ETV Bharat / bharat

ರಾತ್ರಿ 8.45 ರಿಂದ 1.02 ರ ವರೆಗೆ ಸಂಭವಿಸಿದ ಚಂದ್ರಗ್ರಹಣ, ಗೋರಖ್​ಪುರ ತಾರಾಲಯದಲ್ಲಿ ಅದ್ಭತ ನೋಟ ಕಣ್ತುಂಬಿಸಿಕೊಂಡ ಜನ - ಪೆನಂಬ್ರಾಲ್ ಚಂದ್ರಗ್ರಹಣ

ಗೋರಖ್‌ಪುರದ ವೀರ್ ಬಹದ್ದೂರ್ ಸಿಂಗ್ ತಾರಾಲಯದಲ್ಲಿ ಖಗೋಳಶಾಸ್ತ್ರಜ್ಞ ಅಮರ್‌ಪಾಲ್ ಸಿಂಗ್ ನೇತೃತ್ವದಲ್ಲಿ ಜನರು ದೂರದರ್ಶಕದ ಮೂಲಕ ಪೆನಂಬ್ರಾಲ್ ಚಂದ್ರಗ್ರಹಣದ ವೀಕ್ಷಣೆ ಮಾಡಿದರು.

watched the lunar eclipse
ಚಂದ್ರಗ್ರಹಣ ವೀಕ್ಷಿಸಿದ ಜನರು
author img

By

Published : May 6, 2023, 11:34 AM IST

ಗೋರಖ್‌ಪುರ: ಮೇ 5ರಂದು ರಾತ್ರಿ ಸಂಭವಿಸಿದ ಪೆನಂಬ್ರಾಲ್ ಚಂದ್ರಗ್ರಹಣದ ವೇಳೆ ಶ್ವೇತವರ್ಣದಲ್ಲಿ ಹೊಳೆಯುತ್ತಿದ್ದ ಚಂದ್ರನ ಸುತ್ತ ಮೋಡ ಆವರಿಸಿತ್ತು. ಆದರೂ ಚಂದ್ರಗ್ರಹಣ ನೋಡಿದವರಲ್ಲಿ ಕುತೂಹಲ ಮೂಡಿಸಿದೆ. ಆದರೆ, ಚಂದ್ರಗ್ರಹಣ ಭಾರತದ ಮೇಲೆ ಯಾವುದೇ ವಿಶೇಷ ಪರಿಣಾಮ ಬೀರಲಿಲ್ಲ.

ಆದರೂ ಪೆನಂಬ್ರಾಲ್ ಚಂದ್ರಗ್ರಹಣದ ನೋಡಲು ಜನರು ಗೋರಖ್‌ಪುರದ ವೀರ್​​ಬಹದ್ದೂರ್ ಸಿಂಗ್ ತಾರಾಲಯಕ್ಕೆ ಬಂದರು. ಖಗೋಳಶಾಸ್ತ್ರಜ್ಞ ಅಮರ್‌ಪಾಲ್ ಸಿಂಗ್ ನೇತೃತ್ವದಲ್ಲಿ ಜನರು ದೂರದರ್ಶಕದ ಈ ಖಗೋಳ ಘಟನೆ ವೀಕ್ಷಿಸಿ ಆನಂದಿಸಿದರು. ವೀರ್ ಬಹದ್ದೂರ್ ಸಿಂಗ್ ತಾರಾಲಯದಲ್ಲಿ ಜನರ ಜತೆಗೆ ಪೆನಂಬ್ರಾಲ್ ಚಂದ್ರಗ್ರಹಣ ವೀಕ್ಷಿಸಿದರು.

2023 ಮೇ 5ರಂದು ಬುದ್ಧ ಪೂರ್ಣಿಮೆ ದಿನ ವರ್ಷದ ಎರಡನೇ ಗ್ರಹಣ ಮತ್ತು ಮೊದಲ ಚಂದ್ರಗ್ರಹಣವು ಇದ್ದಾಗಿದ್ದು, ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಹಾದುಹೋದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಇದರಿಂದ ಚಂದ್ರನು ಭೂಮಿಯ ನೆರಳಿನಲ್ಲಿ ಚಲಿಸುತ್ತಾನೆ.

ಈ ಸಮಯದಲ್ಲಿ ಮಂದ ಚಂದ್ರನ ಸೌಂದರ್ಯ ವೀಕ್ಷಿಸಿದೆವು. ಚಂದ್ರನ ಬೆಳಕಿನಲ್ಲಿ ಬರಿಗಣ್ಣಿನಿಂದ ನೋಡಿದಾಗ ಪೆನಂಬ್ರಾಲ್ ಚಂದ್ರಗ್ರಹಣದಲ್ಲಿ ಯಾವುದೇ ಗೋಚರ ವ್ಯತ್ಯಾಸವಿಲ್ಲ. ಈ ವಿದ್ಯಮಾನ ದಾಖಲಿಸಲು ವಿಜ್ಞಾನಿಗಳು ಫೋಟೋಮೆಟ್ರಿ ವಿಧಾನವನ್ನು ಬಳಸುತ್ತಾರೆ.

