ನವದೆಹಲಿ: ಬುದ್ಧ ಪೌರ್ಣಿಮೆ ಅಂಗವಾಗಿ ಕೇಂದ್ರ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ವೆಸಾಕ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೋವಿಡ್ ಮುಂಚೂಣಿ ಕಾರ್ಯಕರ್ತರ ಸೇವೆಯನ್ನು ಕೊಂಡಾಡಿದರು.
ಕೋವಿಡ್ ಬಿಕ್ಕಟ್ಟಿನ ನಡುವೆ ತಮ್ಮ ಪ್ರಾಣ ಪಣಕ್ಕಿಟ್ಟು ನಿಸ್ವಾರ್ಥ ಸೇವೆ ಮಾಡುತ್ತಿರುವ ಮುಂಚೂಣಿ ಕಾರ್ಯಕರ್ತರಿಗೆ ನಮ್ಮ ಧನ್ಯವಾದಗಳು ಮತ್ತು ಸೋಂಕಿನಿಂದ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತಿದ್ದೇನೆ ಎಂದು ಪ್ರಧಾನಿ ಹೇಳಿದರು.
ಓದಿ : 15 ದಿನದೊಳಗೆ ಕ್ಷಮೆ ಕೇಳದಿದ್ದರೆ 1,000 ಕೋಟಿ ರೂ. ಪಾವತಿಸಿ : ಬಾಬಾ ರಾಮ್ ದೇವ್ಗೆ ಐಎಂಎ ನೋಟಿಸ್
ಕೋವಿಡ್ ಬಳಿಕ ಖಂಡಿತವಾಗಿಯೂ ಭೂಮಿ ಈ ಹಿಂದಿನಂತೆ ಇರುವುದಿಲ್ಲ. ಶತಮಾನದಲ್ಲಿ ನಾವು ಇಂತಹ ಸಮಸ್ಯೆಯನ್ನು ಎದುರಿಸಿಲ್ಲ. ಮುಂದೆ ಯಾವತ್ತಿಗೂ ನಾವು ಇದನ್ನು ನೆನಪಿಸಿಕೊಳ್ಳುತ್ತೇವೆ. ಕೋವಿಡ್ ಹೊಡೆದೋಡಿಸಲು ನಮಗಿರುವ ಮಾರ್ಗವೆಂದರೆ ಅದು ಲಸಿಕೆ ಮಾತ್ರ ಎಂದು ಮೋದಿ ಹೇಳಿದರು.
ವರ್ಚುವಲ್ ಆಗಿ ನಡೆದ ವೆಸಾಕ್ ಕಾರ್ಯಕ್ರಮದಲ್ಲಿ ಜಾಗತಿಕ ಬೌದ್ಧ ನಾಯಕರು ಪಾಲ್ಗೊಂಡಿದ್ದರು.