ETV Bharat / bharat

ಸಿಲ್ಕ್ಯಾರಾ ಸುರಂಗ ಕುಸಿತ: ಡ್ರಿಲ್ಲಿಂಗ್ ಯಂತ್ರದಲ್ಲಿ ತಾಂತ್ರಿಕ ದೋಷ, ಮತ್ತೆ ರಕ್ಷಣಾ ಕಾರ್ಯ ಸ್ಥಗಿತ - Silkyara tunnel in Uttarkashi

Uttarakhand tunnel collapse, rescue ops put on hold: ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರು ಹೊರಗೆ ಬರುವುದನ್ನು ಇಡೀ ದೇಶವೇ ಕಾಯುತ್ತಿದೆ. ಆದರೆ, ಗುರುವಾರ ರಾತ್ರಿ ಆಗರ್ ಡ್ರಿಲ್ಲಿಂಗ್ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಅಂತಿಮ ಹಂತದ ರಕ್ಷಣಾ ಕಾರ್ಯಾಚರಣೆಗೆ ಮತ್ತೊಮ್ಮೆ ಅಡ್ಡಿಯಾಗಿದೆ.

rescue ops put on hold again
ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ಕುಸಿತ: ಮತ್ತೆ ಸ್ಥಗಿತಗೊಂಡ ರಕ್ಷಣಾ ಕಾರ್ಯಾಚರಣೆ
author img

By PTI

Published : Nov 24, 2023, 8:43 AM IST

ಡೆಹ್ರಾಡೂನ್(ಉತ್ತರಾಖಂಡ): ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾದಲ್ಲಿ ಸಂಭವಿಸಿದ ಸುರಂಗ ಕುಸಿತ ಘಟನೆಯಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಕೊನೆಯ ಹಂತದಲ್ಲಿದೆ. ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ರಕ್ಷಣಾ ತಂಡವು ಅತ್ಯಂತ ಸಮೀಪ ತಲುಪಿದೆ. ಇಂದು (ಶುಕ್ರವಾರ) ರಕ್ಷಣಾ ಕಾರ್ಯಾಚರಣೆ ಮತ್ತೆ ಆರಂಭವಾದರೆ 13ನೇ ದಿನಕ್ಕೆ ಕಾಲಿಡಲಿದೆ. ಕಾರ್ಮಿಕರು ಮತ್ತು ರಕ್ಷಣಾ ತಂಡಗಳ ನಡುವೆ ಕೆಲವೇ ಮೀಟರ್‌ಗಳ ಅಂತರವಿದೆ. ನಿನ್ನೆ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ಪೂರ್ಣಗೊಳ್ಳುವ ಸಾಧ್ಯತೆ ಹೆಚ್ಚಿತ್ತು. ಆದರೆ, ಆಗರ್ ಡ್ರಿಲ್ಲಿಂಗ್ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಗುಡ್ಡ ಕೊರೆಯುವ ಕಾರ್ಯವನ್ನು ಅನಿವಾರ್ಯವಾಗಿ ನಿಲ್ಲಿಸಬೇಕಾಯಿತು.

  • #WATCH | Uttarkashi (Uttarakhand) tunnel rescue | Former advisor to PMO, Bhaskar Khulbe says, "The situation is much better now. Last night, we had to work on two things. First, we had to revamp the platform of the machine... Parsons Company had done the ground penetration radar,… pic.twitter.com/2qbHYPqs04

    — ANI (@ANI) November 24, 2023 " class="align-text-top noRightClick twitterSection" data=" ">

12 ದಿನಗಳ ರಕ್ಷಣಾ ಕಾರ್ಯಾಚರಣೆಯ ಸಂಪೂರ್ಣ ವಿವರ: ಉತ್ತರಕಾಶಿಯಲ್ಲಿ ಚಾರ್ ಧಾಮ್ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಸಿಲ್ಕ್ಯಾರಿ ಸುರಂಗದಲ್ಲಿ ನವೆಂಬರ್ 12ರಂದು ಭೂಕುಸಿತ ಉಂಟಾಗಿತ್ತು. ಸುರಂಗದಲ್ಲಿ ಕೆಲಸ ಮಾಡುತ್ತಿದ್ದ 41 ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ಅಂದಿನಿಂದ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಕೊರೆಯುವ ಯಂತ್ರ ಮೂರು ಬಾರಿ ಕೆಟ್ಟು ನಿಂತಿದೆ. ಶುಕ್ರವಾರದ ವೇಳೆಗೆ ಸರಿಯಾಗಲಿದೆ ಎಂದು ಅಂತರರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ತಿಳಿಸಿದ್ದಾರೆ.

