ETV Bharat / bharat

ಮಧ್ಯರಾತ್ರಿ 10 ಕಿಮೀ ಓಡಿಯೇ ಮನೆ ಸೇರುವ ಯುವಕನ ತಾಯಿಗೆ ದೆಹಲಿ ಸರ್ಕಾರದಿಂದ ಉಚಿತ ಚಿಕಿತ್ಸೆ

ಭಾರತೀಯ ಸೇನೆ ಸೇರಬೇಕು ಎಂಬ ಸದುದ್ದೇಶದಿಂದ ಮಧ್ಯರಾತ್ರಿ 10 ಕಿಲೋ ಮೀಟರ್ ಓಡುವ ಯುವಕನಿಗೆ ದೆಹಲಿ ಸರ್ಕಾರ ಕೂಡ ಸಹಾಯಹಸ್ತ ನೀಡಲು ಮುಂದಾಗಿದೆ.

Uttarakhand teen viral video
Uttarakhand teen viral video
author img

By

Published : Mar 22, 2022, 5:37 PM IST

ಡೆಹ್ರಾಡೂನ್​(ಉತ್ತರಾಖಂಡ): ಮೆಕ್​ಡೊನಾಲ್ಡ್ ಕಂಪನಿಯಲ್ಲಿ ಕೆಲಸ ಮಾಡುವ 19 ವರ್ಷದ ಯುವಕ ಪ್ರದೀಪ್ ಮೆಹ್ರಾ, ಕೆಲಸ ಮುಗಿಸಿ ಮಧ್ಯರಾತ್ರಿ 10 ಕಿಲೋ ಮೀಟರ್​ ಓಡುತ್ತಲೇ ಮನೆ ಸೇರುವ ವಿಡಿಯೋ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

ಇದೀಗ ಅನಾರೋಗ್ಯದಿಂದ ಬಳಲುತ್ತಿರುವ ಪ್ರದೀಪ್​ ಮೆಹ್ರಾ ತಾಯಿಗೆ ದೆಹಲಿ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡುವುದಾಗಿ ಘೋಷಿಸಿದೆ. ಭಾರತೀಯ ಸೇನೆ ಸೇರುವ ಉದ್ದೇಶದಿಂದ ಈ ಯುವಕ ಪ್ರತಿದಿನ 10 ಕಿಲೋ ಮೀಟರ್ ಓಡುತ್ತಲೇ ತನ್ನ ಮನೆ ಸೇರಿಕೊಳ್ಳುತ್ತಿದ್ದ. ಈತನ ತಾಯಿ ಅನಾರೋಗ್ಯಪೀಡಿತರಾಗಿದ್ದು ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ವಿಷಯವನ್ನು ಖುದ್ದಾಗಿ ಆತನೇ ಹೇಳಿಕೊಂಡಿದ್ದ. ಇದೀಗ ಅರವಿಂದ್ ಕೇಜ್ರಿವಾಲ್​ ಸರ್ಕಾರ ಸಹಾಯಹಸ್ತ ಚಾಚಿದ್ದು, ಉಚಿತವಾಗಿ ಚಿಕಿತ್ಸೆ ನೀಡುವ ಭರವಸೆ ನೀಡಿದೆ.

ಇದನ್ನೂ ಓದಿ: ಕೆಲಸ ಮುಗಿಸಿ ಮಧ್ಯರಾತ್ರಿ 10 ಕಿ.ಮೀ ಓಡಿಯೇ ಮನೆ ಸೇರುವ ಯುವಕನಿಗೆ ಸೇನಾಧಿಕಾರಿ​​ ನೀಡಿದ್ರು ಬಂಪರ್ ಆಫರ್!

ತಾಯಿಯ ಚಿಕಿತ್ಸೆಗೋಸ್ಕರ ಪ್ರದೀಪ್ ಮೆಹ್ರಾ ಕುಟುಂಬ ಈಗಾಗಲೇ ಲಕ್ಷಾಂತರ ರೂಪಾಯಿ ಸಾಲ ಮಾಡಿದೆಯಂತೆ.

ಭಾರತೀಯ ಸೇನೆ ಸೇರಲು ಮುಂದಾಗಿರುವ ಪ್ರದೀಪ್​ಗೆ ನಿವೃತ್ತ ಲೆಫ್ಟಿನೆಂಟ್​ ಜನರಲ್​ ಸತೀಶ್ ದುವಾ, ಭಾರತೀಯ ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಕಲ ರೀತಿಯಿಂದಲೂ ತಾವು ಸಹಾಯ ಮಾಡುವುದಾಗಿ ನಿನ್ನೆ ಪ್ರಕಟಿಸಿದ್ದರು. ಸೇನಾ ಕಮಾಂಡರ್​​ ಲೆಫ್ಟಿನೆಂಟ್ ಜನರಲ್​ ರಾಣಾ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು, ತಮ್ಮ ರೆಜಿಮೆಂಟ್​​ನಲ್ಲಿ ನೇಮಕಾತಿ ಮಾಡಿಕೊಳ್ಳಲು ತರಬೇತಿ ನೀಡುವುದಾಗಿ ತಿಳಿಸಿದ್ದಾಗಿ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.