ಲಖನೌ (ಉತ್ತರ ಪ್ರದೇಶ): ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನನ್ನು ತರಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. ಈ ವಿಚಾರವಾಗಿ ಗೃಹ ಸಚಿವಾಲಯದಿಂದ ಕಾನೂನು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚುನಾವಣಾ ಸಭೆಯಲ್ಲಿ ಈ ಕುರಿತು ಕಾನೂನು ತರುವ ಬಗ್ಗೆ ಮಾತನಾಡಿದ್ದರು. ಸರ್ಕಾರವು ಲವ್ ಜಿಹಾದ್ಗೆ ಅನುಮತಿ ನೀಡುವುದಿಲ್ಲ ಎಂದು ಒತ್ತಿ ಹೇಳಿದ್ದರು.
ಇನ್ನು ಲವ್ ಜಿಹಾದ್ ಪ್ರಕರಣಗಳ ಕಡಿವಾಣಕ್ಕೆ ಕಾಯ್ದೆ ರೂಪಿಸಲು ಮಧ್ಯಪ್ರದೇಶದ ಸರ್ಕಾರ ಇತ್ತೀಚೆಗೆ ತೀರ್ಮಾನಿಸಿತ್ತು. ಇದರ ಬೆನ್ನಲ್ಲೇ ಇದೀಗ ಯುಪಿ ಸರ್ಕಾರವು ಲವ್ ಜಿಹಾದ್ ವಿರುದ್ಧ ಕಾನೂನು ತರಲು ಮುಂದಾಗಿದೆ.