  • #WATCH | Madhya Pradesh: Priests at the Mahakaleshwar temple in Ujjain, offered special prayers for the safety of 41 workers trapped inside the Silkyara Tunnel in Uttarkashi, Uttarakhand pic.twitter.com/1FDIBODr3y

12 ನವೆಂಬರ್: ದೀಪಾವಳಿಯ ದಿನದಂದು ಬೆಳಿಗ್ಗೆ 5.30ರ ಸುಮಾರಿಗೆ ಭೂಕುಸಿತ ಸಂಭವಿಸಿತು. ಸುರಂಗದ ಒಂದು ಭಾಗ ಕುಸಿದು ಕಾರ್ಮಿಕರು ಸಿಲುಕಿಕೊಂಡರು. ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಸಿಕ್ಕಿಬಿದ್ದ ಕಾರ್ಮಿಕರಿಗೆ ಗಾಳಿ ಸಂಕುಚಿತ ಪೈಪ್‌ಗಳ ಮೂಲಕ ಆಮ್ಲಜನಕ, ವಿದ್ಯುತ್ ಮತ್ತು ಆಹಾರವನ್ನು ಪೂರೈಸಲು ವ್ಯವಸ್ಥೆ ಮಾಡಲಾಗಿತ್ತು. ಎನ್​ಡಿಆರ್​ಎಫ್​, ಎಸ್​ಡಿಆರ್​ಎಫ್, ಬಿಆರ್​ಒ, ಯೋಜನೆ ಸಂಬಂಧಿತ ಸಂಸ್ಥೆ ಎನ್​ಹೆಚ್​​ಐಡಿಸಿಎಲ್​ ಮತ್ತು ಐಟಿಬಿಪಿ ಸೇರಿದಂತೆ ಹಲವು ಏಜೆನ್ಸಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.

  • #WATCH | Uttarkashi (Uttarakhand) tunnel rescue | Latest visuals from outside the tunnel

    Drilling work was halted yesterday after a technical snag in the Auger drilling machine. Till now, rescuers have drilled up to 46.8 meters in the Silkyara tunnel pic.twitter.com/OVpFR5og7R

ನವೆಂಬರ್ 13: ಆಮ್ಲಜನಕವನ್ನು ಪೂರೈಸುವ ಪೈಪ್ ಮೂಲಕ ಕಾರ್ಮಿಕರನ್ನು ಸಂಪರ್ಕಿಸಲಾಯಿತು. ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಎಂದು ಮಾಹಿತಿ ನೀಡಿದರು. ಮುಖ್ಯಮಂತ್ರಿ ಪುಷ್ಕರ್ ಧಾಮಿ ಕೂಡ ಸ್ಥಳಕ್ಕೆ ಆಗಮಿಸಿದರು. ಮೇಲಿನಿಂದ ಸುರಂಗದ ಮೇಲೆ ಅವಶೇಷಗಳು ಬೀಳುತ್ತಲೇ ಇದ್ದವು. ಇದರಿಂದ ಸುಮಾರು 30 ಮೀಟರ್ ಪ್ರದೇಶದಲ್ಲಿ 60 ಮೀಟರ್ ವರೆಗೆ ಹರಡಿಕೊಂಡಿದ್ದ ಅವಶೇಷಗಳಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿತ್ತು. ಅವಶೇಷಗಳನ್ನು ತಡೆಯಲು ಕಾಂಕ್ರೀಟ್ ಕೂಡ ಹಾಕಲಾಗಿತ್ತು.

