ETV Bharat / bharat

ಇನ್ನೆರಡು ದಿನ ಭಾರೀ ಮಳೆ ಹಿಮಪಾತ ಸಾಧ್ಯತೆ: ಕೇದಾರನಾಥ ಧಾಮ್​​ಕ್ಕೆ ತೆರಳದಂತೆ ಯಾತ್ರಾರ್ಥಿಗಳಿಗೆ ಸರ್ಕಾರದ ಸೂಚನೆ

ಕೇದಾರನಾಥ ಧಾಮ್​ದಲ್ಲಿ ಪ್ರತಿದಿನ ಸತತವಾಗಿ ಹಿಮಪಾತ ಆಗುತ್ತಿದೆ. ಕೇದಾರನಾಥ ಧಾಮ್​ದ ಜನರಿಗೆ ತುರ್ತು ಸಹಾಯಕ್ಕಾಗಿ 112 ಅನ್ನು ಡಯಲ್ ಮಾಡಿ ಎಂದು ಉತ್ತರಾಖಂಡ್ ಪೊಲೀಸ್ ಇಲಾಖೆ ಮನವಿ ಮಾಡಿದೆ.

author img

By

Published : May 2, 2023, 2:14 PM IST

Kedarnath Dham
ಕೇದಾರನಾಥ ಧಾಮ್​

ರುದ್ರಪ್ರಯಾಗ (ಉತ್ತರಾಖಂಡ): ಹಿಮಾಲಯದ ಪ್ರದೇಶದಲ್ಲಿ ಹಿಮಪಾತ ಹಾಗೂ ಮಳೆ ಅಧಿಕವಾಗಿ ಬೀಳುತ್ತಿದ್ದು, ಭಾರತೀಯ ಹವಾಮಾನ ಇಲಾಖೆಯು ಮುಂದಿನ 2-3 ದಿನಗಳವರೆಗೆ ಜನರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸಲಹೆ ನೀಡಿದೆ. ಇದೀಗ ಯಾತ್ರಾರ್ಥಿಗಳು ಕೇದಾರನಾಥ ಧಾಮಕ್ಕೆ ತೆರಳದಂತೆ ಜಿಲ್ಲಾಡಳಿತ ತಡೆಯೊಡ್ಡಿದೆ.

  • #WATCH | Due to bad weather conditions in Kedarnath, the registration for pilgrims has been stopped till May 3. People with heart problems or breathing problems need to be extra careful. Extra caution is necessary for coming to a height of 11,000 feet: Uttarakhand DGP Ashok Kumar pic.twitter.com/wcgPQIZmeU

    — ANI (@ANI) May 2, 2023 " class="align-text-top noRightClick twitterSection" data=" ">

ಕೇದಾರನಾಥ ಧಾಮ್‌ದಲ್ಲಿ ಹಿಮಪಾತದಿಂದಾಗಿ ಸಮಸ್ಯೆಗಳು ಹೆಚ್ಚಾಗತೊಡಗಿವೆ. ಇಂತಹ ಪರಿಸ್ಥಿತಿಯಲ್ಲಿ ಯಾತ್ರಾರ್ಥಿಗಳನ್ನು ತಡೆದು ಸುರಕ್ಷಿತ ಸ್ಥಳಗಳಲ್ಲಿ ತಂಗುವಂತೆ ಪೊಲೀಸರು ಹಾಗೂ ಜಿಲ್ಲಾಡಳಿತದಿಂದ ಮನವಿ ಮಾಡಲಾಗುತ್ತಿದೆ. ರುದ್ರಪ್ರಯಾಗ ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ಅವರು, ಹವಾಮಾನ ಸರಿ ಹೋಗುವರೆಗೂ ಕೇದಾರನಾಥ ಧಾಮಕ್ಕೆ ಭೇಟಿಗೆ ಬರುವ ಯಾತ್ರಾರ್ಥಿಗಳು ತಂಗುವ ಸ್ಥಳದಲ್ಲಿ ಇದ್ದು ಸುರಕ್ಷಿತವಾಗಿ ಪ್ರಯಾಣಿಸಬೇಕು ಎಂದು ಸೂಚಿಸಿದ್ದಾರೆ.

ಸೋನ್‌ಪ್ರಯಾಗದಿಂದ ಬೆಳಗ್ಗೆ 10.30 ರ ನಂತರ ಕೇದಾರನಾಥಕ್ಕೆ ಹೋಗಲು ಪ್ರಯಾಣಿಕರಿಗೆ ಅನುಮತಿ ನಿಷೇಧಿಸಲಾಗಿದೆ. ಎಲ್ಲ ಪ್ರಯಾಣಿಕರು ತಮ್ಮ ಸುರಕ್ಷತೆ ಹಿತದೃಷ್ಟಿಯಿಂದ ವಿಶೇಷ ಕಾಳಜಿ ವಹಿಸಬೇಕು. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕೇದಾರಘಾಟಿಯಲ್ಲಿ ಹವಾಮಾನವು ಪ್ರತಿಕೂಲವಾಗಿ ಉಳಿಯುವ ನಿರೀಕ್ಷೆಯಿದೆ. ಕೇದಾರಘಾಟಿಯಲ್ಲಿ ಮುಂದಿನ ಒಂದು ವಾರದವರೆಗೆ ಹವಾಮಾನವು ಕೆಟ್ಟದಾಗಿದೆ. ಹವಾಮಾನ ಇಲಾಖೆಯು ಎಚ್ಚರಿಕೆ ಮೇರೆಗೆ ರಾಜ್ಯ ಸರ್ಕಾರ ಕೇದಾರನಾಥ ಧಾಮಕ್ಕೆ ಭೇಟಿ ನೀಡುವ ನೋಂದಣಿಯನ್ನು ನಿಲ್ಲಿಸಿದೆ.

