ETV Bharat / bharat

ಉತ್ತರಾಖಂಡ ಹಿಮಸ್ಫೋಟ : 2 ಮೃತದೇಹ ಪತ್ತೆ, 291 ಜನರ ರಕ್ಷಣೆ, ಮುಂದುವರಿದ ಕಾರ್ಯಾಚರಣೆ - ಉತ್ತರಾಖಂಡದಲ್ಲಿ ಹಿಮಸ್ಪೋಟ ದುರಂತ

ಉತ್ತರಾಖಂಡದಲ್ಲಿ ಹಿಮಸ್ಫೋಟದ ನಂತರ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, 291 ಜನರನ್ನು ಭಾರತೀಯ ಸೇನೆ ರಕ್ಷಿಸಿದೆ. ಭಾರೀ ಹಿಮಪಾತದಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ, ರಕ್ಷಣಾ ತಂಡವೂ ಹಿಮಪಾತದಲ್ಲಿ ಸಿಲುಕಿಕೊಂಡಿದೆ.

Uttarakhand glacier burst
ಉತ್ತರಾಖಂಡ ಹಿಮಪಾತ
author img

By

Published : Apr 24, 2021, 1:56 PM IST

Updated : Apr 24, 2021, 2:01 PM IST

ಜೋಶಿಮಠ : ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮಸ್ಫೋಟ ನಡೆದ ಸ್ಥಳದಿಂದ 2 ಮೃತದೇಹಗಳನ್ನು ಮೇಲೆತ್ತಲಾಗಿದ್ದು, 291 ಜನರನ್ನು ರಕ್ಷಿಸಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ಎರಡು ಮೃತದೇಹಗಳನ್ನು ಈಗಾಗಲೇ ಮೇಲೆತ್ತಲಾಗಿದೆ. ಭೂಕುಸಿತದಿಂದಾಗಿ 4 ರಿಂದ 5 ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಶುಕ್ರವಾರ ಸಂಜೆಯಿಂದ ಭಪುಂಡ್​​ನಿಂದ ಸುಮ್ನಾಕ್ಕೆ ಹೋಗುವ ಮಾರ್ಗದಲ್ಲಿನ ಹಿಮ ತೆರವುಗೊಳಿಸಲು ಜೋಶಿ ಮಠದ ಬಿಆರ್‌ಟಿಎಫ್ ತಂಡಗಳು ಕಾರ್ಯನಿರ್ವಹಿಸುತ್ತಿವೆ. ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲು ಇನ್ನೂ 6-8 ಗಂಟೆಗಳು ಬೇಕಾಗಬಹುದು ಎಂದು ಸೇನೆ ತಿಳಿಸಿದೆ.

ಭಾರೀ ಹಿಮಪಾತವು ಜಿಲ್ಲಾಡಳಿತ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಬಿಆರ್‌ಒ ತಂಡಗಳ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವ ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರಿ ಹಿಮಪಾತದ ನಡುವೆ ರಕ್ಷಣಾ ತಂಡದ ಕೆಲವು ಅಧಿಕಾರಿಗಳೂ ಸಿಲುಕಿಕೊಂಡಿದ್ದಾರೆ.

ಸುಮ್ನಾ ಗ್ರಾಮದಿಂದ ಮೂರು ಕಿಲೋಮೀಟರ್ ದೂರದಲ್ಲಿ ಘಟನೆ ಸಂಭವಿಸಿದ್ದು, ಇಲ್ಲಿಯೇ ಬಾರ್ಡರ್ ರೋಡ್​ ಆರ್ಗನೈಝೇಷನ್​ನ ಎರಡು ಕಾರ್ಮಿಕ ಕ್ಯಾಂಪ್​ಗಳಿವೆ. ಈ ಪ್ರದೇಶದಲ್ಲಿ ಕಳೆದ 5 ದಿನಗಳಿಂದ ಭಾರಿ ಮಳೆ ಮತ್ತು ಹಿಮಪಾತವಾಗುತ್ತಿದೆ ಎಂದು ಸೇನೆ ಹೇಳಿದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯ ಭಾರತ - ಚೀನಾ ಗಡಿಯ ಸಮೀಪವಿರುವ ಸುಮ್ನಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಹಿಮಸ್ಫೋಟ ಸಂಭವಿಸಿದೆ. ರಿಷಿ ಗಂಗಾ ನದಿಯ ನೀರಿನ ಮಟ್ಟ ಎರಡು ಅಡಿ ಏರಿಕೆಯಾಗಿದೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಿಳಿಸಿದೆ.

  • 291 persons have been rescued so far after a BRO Camp came under avalanche yesterday during heavy snowfall in Sumna area of Joshimath Sector in Chamoli district of Uttarakhand: Central Command, Indian Army pic.twitter.com/d4EkctICHI

    — ANI (@ANI) April 24, 2021 " class="align-text-top noRightClick twitterSection" data=" ">

ಓದಿ : ಉತ್ತರಾಖಂಡದ ಭಾರತ-ಚೀನಾ ಗಡಿ ಬಳಿ ಹಿಮಸ್ಫೋಟ

ಹಿಮಸ್ಫೋಟದ ಬಗ್ಗೆ ವರದಿಯಾದ ಕೂಡಲೇ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಪ್ರತಿಕ್ರಿಯಿಸಿದ್ದು, "ನಿತಿ ಕಣಿವೆಯ ಸುಮ್ನಾ ಗ್ರಾಮದಲ್ಲಿ ಹಿಮಸ್ಫೋಟದ ಬಗ್ಗೆ ನನಗೆ ಸುದ್ದಿ ಬಂದಿದೆ. ನಾನು ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದ್ದೇನೆ ಮತ್ತು ಬಿಆರ್‌ಟಿಒ ಮತ್ತು ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ" ಎಂದು ತಿಳಿಸಿದ್ದಾರೆ.

ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ತಿರಥ್ ಸಿಂಗ್ ರಾವತ್

ಘಟನೆಯ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಅಹಿತಕರ ಘಟನೆಗಳನ್ನು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ರಾತ್ರಿ ಎನ್‌ಟಿಪಿಸಿ ಮತ್ತು ಇತರ ಜಲವಿದ್ಯುತ್ ಸ್ಥಾವರಗಳ ಕೆಲಸ ನಿಲ್ಲಿಸುವಂತೆ ಸೂಚಿಸಿದ್ದೇನೆ ಎಂದು ರಾವತ್ ಹೇಳಿದ್ದಾರೆ. ಸಿಎಂ ಘಟನೆ ನಡೆದ ಸ್ಥಳದ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.

ಘಟನೆ ಬಗ್ಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದು, ಸಹಾಯಕ್ಕಾಗಿ ಐಟಿಬಿಪಿ ಪಡೆಯನ್ನು ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.

Last Updated : Apr 24, 2021, 2:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.