ನವೆಂಬರ್ 14: ಸ್ಥಳಕ್ಕೆ 800 ಮತ್ತು 900 ಎಂಎಂ ಉಕ್ಕಿನ ಕೊಳವೆಗಳನ್ನು ತರಲಾಯಿತು. ಆಗರ್ ಯಂತ್ರದ ಸಹಾಯದಿಂದ ಲಂಬ ಕೊರೆಯುವಿಕೆಯನ್ನು ಪ್ರಾರಂಭಿಸಲಾಯಿತು. ಆದರೆ, ಏಕಾಏಕಿ ಅವಶೇಷಗಳು ಬಿದ್ದಿದ್ದರಿಂದ ಇಬ್ಬರು ಕಾರ್ಮಿಕರಿಗೆ ಸಣ್ಣ ಗಾಯಗಳಾಯಿತು. ಸಿಕ್ಕಿಬಿದ್ದ ಕಾರ್ಮಿಕರಿಗೆ ಆಹಾರ, ನೀರು, ಆಮ್ಲಜನಕ, ವಿದ್ಯುತ್ ಮತ್ತು ಔಷಧಗಳ ಪೂರೈಕೆಯನ್ನು ಮುಂದುವರೆಸಲಾಯಿತು. ಅವರಲ್ಲಿ ಕೆಲವರು ತಲೆನೋವು ಮತ್ತು ಇತರ ಕಾಯಿಲೆಗಳ ಬಗ್ಗೆ ತುತ್ತಾಗಿದ್ದಾರೆ.

15 ನವೆಂಬರ್: ಮೊದಲ ಕೊರೆಯುವ ಯಂತ್ರದ ಕಾರ್ಯ ಯಶಸ್ವಿಯಾಗಲಿಲ್ಲ. ಬಳಿಕ ಎನ್‌ಎಚ್‌ಐಡಿಸಿಎಲ್ ಅತ್ಯಾಧುನಿಕ ಆಗರ್ ಯಂತ್ರಕ್ಕೆ (ಅಮೆರಿಕನ್ ನಿರ್ಮಿತ ಆಗರ್ ಡ್ರಿಲ್ಲಿಂಗ್ ಮೆಷಿನ್) ಬೇಡಿಕೆ ಇಡಲಾಗಿತ್ತು. ಈ ಯಂತ್ರವನ್ನು ದೆಹಲಿಯಿಂದ ವಿಮಾನದಲ್ಲಿ ತರಲಾಯಿತು.

  • #WATCH | Uttarkashi(Uttarakhand) Tunnel rescue | On the drone technology that is being used in the rescue operation, Cyriac Joseph, MD & CEO, Squadrone Infra Mining Pvt Ltd says, "This (drone) is one of the latest technologies which can go inside the tunnel, it goes into GPS… pic.twitter.com/XGve8bkShU

16 ನವೆಂಬರ್: ಕೊರೆಯುವ ಯಂತ್ರವನ್ನು ಜೋಡಿಸಲಾಯಿತು. ಈ ಯಂತ್ರವು ಮಧ್ಯರಾತ್ರಿಯ ನಂತರ ಕೆಲಸ ಮಾಡಲು ಪ್ರಾರಂಭಿಸಿತು.

17 ನವೆಂಬರ್: ಯಂತ್ರವು ರಾತ್ರಿಯಿಡೀ ಕೆಲಸ ಮಾಡಿತು. ಮಧ್ಯಾಹ್ನದ ವೇಳೆಗೆ, 57 ಮೀಟರ್ ಉದ್ದದ ಅವಶೇಷಗಳನ್ನು ಕತ್ತರಿಸಿತು. ಸುಮಾರು 24 ಮೀಟರ್ ಕೊರೆಯುವಿಕೆಯವನ್ನು ಪೂರ್ಣಗೊಳಿಸಿತು. ನಾಲ್ಕು ಎಂಎಸ್ ಪೈಪ್‌ಗಳನ್ನು ಅಳವಡಿಸಲಾಯಿತು. ಐದನೇ ಪೈಪ್ ಹಾಕುವಾಗ ಒಂದು ಕಲ್ಲು ಅಡ್ಡ ಬಂದಿದೆ. ಆಗ ಮತ್ತೊಂದು ಆಗರ್ ಯಂತ್ರವನ್ನು ಇಂದೋರ್‌ನಿಂದ ವಿಮಾನದಲ್ಲಿ ತರಲಾಯಿತು. ಸಂಜೆ ವೇಳೆಗೆ ಸುರಂಗದಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿತ್ತು ಎಂದು ಎನ್ಎಚ್ಐಡಿಸಿಎಲ್ ಮಾಹಿತಿ ನೀಡಿದೆ. ತಜ್ಞರ ವರದಿಯ ಆಧಾರದ ಮೇಲೆ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸಲಾಯಿತು.

