ETV Bharat / bharat

ಬಿಜೆಪಿ ಭದ್ರಕೋಟೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಯೋಗಿ ಆದಿತ್ಯನಾಥ್‌ಗೆ ಗೆಲುವು

ತಾವು ಸ್ಪರ್ಧಿಸಿರುವ ಚೊಚ್ಚಲ ವಿಧಾನಸಭೆ ಚುನಾವಣೆಯಲ್ಲೇ ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿದ್ದ ಭೀಮ್ ಆರ್ಮಿ ಪಕ್ಷದ ಚಂದ್ರಶೇಖರ್‌ ಆಜಾದ್‌ ಸೋಲು ಕಂಡಿದ್ದಾರೆ.

CM Yogi Wins Gorakhpur
CM Yogi Wins Gorakhpur
author img

By

Published : Mar 10, 2022, 5:15 PM IST

ಗೋರಖ್​ಪುರ್​(ಉತ್ತರ ಪ್ರದೇಶ): ಐದು ಸಲ ಲೋಕಸಭೆ ಸಂಸದರಾಗಿ ಗೋರಖ್​ಪುರ ಕ್ಷೇತ್ರ ಪ್ರತಿನಿಧಿಸಿರುವ ಯೋಗಿ ಆದಿತ್ಯನಾಥ್​ ಇದೇ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆ ಬಯಸಿ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರು. ಮೊದಲ ಸ್ಪರ್ಧೆಯಲ್ಲೇ ಉತ್ತರ ಪ್ರದೇಶ ಸಿಎಂ ಭಾರಿ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಗೋರಖ್​ಪುರ್ ನಗರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದ ಯೋಗಿ ಆದಿತ್ಯನಾಥ್​ ತಮ್ಮ ಎದುರಾಳಿಗಳ ವಿರುದ್ಧ 1,02,399 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಸಚಿವರ ಪುತ್ರನ ಕಾರು ಹರಿದು ಹಿಂಸಾಚಾರಕ್ಕೆ ಕಾರಣವಾದ ಲಖೀಂಪುರದಲ್ಲಿ ಎಲ್ಲ ಕ್ಷೇತ್ರ ಗೆದ್ದ ಬಿಜೆಪಿ!

ಗೋರಖ್​​ಪುರ ನಗರ ಕ್ಷೇತ್ರ ಬಿಜೆಪಿಯ ಭದ್ರಕೋಟೆ. 1967ರ ಬಳಿಕ ನಡೆದ ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ (ಆಗ ಭಾರತೀಯ ಜನಸಂಘ) ಸೋಲು ಕಂಡಿದ್ದೇ ಇಲ್ಲ. ಈ ಹಿಂದಿನ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿಯ (2002, 2007, 2012 ಮತ್ತು 2017) ರಾಧಾ ಮೋಹನ್​ ದಾಸ್​ ಅಗರ್ವಾಲ್​ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಈ ಬಾರಿ ಗೋರಖ್​​ಪುರದಲ್ಲಿ ಯೋಗಿ ಅವರನ್ನು ಕಣಕ್ಕಿಳಿಸುವ ಮೂಲಕ ಗೋರಖ್​ಪುರ-ಬಸ್ತಿ ವ್ಯಾಪ್ತಿಯ 41 ಕ್ಷೇತ್ರಗಳಲ್ಲೂ ವಿಜಯಪತಾಕೆ ಹಾರಿಸುವುದು ಬಿಜೆಪಿಯ ಉದ್ದೇಶವಾಗಿತ್ತು.

2017ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 41 ಸೀಟುಗಳ ಪೈಕಿ ಬಿಜೆಪಿ 38ರಲ್ಲಿ ಬಿಜೆಪಿ ಗೆಲುವು ಪಡೆದಿದೆ. ಗೋರಖ್​​ಪುರ ಜಿಲ್ಲೆಯ 9 ಕ್ಷೇತ್ರಗಳ ಪೈಕಿ 8ರಲ್ಲಿ ಬಿಜೆಪಿ ವಿಜಯ ಸಿಕ್ಕಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.