ETV Bharat / bharat

ಉತ್ತರಾಖಂಡದಲ್ಲಿ ಹೆಚ್ಚಿದ ಸೋಂಕಿನ ಪ್ರಮಾಣ: ಭಾರತ - ನೇಪಾಳ ಗಡಿಯಲ್ಲಿ ಕೋವಿಡ್​ ಟೆಸ್ಟ್

author img

By

Published : Nov 28, 2020, 11:18 AM IST

ಲಾಕ್​ಡೌನ್​ ಸಮಯದಲ್ಲಿ ಭಾರತೀಯ ವ್ಯಾಪಾರಿಗಳನ್ನು ನೇಪಾಳ ಆಡಳಿತವು ಸೂಕ್ತ ರೀತಿಯಲ್ಲಿ ಪರಿಗಣಿಸದ ಕಾರಣ, ಇದೀಗ ಉತ್ತರಾಖಂಡದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ನೇಪಾಳಿ ನಾಗರಿಕರನ್ನು ಗಡಿಯಲ್ಲೇ ಟೆಸ್ಟ್​​ಗೆ ಒಳಪಡಿಸಲಾಗುತ್ತಿದೆ.

Uttarakhand boost testing near India-nepal border as Covid-19 cases soar
ಭಾರತ-ನೇಪಾಳ ಗಡಿಯಲ್ಲಿ ಕೋವಿಡ್​ ಟೆಸ್ಟ್

ಖಾತಿಮಾ (ಉತ್ತರಾಖಂಡ): ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ವ್ಯಾಪಾರಿಗಳ ಒತ್ತಾಯದ ಮೇರೆಗೆ ಭಾರತ - ನೇಪಾಳ ಗಡಿಯಲ್ಲಿ ಉತ್ತರಾಖಂಡದ ಆರೋಗ್ಯ ಇಲಾಖೆ ಅಧಿಕಾರಿಗಳು ಕೋವಿಡ್​ ಟೆಸ್ಟ್​ ನಡೆಸುತ್ತಿದ್ದಾರೆ.

ಗುಡ್ಡಗಾಡು ಜಿಲ್ಲೆಗಳಲ್ಲಿನ ಜನರಿಗೆ ವಿಶೇಷವಾಗಿ ನೇಪಾಳದಿಂದ ಬರುವವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕುಮಾವೂನ್ ಪ್ರದೇಶದಲ್ಲಿ ಕೋವಿಡ್​ ಅಬ್ಬರಿಸಿದ್ದರೂ ಆರಂಭದಲ್ಲಿ ಇದು ಗುಡ್ಡಗಾಡು ಪ್ರದೇಶಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರಲಿಲ್ಲ. ಇದೀಗ ನೇಪಾಳಿ ಪ್ರಜೆಗಳು ರಾಜ್ಯಕ್ಕೆ ಬರುತ್ತಿರುವುದು ಪರಿಣಾಮ ಬೀರಿದೆ.

ಇದೀಗ ಗಡಿ ಮೂಲಕ ರಾಜ್ಯಕ್ಕೆ ಬರುತ್ತಿರುವವರಿಗೆ ಚೆಕ್ ಪೋಸ್ಟ್‌ ಬಳಿ ತ್ವರಿತಗತಿಯ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಈ ಪ್ರಕ್ರಿಯೆಯು ಮೂರರಿಂದ ನಾಲ್ಕು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ನಿತ್ಯ ಸುಮಾರು 300 - 350 ಜನರನ್ನು ಪರೀಕ್ಷಿಸಲಾಗುತ್ತಿದೆ. ನವೆಂಬರ್ 22 ರಿಂದ 26ರ ವರೆಗೆ 30 ನೇಪಾಳಿ ನಾಗರಿಕರ ವರದಿ ಪಾಸಿಟಿವ್​ ಬಂದಿದೆ ಎಂದು ವೈದ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಲಾಕ್​ಡೌನ್​ ಸಮಯದಲ್ಲಿ ಭಾರತೀಯ ವ್ಯಾಪಾರಿಗಳನ್ನು ನೇಪಾಳ ಆಡಳಿತವು ಸೂಕ್ತ ರೀತಿಯಲ್ಲಿ ಪರಿಗಣಿಸಿರಲಿಲ್ಲ. ಆದರೆ, ಭಾರತವು ನೇಪಾಳಿ ನಾಗರಿಕರಿಗೆ ಈಗ ಉಚಿತ ಪಾಸ್ ನೀಡುತ್ತಿದೆ ಎಂದು ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದರು. ಈ ಬಳಿಕ ರಾಜ್ಯಾಡಳಿತ ಎಚ್ಚೆತ್ತುಕೊಂಡಿದ್ದು, ರಾಜ್ಯದಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಈ ಕ್ರಮ ಕೈಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.