ETV Bharat / bharat

ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ: ಗರ್ಭಿಣಿ ಬಾಲಕಿಗೆ ಥಳಿಸಿ, ವೈದ್ಯರಿಂದ ಗರ್ಭಪಾತ - ಈಟಿವಿ ಭಾರತ ಕರ್ನಾಟಕ

ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಕಾಮುಕರು ಆಕೆಗೆ ಬಲವಂತದ ಗರ್ಭಪಾತ ಮಾಡಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

girl pregnant after gang rape
girl pregnant after gang rape
author img

By

Published : Aug 18, 2022, 3:53 PM IST

ಸಂತಕಬೀರ್ ನಗರ(ಉತ್ತರ ಪ್ರದೇಶ): ಇಡೀ ನಾಗರಿಕ ಸಮಾಜವೇ ನಾಚಿಕೆಪಡುವಂತಹ ಪ್ರಕರಣವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. 12 ವರ್ಷದ ಬಾಲೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ದುಷ್ಕರ್ಮಿಗಳು, ಆಕೆ ಗರ್ಭಿಣಿಯಾಗಿರುವುದು ಗೊತ್ತಾಗುತ್ತಿದ್ದಂತೆ ಥಳಿಸಿ ವೈದ್ಯರಿಂದ ಗರ್ಭಪಾತ ಮಾಡಿಸಿದ್ದಾರೆ. ಸಂತ ಕಬೀರ್​ ನಗರದ ಮಾಹುಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಾಲಕಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡ್ತಿದ್ದಾಳೆ. ಕಳೆದ ಕೆಲ ತಿಂಗಳ ಹಿಂದೆ ನಡೆದ ಘಟನೆ ಇದು. ಶಾಲೆಗೆ ರಜೆಯಿದ್ದ ಕಾರಣ ಮನೆಯಿಂದ ಹೊರಹೋಗಿದ್ದಾಗ ಗ್ರಾಮದ ನಿವಾಸಿಗಳಾದ ಮನೋಜ್ ಮತ್ತು ಗೋಪಾಲ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಕೊಲೆ ಬೆದರಿಕೆ ಹಾಕಿ ಮೇಲಿಂದ ಮೇಲೆ ದುಷ್ಕೃತ್ಯವೆಸಗಿದ್ದಾರೆ. ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಬಾಲಕಿ ಮನೆಯಲ್ಲಿ ವಿಷಯ ಹೇಳಲೇ ಇಲ್ಲ. ಈ ನಡುವೆ ಆಕೆ ಗರ್ಭಿಣಿಯಾಗಿದ್ದೂ ಮನೆಯವರಿಗೆ ಕೊನೆಗೂ ವಿಚಾರ ತಿಳಿಸಿದ್ದಾಳೆ.

ಇದನ್ನೂ ಓದಿ: ಕುಟುಂಬಸ್ಥರಿಂದ ಪ್ರಾಣ ಬೆದರಿಕೆ, ರಕ್ಷಣೆ ನೀಡುವಂತೆ ಪ್ರೇಮಿಗಳ ಮನವಿ: ವಿಡಿಯೋ ವೈರಲ್​

ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ದುಷ್ಕರ್ಮಿಗಳಿಗೆ ಸಂಗತಿ ಗೊತ್ತಾಗುತ್ತಿದ್ದಂತೆ ಬಲವಂತವಾಗಿ ಸ್ಥಳೀಯ ವೈದ್ಯರಿಂದ ಗರ್ಭಪಾತ ಮಾಡಿಸಿದ್ದಾರೆ.

ಕ್ರಮ ಕೈಗೊಳ್ಳದ ಪೊಲೀಸರು: ಸಂತ್ರಸ್ತೆಯ ತಂದೆ ಮಾಹುಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಆದರೆ, ಪೊಲೀಸರು ಆರಂಭದಲ್ಲಿ ಯಾವುದೇ ರೀತಿಯ ಕ್ರಮಕ್ಕೆ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಮಾಹುಲಿ ಎಸ್ಒ ರವೀಂದರ್ ಸಿಂಗ್​ ಮಾಹಿತಿ ಪಡೆದುಕೊಂಡು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆಂದು ವರದಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.