ಮನ್​ ಕಿ ಬಾತ್​ನಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಸಲಹೆ ನೀಡುವಂತೆಯೂ ಮನವಿ ಮಾಡಿದ್ದಾರೆ. ಜೊತೆಗೆ 2ನೇ ಅಲೆಯಲ್ಲಿ ಜನರ ಜೀವ ಉಳಿಸಲು ಹೋರಾಡುತ್ತಿರುವ ಕೊರೊನಾ ವಾರಿಯರ್ಸ್​ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ.

ಈ ಸಂಚಿಕೆಯಲ್ಲಿ ಆಕ್ಸಿಜನ್ ಸರಬರಾಜು ಮಾಡುವ ಆಕ್ಸಿಜನ್ ಟ್ಯಾಂಕರ್ ಚಾಲಕ ದಿನೇಶ್ ಉಪಾಧ್ಯಾಯ್ ಹಾಗೂ ಲೋಕೋ ಪೈಲಟ್ ಶಿರಿಷ್​ ಅವರೊಂದಿಗೆ ಮೋದಿ ಮಾತನಾಡಿದರು.

ಓದಿರಿ: 'ತಿಂಗಳಿಗೊಮ್ಮೆ ಅರ್ಥಹೀನ ಮಾತು': ಮೋದಿ ಮನ್ ಕಿ ಬಾತ್​ಗೆ ರಾಗಾ ಟೀಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.