ಹೈದರಾಬಾದ್ : ಸ್ತನ ಕ್ಯಾನ್ಸರ್ ಭಾರತದಲ್ಲಿ ಮಹಿಳೆಯರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಕ್ಯಾನ್ಸರ್ ಆಗಿದೆ. ಜಾಗೃತಿ ಕೊರತೆ ಮತ್ತು ಸಂಘಟಿತ ಜನಸಂಖ್ಯೆ ಆಧಾರಿತ ಸ್ತನ ಕ್ಯಾನ್ಸರ್ ತಪಾಸಣೆಯ ಅನುಪಸ್ಥಿತಿಯಿಂದಾಗಿ ಇದನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಲಾಗುತ್ತಿಲ್ಲ.
ದೇಶದ ಅನೇಕ ಭಾಗಗಳಲ್ಲಿ ಸ್ತನ ಕ್ಯಾನ್ಸರ್ ವಿಷಯವನ್ನು ಬಹಿರಂಗವಾಗಿ ಚರ್ಚಿಸಲಾಗುತ್ತಿಲ್ಲ. ಸ್ತನ ಕ್ಯಾನ್ಸರ್‌ನ ಆರಂಭದಲ್ಲೇ ಪತ್ತೆಹಚ್ಚುವ ಮಹತ್ವದ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ, ಡಾ. ಉಷಾಲಕ್ಷ್ಮಿ ಮತ್ತು ಡಾ.ರಘುರಾಮ್ ಅವರು ಉಷಾಲಕ್ಷ್ಮಿ ಸ್ತನ ಕ್ಯಾನ್ಸರ್ ಪ್ರತಿಷ್ಠಾನವನ್ನು 2007ರಲ್ಲಿ ಸ್ಥಾಪಿಸಿದ್ದಾರೆ.
ಈ ಪ್ರತಷ್ಠಾನವು ಹೈದರಾಬಾದ್, ವಾರಂಗಲ್, ವಿಜಯವಾಡ ಮತ್ತು ವಿಶಾಖಪಟ್ಟಣಂನಲ್ಲಿ ಪಿಂಕ್ ರಿಬ್ಬನ್ ವಾಕ್ ನಡೆಸಿ, ಸ್ತನ ಕ್ಯಾನ್ಸರ್‌ನ ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವ ಕುರಿತು ಸಂದೇಶ ಸಾರಿದರು.
ಮ್ಯಾಮೋಗ್ರಫಿ ಸ್ಕ್ರೀನಿಂಗ್ ಮಾಡುವುದು ಭಾರತದ ಜನಸಂಖ್ಯೆಗೆ ಕಾರ್ಯಸಾಧ್ಯವಾದ ಆಯ್ಕೆಯಾಗಿಲ್ಲ ಮತ್ತು ಗ್ರಾಮೀಣ ಭಾರತದಲ್ಲಿ ಹಿಂದುಳಿದ ಮಹಿಳೆಯರು ಸಹಜವಾಗಿ ವೈದ್ಯರೊಂದಿಗೆ ಸ್ತನ ಆರೈಕೆಯ ಕುರಿತು ಚರ್ಚಿಸಲು ಹಿಂಜರಿಯುತ್ತಾರೆ.
ಸ್ತನ ಆರೋಗ್ಯದ ಕುರಿತಾದ ವಿಶ್ವದ ಮೊದಲ ಮೊಬೈಲ್ ಅಪ್ಲಿಕೇಶನ್‌ನ (ಎಬಿಸಿಯ ಬ್ರೀಸ್ಟ್ ಹೆಲ್ತ್) ಈ ಪ್ರತಿಷ್ಠಾನವು ಅಭಿವೃದ್ಧಿಪಡಿಸಿದ್ದು, ಸ್ತನ ಆರೋಗ್ಯದ ವಿವಿಧ ಅಂಶಗಳ ಬಗ್ಗೆ ರಾಷ್ಟ್ರದಾದ್ಯಂತದ ಜನರಿಗೆ ಸಲಹೆ, ಮಾರ್ಗದರ್ಶನ ಮತ್ತು ಶಿಕ್ಷಣ ನೀಡುವ ಉದ್ದೇಶದಿಂದ ಅವರಿಗೆ ಉತ್ತಮ ಮಾಹಿತಿ ನೀಡಲು ಹನ್ನೆರಡು ಭಾರತೀಯ ಭಾಷೆಗಳಲ್ಲಿ ತಯಾರಿಸಲಾಗುತ್ತಿದೆ.
ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಲು ಕೇವಲ ಮೂರು ಮಾರ್ಗಗಳಿವೆ :
- ಸರಿಯಾಗಿ ತಿನ್ನಿ ಸರಿಯಾಗಿ ವ್ಯಾಯಾಮ ಮಾಡಿ ಮತ್ತು ಆರೋಗ್ಯಕರ ಸಮತೋಲಿತ ಜೀವನವನ್ನು ನಡೆಸಿ.
- ಎಲ್ಲಾ ವಯಸ್ಸಿನ ಮಹಿಳೆಯರು ‘ಸ್ತನ ಜಾಗೃತಿ’ ಹೊಂದಿರಬೇಕು ಮತ್ತು ಯಾವುದೇ ಸ್ತನ ಆರೋಗ್ಯ ಸಮಸ್ಯೆಗಳನ್ನು ಗಮನಿಸಿದರೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು.
- 40 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಪ್ರತಿವರ್ಷ ಸ್ಕ್ರೀನಿಂಗ್ ಮ್ಯಾಮೊಗ್ರಾಮ್ ಮಾಡಸಬೇಕು.
ಹೆಚ್ಚಿನ ಮಾಹಿತಿಗೆ ಉಷಲಕ್ಷ್ಮಿ ಸ್ತನ ಕ್ಯಾನ್ಸರ್ ಪ್ರತಿಷ್ಠಾನದ ವೆಬ್ಸೈಟ್ಗೆ ಭೇಟಿ ನೀಡಬಹುದು:
www.ubf.org.in
www.breastcancerindia.org