ಬಾಬಾ ಕೇದಾರನಾಥ ಧಾಮದಲ್ಲಿ ಮಳೆ ಮತ್ತು ಹಿಮಪಾತದಿಂದಾಗಿ ಚಳಿ ಹೆಚ್ಚಾಗಿದೆ. ಕೇದಾರನಾಥ ಧಾಮದಲ್ಲಿ ಸತತ ಎರಡು ವಾರಗಳ ಕಾಲ ನಿತ್ಯ ಮಳೆಯೊಂದಿಗೆ ಹಿಮಪಾತವಾಗುತ್ತಿದೆ. ಕೇದಾರನಾಥ ಧಾಮದಲ್ಲಿ ಯತ್ರಾರ್ಥಿಗಳು ಎಚ್ಚರವಾಗಿರುವಂತೆ. ತುರ್ತು ಸಹಾಯಕ್ಕಾಗಿ 112 ಅನ್ನು ಡಯಲ್ ಮಾಡಿ ಎಂದು ಉತ್ತರಾಖಂಡ್ ಪೊಲೀಸರು ಮನವಿ ಮಾಡಿದ್ದಾರೆ. ಕೇದಾರನಾಥ ಧಾಮದಲ್ಲಿ ಮಳೆ, ಹಿಮಪಾತದ ಬಳಿಕವೂ ಭಕ್ತರ ಉತ್ಸಾಹ ಕಡಿಮೆಯಾಗಿಲ್ಲ. ಭಕ್ತರು ಮಳೆಯಲ್ಲೇ ಛತ್ರಿಯೊಂದಿಗೆ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿರುವುದು ಕಂಡು ಬಂತು.

ಕಳೆದ ತಿಂಗಳು ಎಂದರೆ ಏಪ್ರಿಲ್​ 22ರಂದು ಗಂಗೋತ್ರಿ ಮತ್ತು ಯಮುನೋತ್ರಿ ಧಾಮದ ಬಾಗಿಲುಗಳನ್ನು ಯಾತ್ರಾರ್ಥಿಗಳಿಗೆ ತೆರೆಯಲಾಗಿತ್ತು. ಈ ಮೂಲಕ ಚಾರ್ಧಾಮ್ ಯಾತ್ರೆಗೆ ಅಧಿಕೃತ ಚಾಲನೆ ನೀಡಲಾಗಿತ್ತು. ಮತ್ತು ಕೇದಾರನಾಥ ಧಾಮ್ ಯಾತ್ರೆ ಏ. 25ರಿಂದ ಶುರುವಾಗಿತ್ತು. ಅದೇ ದಿನ ಹೆಲಿಕಾಪ್ಟರ್ ಸೇವೆಯನ್ನೂ ಆರಂಭಿಸಲಾಗಿತ್ತು. ಈ ಸೇವೆಗಳ ಬುಕ್ಕಿಂಗ್​​ಅನ್ನು ಏಪ್ರಿಲ್ 8ರಿಂದ ಐಆರ್​ಸಿಟಿಸಿ ಆರಂಬಿಸಲಾಗಿತ್ತು.

ಚಾರ್​ಧಾಮ್​ ಯಾತ್ರೆ ಹಿನ್ನೆಲೆಯಲ್ಲಿ ನಡಿಗೆಯ ಮಾರ್ಗದುದ್ದಕ್ಕೂ ಅನೇಕ ಕಡೆಗಳಲ್ಲಿ 15 ಅಡಿಗೂ ಹೆಚ್ಚು ಎತ್ತರದ ಹಿಮನದಿಗಳು ನಿರ್ಮಾಣವಾಗಿದ್ದವು. ಅವುಗಳೆಲ್ಲವನ್ನೂ ಕೊರೆದು ರಸ್ತೆಯನ್ನು ತೆರವುಗೊಳಿಸಿ ಯಾತ್ರಿಕರಿಗೆ ಜಿಲ್ಲಾಡಳಿತ ಸುಗಮಗೊಳಿಸಿತ್ತು. ಆದರೂ ಹವಾಮಾನದಲ್ಲಿ ಯಾವುದೇ ಸುಧಾರಣೆ ಆಗುತ್ತಿಲ್ಲ. ಈಗ ಹವಾಮಾನ ಇಲಾಖೆ ಇನ್ನೂ ಎರಡು ದಿನ ಮಳೆ ಬೀಳಲಿದೆ ಎಂದು ಮುನ್ಸೂಚನೆ ನೀಡಿದೆ. ಇದು ಯಾತ್ರಿಕರಿಗೆ ಸಂಕಷ್ಟವನ್ನು ತಂದೊಡ್ಡಿದೆ.

ಇದನ್ನೂಓದಿ:ವಿದ್ಯುತ್ ಉಳಿಸಲು ಸರ್ಕಾರಿ ಕಚೇರಿಗಳ ಸಮಯ ಬದಲಿಸಿದ ಪಂಜಾಬ್; 7.30ಕ್ಕೇ ಕಚೇರಿ ತಲುಪಿದ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.