ಭಾರತದಲ್ಲಿ ಪೆನಂಬ್ರಾಲ್ ಚಂದ್ರಗ್ರಹಣವು ಮೇ 5 ರಂದು ರಾತ್ರಿ 8.45 ರಿಂದ 1.02 ರ ವರೆಗೆ ಗೋಚರಿಸಿತು. ಇದು ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ,ಪೂರ್ವ ಅಮೆರಿಕ, ಯುರೋಪ್ ಮತ್ತು ಏಷ್ಯಾದಾದ್ಯಂತ ಗೋಚರವಾಗಿದೆ. ಮುಂದಿನ ಸೂರ್ಯಗ್ರಹಣ ಅಕ್ಟೋಬರ್ 14 ರಂದು ಭಾಗಶಃ ಮತ್ತು ಚಂದ್ರಗ್ರಹಣ ಅಕ್ಟೋಬರ್ 29, 2023 ರಂದು ಇರುತ್ತದೆ ಎಂದು ಖಗೋಳಶಾಸ್ತ್ರಜ್ಞ ಅಮರ್​ ಪಾಲ್​ ಹೇಳಿದ್ದಾರೆ.

ಮುಂದಿನ ಪೆನಂಬ್ರಾಲ್ ಚಂದ್ರಗ್ರಹಣವು 24-25 ಮಾರ್ಚ್ 2024 ಮತ್ತು 20-21 ಫೆಬ್ರವರಿ 2027 ರಂದು ಸಂಭವಿಸುತ್ತದೆ. ವೀರ್ ಬಹದ್ದೂರ್ ಸಿಂಗ್ ತಾರಾಲಯವು ವಿಶೇಷ ಬೈನಾಕ್ಯುಲರ್‌ಗಳ ಮೂಲಕ ಜನರಿಗೆ ಪೆನಂಬ್ರಾಲ್ ಚಂದ್ರಗ್ರಹಣದ ಮಾಹಿತಿ ನೀಡಿದರು.

ಪೆನಂಬ್ರಾಲ್ ಚಂದ್ರಗ್ರಹಣ ನಿಮಗೆಷ್ಟು ಗೊತ್ತು: ಭೂಮಿಯ ಹೊರಗಿರುವ ನೆರಳು ಪೆನಂಬ್ರಾ ಚಂದ್ರನ ಮೇಲ್ಮೈಗೆ ಮಾತ್ರವೇ ಆವರಿಸಿದರೆ ಅದನ್ನು ಪೆನಂಬ್ರಾಲ್ ಚಂದ್ರಗ್ರಹಣ ಎನ್ನಲಾಗಿದೆ. ಗ್ರಹಣ ಸಂಭವಿಸುವ ಮೊದಲು, ಚಂದ್ರನು ಭೂಮಿಯ ಪೆನಂಬ್ರಾವನ್ನು ಪ್ರವೇಶಿಸುತ್ತಾನೆ. ಇದನ್ನು ಪೆನಂಬ್ರಲ್ ಎಂದು ಕರೆಯಲಾಗುತ್ತದೆ. ಬಳಿಕ ಚಂದ್ರನು ಭೂಮಿಯ ನಿಜವಾದ ನೆರಳಿಗೆ ಪ್ರವೇಶಿಸಿದ ಬಳಿಕ ಗ್ರಹಣ ಸಂಭವಿಸುತ್ತದೆ. ಈ ಕಾರಣದಿಂದ ಚಂದ್ರನ ನೆರಳು ಮಸುಕಾಗಿ ಕಾಣುತ್ತದೆ.
ಚಂದ್ರಗ್ರಹಣದಲ್ಲಿ ಭೂಮಿ ಸೂರ್ಯ ಮತ್ತು ಚಂದ್ರನ ನಡುವೆ ಬರುತ್ತದೆ. ಇದರ ಪರಿಣಾಮ ಹುಣ್ಣಿಮೆ ದಿನದಂದು ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಹೀಗಾಗಿ ಚಂದ್ರನ ಬೆಳಕು ದುರ್ಬಲವಾಗಿರುತ್ತದೆ. ಭೂಮಿಯ ವಾತಾವರಣದಿಂದ ಬೆಳಕಿನ ಚದುರುವಿಕೆ ಉಂಟಾಗಿ ಕೆಂಪು ಬಣ್ಣದ ಚಂದ್ರನು ಸಹ ಗೋಚರಿಸುತ್ತಾನೆ. ಸೂರ್ಯನು ಭೂಮಿಗಿಂತ 109 ಪಟ್ಟು ದೊಡ್ಡದ್ದು ಹಾಗೂ ದುಂಡಾಗಿರುತ್ತದೆ. ಆದ್ದರಿಂದ ಭೂಮಿಯ ನೆರಳು ಎರಡು ರೂಪವನ್ನು ರೂಪಿಸುತ್ತದೆ.

