ನವದೆಹಲಿ : ಕೇಂದ್ರ ನಾಗರಿಕ ಸೇವಾ ಆಯೋಗ (UPSC) 2021ರ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟಗೊಂಡಿದೆ. ಟಾಪ್ 10ರಲ್ಲಿ ಮೊದಲ ನಾಲ್ಕು ರ್‍ಯಾಂಕ್ ಮಹಿಳೆಯರ ಪಾಲಾಗಿವೆ. ಚಂಡೀಗಢನ ಗಾಮಿನಿ ಸಿಂಗ್ಲಾ 3ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ. ಇದೀಗ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಪಂಜಾಬ್‌ನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಗಾಮಿನಿ ಸಿಂಗ್ಲಾ ಮೂರನೇ ಸ್ಥಾನ ಪಡೆದುಕೊಳ್ಳುವ ಮೂಲಕ ಇತರೆ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಗಾಮಿನಿ ಸಿಂಗ್ಲಾ, ಮೊದಲ ಪ್ರಯತ್ನದಲ್ಲೇ ಪರೀಕ್ಷೆ ಪಾಸ್ ಮಾಡಿದ್ದಾರೆ. ಗಾಮಿನಿ ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದಳು ಎಂದು ಪ್ರೊಫೆಸರ್ ಸಂಜೀವ್ ಹೇಳಿಕೊಂಡಿದ್ದಾರೆ. ಆಕೆಯ ಸಾಧನೆಗೆ ನಮ್ಮೆಲ್ಲರಿಗೂ ತುಂಬಾ ಹೆಮ್ಮೆ ಇದೆ ಎಂದು ಪಿಇಎಸ್ ಚಂಡೀಗಢ ಕಾಲೇಜನ್ ಪ್ರಾದ್ಯಾಪಕರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: UPSCಯಲ್ಲಿ ಶೃತಿ ಶರ್ಮಾ ಟಾಪರ್..ಕರ್ನಾಟಕದ 25 ಅಭ್ಯರ್ಥಿಗಳು ಪಾಸ್.. ಅಭಿನಂದನೆ ಸಲ್ಲಿಸಿದ ನಮೋ
ಕರ್ನಾಟಕದಿಂದ ಯಾರೆಲ್ಲ ಪಾಸ್?: ಈ ಸಲದ ಮುಖ್ಯ ಪರೀಕ್ಷೆಯಲ್ಲಿ ಕರ್ನಾಟಕದ 25 ಅಭ್ಯರ್ಥಿಗಳು ಪಾಸ್ ಆಗಿದ್ದು, ಅದರಲ್ಲಿ ದಾವಣಗೆರೆಯ ಅವಿನಾಶ್ 31ನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಬೆನಕ ಪ್ರಸಾದ್ 92, ನಿಖಿಲ್ ಬಿ. ಪಾಟೀಲ್ 139, ವಿನಯ್ ಕುಮಾರ್ ಗಾಡಿಗೆ 151, ಚಿತ್ತರಂಜನ್ 155, ಕೆ. ಮನೋಜ್ ಕುಮಾರ್ 157, ಅಪೂರ್ವ ಬಸೂರ್ 191, ನಿತ್ಯಾ 207, ಮಂಜುನಾಥ್ 219, ರಾಜೇಶ್ ಪೊನ್ನಪ್ಪ 222, ಸಾಹಿತ್ಯ ಆಲದಕಟ್ಟಿ 150, ಕಲ್ಪಶ್ರೀ 291, ಅರುಣಾ 308, ದೀಪಕ್ ರಾಮಚಂದ್ರ ಶೇಠ್ 311ನೇ ರ್‍ಯಾಂಕ್, ಹರ್ಷವರ್ಧನ್ 318, ವಿನಯ್ ಕುಮಾರ್ 352, ಮೇಘನಾ 425, ಸವಿತಾ ಗೋಟ್ಯಾಲ್ 479, ಮೊಹಮ್ಮದ್ ಸಿದ್ದಿಕಿ ಷರೀಫ್ 516, ಚೇತನ್ ಕೆ. 532, ಎನ್.ಎಸ್ ಪ್ರಕಾಶ್ 568, ಪ್ರಶಾಂತ್ ಕುಮಾರ್ 641 ಹಾಗೂ ಸುಚಿನ್ ಕೆ.ವಿ 682ನೇ ರ್‍ಯಾಂಕ್ ಪಡೆದಿದ್ದಾರೆ.
ಅಂತಿಮ ಪರೀಕ್ಷೆಯಲ್ಲಿ ಪಾಸ್ ಆಗಿರುವ 685 ಅಭ್ಯರ್ಥಿಗಳ ಪೈಕಿ 244 ಸಾಮಾನ್ಯ ವರ್ಗ, 73 ಆರ್ಥಿಕವಾಗಿ ದುರ್ಬಲವಾಗಿರುವ ವರ್ಗ, 203 ಇತರೆ ಹಿಂದುಳಿದ ವರ್ಗ, 105 ಪರಿಶಿಷ್ಟ ಜಾತಿ ಮತ್ತು 60 ಪರಿಶಿಷ್ಟ ಪಂಗಡದಿಂದ ಆಯ್ಕೆಯಾಗಿದ್ದಾರೆಂದು ಆಯೋಗ ತಿಳಿಸಿದೆ. ಅಭ್ಯರ್ಥಿಗಳಿಗೆ ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಪಡೆದುಕೊಳ್ಳಲು 23385271/23381125 /23098543 ನಂಬರ್ಗೆ ಕರೆ ಮಾಡುವಂತೆ ತಿಳಿಸಿದೆ.