ETV Bharat / bharat

ದೆಹಲಿ UNLOCK : ಕೊರೊನಾ ಕಡಿವಾಣಕ್ಕೆ ಸಮ-ಬೆಸ ನಿಯಮ ಅಳವಡಿಕೆ

ಎಲ್ಲಾ ಖಾಸಗಿ ಕಚೇರಿಗಳಲ್ಲಿ ಶೇಕಡಾ 50 ರಷ್ಟು ಉದ್ಯೋಗಿಗಳ ಮಿತಿಯಲ್ಲಿ ಕಾರ್ಯ ನಿರ್ವಹಿಸಬಹುದು. ಮಾರುಕಟ್ಟೆ ಮತ್ತು ಶಾಪಿಂಗ್​​ ಮಾಲ್​​ಗಳನ್ನು ಸರಿ-ಬೆಸ ನಿಯಮದ ಆಧಾರದ ಮೇಲೆ ತೆರೆಯಲು ಅನುಮತಿಸಲಾಗಿದೆ ಎಂದು ಸಿಎಂ ಕೇಜ್ರಿವಾಲ್ ತಿಳಿಸಿದ್ದಾರೆ.

ದೆಹಲಿ UNLOCK
ದೆಹಲಿ UNLOCK
author img

By

Published : Jun 5, 2021, 3:44 PM IST

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ವಿಧಿಸಲಾಗಿದ್ದ ಲಾಕ್​ಡೌನ್​ ಅನ್ನು ಹಂತಹಂತವಾಗಿ ತೆರವುಗೊಳಿಸಲು ಕೇಜ್ರಿವಾಲ್ ಸರ್ಕಾರ ಮುಂದಾಗಿದೆ.

ಸರಿ-ಬೆಸ ನಿಯಮ ಜಾರಿ

ಈ ಕುರಿತು ಮಾಹಿತಿ ನೀಡಿರುವ ಸಿಎಂ, ಎಲ್ಲಾ ಖಾಸಗಿ ಕಚೇರಿಗಳಲ್ಲಿ ಶೇಕಡಾ 50 ರಷ್ಟು ಉದ್ಯೋಗಿಗಳ ಮಿತಿಯಲ್ಲಿ ಕಾರ್ಯ ನಿರ್ವಹಿಸಬಹುದು. ಮಾರುಕಟ್ಟೆ ಮತ್ತು ಶಾಪಿಂಗ್​​ ಮಾಲ್​​ಗಳನ್ನು ಸರಿ-ಬೆಸ ನಿಯಮದ ಆಧಾರದ ಮೇಲೆ ತೆರೆಯಲು ಅನುಮತಿಸಲಾಗಿದೆ ಎಂದರು.

ಈ ಹಿಂದೆಯೂ ದೆಹಲಿ ಸರ್ಕಾರ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸರಿ-ಬೆಸ ಜಾರಿಗೊಳಿಸಿತ್ತು. ಇದೇ ತಂತ್ರವನ್ನು ಕೋವಿಡ್ ನಿಯಂತ್ರಣಕ್ಕೂ ಬಳಸಿಕೊಳ್ಳಲಾಗಿದೆ.

ಇದೇ ಸಮ-ಬೆಸ ಮಾದರಿಯಲ್ಲಿ ಅಂಗಡಿಗಳನ್ನು ತೆರೆಯಲು ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆವರೆಗೆ ಅವಕಾಶವಿರುತ್ತದೆ. ಇ- ಕಾಮರ್ಸ್ ಪ್ಲಾಟ್​ಫಾರ್ಮ್​ಗಳ ಮೂಲಕ ಹೋಂ ಡೆಲಿವರಿಗೆ ಸಹ ಅವಕಾಶವಿದೆ.

ಮೆಟ್ರೋದಲ್ಲಿ ಶೇ 50 ರಷ್ಟು ಪ್ರಯಾಣಿಕರಿಗೆ ಅವಕಾಶ

ಸರ್ಕಾರಿ ಸೇವೆಗಳಿಗೂ ಈ ನಿಯಮ ವಿಸ್ತರಿಸಲಾಗಿದ್ದು, ಮೆಟ್ರೋ ರೈಲಿನಲ್ಲಿ ಶೇಕಡಾ 50 ರಷ್ಟು ಆಸನಗಳ ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಸಾಧ್ಯವಾದಷ್ಟು ಖಾಸಗಿ ನೌಕರರಿಗೆ ವರ್ಕ್​ ಫ್ರಂ ಹೋಂನಲ್ಲಿ ಕೆಲಸಕ್ಕೆ ಅನುಮತಿ ನೀಡಲಾಗಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಜೂ.14 ರವರೆಗೆ ಲಾಕ್​ಡೌನ್ ವಿಸ್ತರಣೆ : ಏನಿರುತ್ತೆ.. ಏನಿರಲ್ಲ..!

ಸರ್ಕಾರಿ ಕಚೇರಿಗಳಲ್ಲಿ ಎ ವರ್ಗದ ನೌಕರರು ಎಲ್ಲಾ ದಿನಗಳಲ್ಲಿ ಕೆಲಸ ಮಾಡಬಹುದು, ಆದರೆ, ಅವರ ಅಡಿಯಲ್ಲಿ ಬರುವ ಎಲ್ಲಾ ವರ್ಗಗಳಲ್ಲಿ ಶೇಕಡಾ 50 ರಷ್ಟು ನೌಕರರ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಬೇಕೆಂದು ಸಿಎಂ ಕೇಜ್ರಿವಾಲ್ ತಿಳಿಸಿದ್ದಾರೆ.

3 ನೇ ಅಲೆ ತಡೆಗೆ ಕ್ರಮ

ಕೋವಿಡ್ ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ. ಈಗಾಗಲೇ 34 ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಾಗಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲೂ ನಿಯಮ ಸಡಿಲಿಕೆ..!

ಉತ್ತರಪ್ರದೇಶದ ಬರೇಲಿ ಮತ್ತು ಬುಲಂದ್ ಶಹರ್​ ಜಿಲ್ಲೆಗಳಲ್ಲಿ ಲಾಕ್​ಡೌನ್ ಸಡಿಲಿಸಲಾಗಿದೆ. ಬೆಳಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ ಐದು ದಿನಗಳವರೆಗೆ ಎಲ್ಲಾ ಮಾರುಕಟ್ಟೆ, ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಎಂದಿನಂತೆ ನೈಟ್ ಕರ್ಫ್ಯೂ, ವೀಕೆಂಡ್​​​ ಕರ್ಫ್ಯೂ ಮುಂದುವರಿಯಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.