18 ನವೆಂಬರ್: ಕೊರೆಯುವಿಕೆಯನ್ನು ಪ್ರಾರಂಭಿಸಲಾಗಿಲ್ಲ. ಸುರಂಗದೊಳಗೆ ಅಮೆರಿಕದ ಆಗರ್ ಯಂತ್ರದಿಂದ ಉಂಟಾಗುವ ಕಂಪನದಿಂದಾಗಿ ಹೆಚ್ಚಿನ ಅವಶೇಷಗಳು ಬೀಳಬಹುದು, ಇದರಿಂದಾಗಿ ರಕ್ಷಣಾ ಕಾರ್ಯಕರ್ತರು ಸಹ ತೊಂದರೆಗೆ ಸಿಲುಕಬಹುದು ಎಂದು ತಜ್ಞರು ಹೇಳಿದ್ದರು. ಪಿಎಂಒ ಅಧಿಕಾರಿಗಳು ಮತ್ತು ತಜ್ಞರ ತಂಡವು ಪರ್ಯಾಯ ಕ್ರಮಕ್ಕೆ ಮುಂದಾಯಿತು. ಸುರಂಗದ ಮೇಲಿನ ಭಾಗದಿಂದ ಸಮತಲ ಕೊರೆಯುವಿಕೆ ಸೇರಿದಂತೆ ಐದು ಕಾರ್ಯಗಳನ್ನು ಏಕಕಾಲದಲ್ಲಿ ಮಾಡಲು ನಿರ್ಧರಿಸಿದ್ದರು.

ನವೆಂಬರ್ 19: ಕೊರೆಯುವ ಕೆಲಸ ಸ್ಥಗಿತಗೊಂಡಿದೆ. ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಆಗಮಿಸಿದ್ದರು. ಬೃಹತ್ ಆಗರ್ ಯಂತ್ರಗಳೊಂದಿಗೆ ಸಮತಲ ಕೊರೆಯುವಿಕೆ ಅತ್ಯುತ್ತಮ ಆಯ್ಕೆಯಾಗಿದೆ ಎಂದು ತಿಳಿಸಿದ್ದರು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಬಿಆರ್‌ಒ ನೇತೃತ್ವ ವಹಿಸಿಕೊಂಡಿದ್ದರು.

ನವೆಂಬರ್ 20: ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಧಾಮಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಿ. ಅದಕ್ಕೆ ಅಗತ್ಯವಿರುವ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಶಿಲೆಗಳ ನಡುವೆ ಆರು ಇಂಚು ಅಗಲದ ಪೈಪ್‌ಲೈನ್ ಅನ್ನು ಹಾಕಿದರು. ಇದು ಒಳಗೆ ಸಿಲುಕಿರುವ ಕಾರ್ಮಿಕರಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ತಲುಪಿಸಲು ಸಹಾಯ ಮಾಡಿತು. ಆದರೆ, ಅಲ್ಲಿಯವರೆಗೂ ಸಮತಲ ಕೊರೆತ ಪುನರಾರಂಭಗೊಂಡಿರಲಿಲ್ಲ. ಆಗರ್ ಯಂತ್ರದ ಮೂಲಕ ಕಲ್ಲು ಬಂಡೆ ಗುರುತಿಸಿದ ನಂತರ ಕಾರ್ಯ ಸ್ಥಗಿತಗೊಳಿಸಲಾಯಿತು. ವಿದೇಶದ ಸುರಂಗ ತಜ್ಞರನ್ನು ಕರೆಸಲಾಗಿತ್ತು. ನಂತರ ಲಂಬ ಕೊರೆಯುವಿಕೆಯನ್ನು ಪ್ರಾರಂಭಿಸಲಾಯಿತು.

