ETV Bharat / bharat

ಎರಡು ಸರ್ಕಾರಿ ಕೆಲಸದಲ್ಲಿದ್ದ ವ್ಯಕ್ತಿ ಖತರ್ನಾಕ್ ಐಡಿಯಾ ಮಾಡಿ ಸಿಕ್ಕಿಬಿದ್ದ!

author img

By

Published : Jun 19, 2021, 11:32 AM IST

ತನ್ನ ಜಾಗಕ್ಕೆ ಬೇರೊಬ್ಬನನ್ನು ಸರ್ಕಾರಿ ಕೆಲಸಕ್ಕೆ 'ನೇಮಿಸಿ' ಶಾಲೆಯೊಂದರಲ್ಲಿ ಪಾಠ ಮಾಡಲು ತೆರಳಿದ್ದ ಕಾನ್ಸ್​ಟೇಬಲ್ ಗುಟ್ಟು ಬಯಲಾಗಿದೆ.

UP Police constable 'deputes' brother-in-law to do his duty, arrested
ಎರಡೂ ಸರ್ಕಾರಿ ಕೆಲಸದಲ್ಲಿದ್ದ ವ್ಯಕ್ತಿ ಖತರ್ನಾಕ್ ಐಡಿಯಾ ಮಾಡಿ ಸಿಕ್ಕಿಬಿದ್ದ..!

ಮೊರದಾಬಾದ್, ಉತ್ತರ ಪ್ರದೇಶ: ಕಾನ್ಸ್​ಟೇಬಲ್​ ಒಬ್ಬ ತನ್ನ ಸ್ಥಾನಕ್ಕೆ ಬೇರೊಬ್ಬನನ್ನು 'ನೇಮಿಸಿ', ಶಾಲೆಯೊಂದರಲ್ಲಿ ಪಾಠ ಮಾಡಲು ತೆರಳಿ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಉತ್ತರ ಪ್ರದೇಶದ ಮೊರದಾಬಾದ್​ನಲ್ಲಿ ನಡೆದಿದೆ.

ಮುಜಫ್ಫರ್ ನಗರ ಜಿಲ್ಲೆಯ ನಿವಾಸಿ ಅನಿಲ್ ಪೊಲೀಸ್ ಕಾನ್ಸ್​ಟೇಬಲ್ ಆಗಿ ಆಯ್ಕೆಯಾಗಿದ್ದು, ತನ್ನ ಸಂಬಂಧಿಯಾದ, ಶಿಕ್ಷಕ ವೃತ್ತಿಯಲ್ಲಿದ್ದ ಸುನಿಲ್​ನನ್ನು ತನ್ನ ಸ್ಥಾನದಲ್ಲಿ 'ನೇಮಿಸಿ' ತಾನು ಶಾಲೆಯೊಂದರಲ್ಲಿ ಪಾಠ ಮಾಡಲು ತೆರಳುತ್ತಿದ್ದ.

ಇದನ್ನೂ ಓದಿ; SSLC ಪರೀಕ್ಷೆ ಸರಳೀಕರಣ: ಎರಡೇ ದಿನದಲ್ಲಿ 6 ವಿಷಯಗಳಿಗೂ ಎಕ್ಸಾಂ!

ಇದೇ ರೀತಿ ಸುಮಾರು 5 ವರ್ಷಗಳ ಕಾಲ ನಡೆದಿದೆ. ಠಾಕೂರ್​ದ್ವಾರಾ ಪೊಲೀಸ್ ಸ್ಟೇಷನ್​ ಪೊಲೀಸ್ ರೆಸ್ಪಾನ್ಸ್ ವೆಹಿಕಲ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅನಿಲ್ ಗೈರಾಗಿದ್ದ ಬಗ್ಗೆ ದೂರೊಂದು ದಾಖಲಾದಾಗ ತನಿಖೆ ನಡೆಸಿದ ಪೊಲೀಸರಿಗೆ ಈ ವಿಚಾರ ತಿಳಿದಿದೆ ಎಂದು ಮೊರಾದಾಬಾದ್ ಪೊಲೀಸ್ ವರಿಷ್ಠಾಧಿಕಾರಿ ವಿದ್ಯಾಶಂಕರ್ ಮಿಶ್ರಾ ಹೇಳಿದ್ದಾರೆ.

ಸುನೀಲ್ ಕೂಡ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದಾನೆ. ಈಗ ಅನಿಲ್ ಸಿಕ್ಕಿಬಿದ್ದು, ವಿಚಾರಣೆ ಎದುರಿಸುತ್ತಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.