ರಾಯ್ಬರೇಲಿ(ಉತ್ತರ ಪ್ರದೇಶ): ಆನ್ಲೈನ್ ಮೂಲಕ ಅನೇಕರು ಮೋಸ ಹೋಗಿರುವ ಘಟನೆ ಈಗಾಗಲೇ ನಡೆದು ಹೋಗಿದ್ದು, ಇದರ ಮಧ್ಯೆ ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬಳು 32 ಲಕ್ಷ ರೂ. ಕಳೆದುಕೊಂಡಿದ್ದಾಳೆ. ಇನ್ಸ್ಟಾಗ್ರಾಂನಲ್ಲಿ ಸ್ನೇಹಿತನಾಗಿದ್ದ ವ್ಯಕ್ತಿಯೊಬ್ಬನಿಂದ ಮಹಿಳೆಯೊಬ್ಬರು ಬರೋಬ್ಬರಿ 32 ಲಕ್ಷ ರೂ. ವಂಚನೆಗೊಳಗಾಗಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಸ್ನೇಹಿತನಾಗಿರುವ ವ್ಯಕ್ತಿ ತನ್ನನ್ನು ಯುನೈಟೆಡ್ ಕಿಂಗ್ಡಮ್ ನಿವಾಸಿ ಎಂದು ಗುರುತಿಸಿಕೊಂಡಿದ್ದಾನೆ. ಇದಾದ ಬಳಿಕ ಉಡುಗೊರೆ ಹಾಗೂ 45 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ನೀಡುವುದಾಗಿ ನಂಬಿಸಿ, ಮಹಿಳೆಗೆ 32 ಲಕ್ಷ ರೂ. ವಂಚನೆ ಮಾಡಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶದ ರಾಯಬರೇಲಿ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್ ಈ ಮಾಹಿತಿ ಹಂಚಿಕೊಂಡಿದ್ದು, ಇದೀಗ ಸೈಬರ್ ಸೆಲ್ನಿಂದ ಪ್ರಕರಣದ ತನಿಖೆ ನಡೆಯುತ್ತಿದ್ದು, ಅಪರಾಧಿಗಳ ಪತ್ತೆಗೋಸ್ಕರ ತಂಡ ರಚನೆ ಮಾಡಲಾಗಿದ್ದು, ಸಂತ್ರಸ್ತೆಯ ಹಣ ಮರಳಿ ತರುವ ಕೆಲಸ ನಡೆಯುತ್ತಿದೆ ಎಂದಿದ್ದಾರೆ.
ಇದನ್ನೂ ಓದಿರಿ: ಮರಳಿ ಗೂಡು ಸೇರಿದ Air India..18,000 ಕೋಟಿ ರೂಗೆ TATA ಗ್ರೂಪ್ ಪಾಲಾದ ಸಂಸ್ಥೆ
ಮೋಸ ಹೋಗಿದ್ದು ಹೇಗೆ?
ಮಹಿಳೆ ಸೆಪ್ಟೆಂಬರ್ ತಿಂಗಳಲ್ಲಿ ಇನ್ಸ್ಟಾಗ್ರಾಂ ಮೂಲಕ ವ್ಯಕ್ತಿಗೆ ಪರಿಚಯವಾಗಿದ್ದಾಳೆ. ಈ ವೇಳೆ, ತನ್ನನ್ನು ಯುಕೆ ನಿವಾಸಿ ಹ್ಯಾರಿ ಎಂದು ಗುರುತಿಸಿಕೊಂಡಿದ್ದಾನೆ. ಈ ವೇಳೆ ಫೋನ್ ನಂಬರ್ ವಿನಿಮಯವಾಗಿದ್ದು, ನಿರಂತರವಾಗಿ ಸಂಭಾಷಣೆ ಹಾಗೂ ಚಾಟ್ ಆರಂಭಗೊಂಡಿದೆ.
ಇತ್ತೀಚೆಗೆ, ಆಕೆಗೆ ಮಹಿಳೆಯೊಬ್ಬರಿಂದ ವ್ಯಾಟ್ಸ್ಆ್ಯಪ್ ಮೂಲಕ ಕರೆ ಬಂದಿದ್ದು, ಈ ವೇಳೆ ದೆಹಲಿಗೆ ಉಡುಗೊರೆ ಬಾಕ್ಸ್ ಹಾಗೂ 45 ಲಕ್ಷ ರೂ. ಮೊತ್ತದ ಯುಕೆ ಕರೆನ್ಸಿ ಬಂದಿದೆ ಎಂದು ತಿಳಿಸಿದ್ದಾನೆ. ಅದನ್ನ ಸಂಗ್ರಹ ಮಾಡಲು ಸಂಸ್ಕರಣಾ ಶುಲ್ಕ ಪಾವತಿ ಮಾಡುವಂತೆ ತಿಳಿಸಿದ್ದಾರೆ.
ಆನ್ಲೈನ್ ಮೂಲಕ ವಿವಿಧ ಕಂತುಗಳಲ್ಲಿ ಹಣ ಪಾವತಿ ಮಾಡುವಂತೆ ಕೇಳಿದ್ದಾರೆ. ಹೀಗಾಗಿ ಮಹಿಳೆ ಒಟ್ಟು 32 ಲಕ್ಷ ರೂ. ವರ್ಗಾವಣೆ ಮಾಡಿದ್ದಾಳೆ. ಇದಾದ ಬಳಿಕ ಇನ್ನೊಂದು ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹೀಗಾಗಿ ಯುಕೆಯಿಂದ ಬಂದಿರುವ ಉಡುಗೊರೆ ಮಾಹಿತಿ ಪಡೆದುಕೊಳ್ಳುವ ಉದ್ದೇಶದಿಂದ ದೆಹಲಿಗೆ ತಲುಪಿದ್ದಾನೆ.
ಈ ವೇಳೆ ತಾನು ಮೋಸ ಹೋಗಿರುವ ವಿಚಾರ ಗೊತ್ತಾಗಿದೆ. ತಕ್ಷಣವೇ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದಾಳೆ. ಉತ್ತರ ಪ್ರದೇಶದಲ್ಲಿ ಈಗಾಗಲೇ ಅನೇಕ ಆನ್ಲೈನ್ ವಂಚನೆಯ ಪ್ರಕರಣ ದಾಖಲಾಗಿದ್ದು, ಇಲ್ಲಿಯವರೆಗೆ ಪೊಲೀಸರು ಸುಮಾರು 2 ಕೋಟಿ ರೂ. ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಉತ್ತರ ಪ್ರದೇಶದಲ್ಲಿ 5 ಕೋಟಿ ರೂ. ವಂಚನೆಯಾಗಿರುವುದು ತಿಳಿದು ಬಂದಿದೆ.