ನವೆಂಬರ್ 21: ಬೆಳಿಗ್ಗೆ ರಕ್ಷಣಾ ಕಾರ್ಯಕೈಗೊಂಡವರು, ಸಿಲುಕಿದ ಕಾರ್ಮಿಕರ ಮೊದಲ ವಿಡಿಯೋವನ್ನು ಬಿಡುಗಡೆ ಮಾಡಿದರು. ಅದರಲ್ಲಿ ಹಳದಿ ಮತ್ತು ಬಿಳಿ ಹೆಲ್ಮೆಟ್ ಧರಿಸಿದ ಕಾರ್ಮಿಕರು ಮಾತನಾಡುತ್ತಿರುವುದು ಕಂಡುಬಂತು. ಪೈಪ್‌ಲೈನ್ ಮೂಲಕ ಆಹಾರವನ್ನೂ ಕಳುಹಿಸಲಾಗಿತ್ತು. ಅವರು ಪರಸ್ಪರ ಮಾತನಾಡುತ್ತಿರುವುದು ತಿಳಿಯಿತು. ಎನ್​ಎಚ್​ಐಟಿಡಿಸಿಎಲ್​ ರಾತ್ರೋರಾತ್ರಿ ಸಿಲ್ಕ್ಯಾರಾ ಅಂತ್ಯದಿಂದ ಆಗರ್ ಯಂತ್ರದಿಂದ ಕಾರ್ಯಾಚರಣೆಗಳನ್ನು ಪುನರಾರಂಭಿಸಿತು.

ನವೆಂಬರ್ 22: ಆಂಬ್ಯುಲೆನ್ಸ್‌ಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗಿತ್ತು. ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ವಿಶೇಷ ವಾರ್ಡ್ ಸಿದ್ಧಪಡಿಸಲಾಗಿತ್ತು. 800 ಮಿಮೀ ವ್ಯಾಸದ ಉಕ್ಕಿನ ಕೊಳವೆಗಳ ಸಮತಲ ಕೊರೆಯುವಿಕೆಯು ಸುಮಾರು 45 ಮೀಟರ್ ತಲುಪಿತು. 12 ಮೀಟರ್ ಅಂತರ ಮಾತ್ರ ಉಳಿದಿದೆ. ಅವಶೇಷಗಳ ಒಟ್ಟು ಪ್ರಮಾಣ 57 ರಿಂದ 60 ಮೀಟರ್ ಎಂದು ಹೇಳಲಾಗಿದೆ. ಆದರೆ, ಸಂಜೆ ವೇಳೆ ಕೆಲ ಕಬ್ಬಿಣದ ರಾಡ್‌ಗಳಿಂದ ಆಗರ್ ಯಂತ್ರದ ಕಾರ್ಯಕ್ಕೆ ಅಡ್ಡಿಯಾಯಿತು. ಆದ್ರೆ ಲಂಬ ಕೊರೆಯುವಿಕೆಯಲ್ಲಿ ಉತ್ತಮ ಯಶಸ್ಸು ಸಾಧಿಸಿತು.

ನವೆಂಬರ್ 23: ಗುರುವಾರ ಬೆಳಿಗ್ಗೆ ತೆಗೆದ ಕಬ್ಬಿಣದ ಸರಳುಗಳಿಂದಾಗಿ ಕೊರೆಯುವಿಕೆಯು ಆರು ಗಂಟೆಗಳ ಕಾಲ ವಿಳಂಬವಾಯಿತು. ರಕ್ಷಣಾ ಕಾರ್ಯಾಚರಣೆಯನ್ನು ಪುನರಾರಂಭಿಸಲಾಯಿತು. 1.8 ಮೀಟರ್‌ಗಳಷ್ಟು ಕೊರೆವಿಕೆಯ ಕಾರ್ಯ ಸಫಲವಾಗಿದೆ ಎಂದು ರಾಜ್ಯ ಸರ್ಕಾರದ ನೋಡಲ್ ಅಧಿಕಾರಿ ತಿಳಿಸಿದ್ದಾರೆ. ಕೊರೆಯುವಿಕೆಯು 48 ಮೀಟರ್ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕೊರೆಯುವ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಕೆಲಸ ನಿಲ್ಲಿಸಬೇಕಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಓರ್ವ ನಟ; ಚುನಾವಣೆಯ ನಂತರ ಬಿಜೆಪಿಯವರಿಗೆ ಮುಖ ತೋರಿಸಲು ಆಗಲ್ಲ-ಗೆಹ್ಲೋಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.