ಭೂಮಿಯ ನೆರಳು ಕೂಡ ಎರಡು ವಿಧ. ಮೊದಲ ಮುಖ್ಯ ನೆರಳು(ಅಂಬ್ರಾ) ಎರಡನೇ ಪೆನಂಬ್ರಾ ಅಥವಾ ನೆರಳು. ಭೂಮಿಯ ಮುಖ್ಯ ನೆರಳು ಕೋನ್​ ಆಕಾರದಡಿ ಡಾರ್ಕ್ ಪ್ರದೇಶವಾಗಿದೆ. ನೆರಳು ಅತ್ಯಂತ ಒಳಗಿನ ಮತ್ತು ದಪ್ಪವಾದ ಭಾಗವಾಗಿದೆ. ಅಲ್ಲಿ ಬೆಳಕಿನ ಮೂಲವು ಆ ದೇಹ ಅಥವಾ ವಸ್ತುವಿನಿಂದ ಸಂಪೂರ್ಣವಾಗಿ ನಿರ್ಬಂಧಿಸಲ್ಪಟ್ಟಿದೆ. ಚಂದ್ರನು ಈ ನೆರಳಿನೊಂದಿಗೆ ಸಂಪರ್ಕಕ್ಕೆ ಬಂದರೆ, ಭಾಗಶಃ ಅಥವಾ ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ ಎಂದು ಹೇಳಿದರು.

ಬೆಳಕಿನ ನೆರಳು ಹೊಂದಿರುವ ಪ್ರದೇಶವು ಪೆನಂಬ್ರಾ ಪ್ರದೇಶವಾಗಿದೆ. ಗ್ರಹಣದ ಸಮಯದಲ್ಲಿ, ಚಂದ್ರನು ಯಾವಾಗಲೂ ಪಶ್ಚಿಮದಿಂದ ಭೂಮಿಯ ನೆರಳನ್ನು (ಉಂಬ್ರಾ) ಪ್ರವೇಶಿಸುತ್ತಾನೆ. ಅದಕ್ಕಾಗಿ ಮೊದಲು ಗ್ರಹಣವು ಅದರ ಪೂರ್ವ ಭಾಗದಲ್ಲಿ ಸಂಭವಿಸುತ್ತದೆ.

ಈ ಗ್ರಹಣವು ಪೂರ್ವ ಭಾಗದಿಂದ ಹೊರಬರುತ್ತದೆ. ಪೆನಂಬ್ರಾಲ್ ಚಂದ್ರಗ್ರಹಣದಲ್ಲಿ, ಬರಿಗಣ್ಣಿನಿಂದ ಚಂದ್ರನ ಬೆಳಕಿನಲ್ಲಿ ಯಾವುದೇ ವ್ಯತ್ಯಾಸವು ಗೋಚರಿಸುವುದಿಲ್ಲ. ಈ ಘಟನೆಯನ್ನು ದಾಖಲಿಸಲು ವಿಜ್ಞಾನಿಗಳು ಫೋಟೊಮೆಟ್ರಿ ವಿಧಾನವನ್ನು ಬಳಸುತ್ತಾರೆ. ಬೆಳಕಿನ ಕಡಿತದ ಶೇಕಡಾವಾರು ಪ್ರಮಾಣವು ತುಂಬಾ ಕಡಿಮೆಯಿರುವುದರಿಂದ. ಆದ್ದರಿಂದಲೇ ಜನಸಾಮಾನ್ಯರು ಚಂದ್ರನ ಬೆಳಕಿನಲ್ಲಿ ಯಾವುದೇ ಬದಲಾವಣೆಯನ್ನು ಬರಿಗಣ್ಣಿನಿಂದ ನೋಡುವುದಿಲ್ಲ ಎಂದು ಮಾಹಿತಿ ನೀಡಿದರು.

ಇದನ್ನೂಓದಿ:ಹೆಚ್​ಡಿಕೆ, ನಿಖಿಲ್ ಪರ ಮಾಜಿ ಪ್ರಧಾನಿ ದೇವೇಗೌಡ ಮತಯಾಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.