ETV Bharat / bharat

ತಪ್ಪದಿರಿ ಎಚ್ಚರ: ನಿಮಗೂ ವಂಚನೆ ಎಸಗಬಹುದು ನಕಲಿ ಫ್ರೆಂಡ್​ ರಿಕ್ವೆಸ್ಟ್​​​...!

ಇಂದಿನ ಯುವಕರು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಅಲ್ಲದೆ 5 ಸಾವಿರದಿಂದ 6 ಸಾವಿರದ ವರೆಗೂ ಗೆಳೆಯರ ಹೊಂದಿರುತ್ತಾರೆ. ಆದರೆ ಇವರಲ್ಲಿ ಬಹುಪಾಲು ಮಂದಿ ವೈಯಕ್ತಿಕವಾಗಿ ಅವರೆಲ್ಲಾ ಯಾರೆಂಬುದೆ ತಿಳಿದಿರುವುದಿಲ್ಲ. ಈ ಸದಸ್ಯರಲ್ಲಿ ಯಾರಾದರು ಒಬ್ಬ ಇಂತಹ ಕೃತ್ಯ ಮಾಡುವ ಸಾಧ್ಯತೆಯನ್ನ ತಳ್ಳಿಹಾಕುವಂತಿಲ್ಲ.

unknown-friends-can-be-dangerous-in-social-media
ನಿಮಗೂ ವಂಚನೆ ಎಸಗಬಹುದು ಅನೌನ್ ಫ್ರೆಂಡ್​ ರಿಕ್ವೆಸ್ಟ್​​​...!
author img

By

Published : Jun 30, 2021, 8:59 PM IST

Updated : Jun 30, 2021, 9:16 PM IST

ರಾಯ್ಪುರ್ (ಚತ್ತೀಸ್​ಗಢ): ಇತ್ತೀಚಿಗೆ ವೇಗವಾಗಿ ಸೈಬರ್ ಪ್ರಕರಣಗಳು ಹೆಚ್ಚುತ್ತಿದ್ದು, ಹೈಟೆಕ್ ರೀತಿಯಲ್ಲಿ ವಂಚನೆ ಎಸಗುತ್ತಿದ್ದಾರೆ. ಎಟಿಎಂ ವಂಚನೆ, ಒಟಿಪಿ ವಂಚನೆ, ಜಾಹೀರಾತುಗಳ ವಂಚನೆ ಪ್ರಕರಣಗಳು ದಾಖಲಾಗುತ್ತಿವೆ. ಇದಕ್ಕೆಲ್ಲ ಮೂಲ ಎಂಬಂತೆ ನಕಲಿ ಖಾತೆಗಳು ಸೃಷ್ಟಿಯಾಗುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ನಕಲಿ ಖಾತೆಗಳ ಮೂಲಕವೇ ಬಹುಪಾಲು ವಂಚನೆ ನಡೆಯುತ್ತವೆ. ಹೀಗಾಗಿ ನಿಮಗೆ ಗೊತ್ತಿಲ್ಲದವರ ಬಳಿ ವ್ಯವಹರಿಸುವುದಕ್ಕಿಂತಲೂ ಅವರಿಂದ ದೂರ ಇರುವುದೇ ಒಳಿತು ಎಂದು ಸೈಬರ್ ತಜ್ಞೆ ಮೊನಾಲಿ ಗುಹೈನ್ ಹೇಳುತ್ತಾರೆ.

ಸಾಮಾಜಿಕ ಜಾಲತಾಣಗಳು ಉತ್ತಮ ಸ್ನೇಹಿತರ ಸಂಪಾದನೆಗಾಗಿ ರೂಪಿಸಲ್ಪಟ್ಟಿವೆ. ಆದರೆ, ಸೈಬರ್​ ಕಳ್ಳರು ಜನರ ವೈಯಕ್ತಿಕ ಡೇಟಾ, ಫೋಟೋಗಳು ಮತ್ತು ವಿಡಿಯೋಗಳನ್ನು ಕದಿಯಲು ಇದನ್ನ ಬಳಕೆ ಮಾಡುತ್ತಾರೆ. ಇಂದಿನ ಯುವಕರು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಅಲ್ಲದೆ 5 ಸಾವಿರದಿಂದ 6 ಸಾವಿರದವರೆಗೂ ಗೆಳೆಯರನ್ನು ಹೊಂದಿರುತ್ತಾರೆ. ಆದರೆ, ಇವರಲ್ಲಿ ಬಹುಪಾಲು ಮಂದಿಗೆ ವೈಯಕ್ತಿಕವಾಗಿ ಅವರೆಲ್ಲಾ ಯಾರೆಂಬುದೇ ತಿಳಿದಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಸದಸ್ಯರಲ್ಲಿ ಯಾರಾದರೂ ಒಬ್ಬ ಇಂತಹ ಕೃತ್ಯ ಮಾಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಸೈಬರ್ ತಜ್ಞೆ ಮೊನಾಲಿ ಗುಹೈನ್

ಇಂಥವರಲ್ಲಿ ವೈಯಕ್ತಿಕವಾಗಿ ನಿಮಗೆ ತಿಳಿಯದ ಅಥವಾ ಮುಖಪರಿಚಯವೇ ಇಲ್ಲದ ಯಾರೊಬ್ಬರನ್ನೂ ನಿಮ್ಮ ಖಾತೆಗೆ ಸೇರಿಸಿಕೊಳ್ಳಬೇಡಿ ಎಂದು ಸೈಬರ್ ತಜ್ಞೆ ಮೊನಾಲಿ ಗುಹೈನ್ ಹೇಳುತ್ತಾರೆ. ಒಂದು ವೇಳೆ ಸೇರಿಸಿದರೆ ಅಂಥವರ ಪ್ರೊಫೈಲ್​ ಒಮ್ಮೆ ಪರಿಶೀಲಿಸಿ ಎಂದಿದ್ದಾರೆ.

ಖಾತೆ ನಕಲಿ ಎಂದು ಕಂಡುಹಿಡಿಯುವುದು ಹೇಗೆ..?

  • ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಚಟುವಟಿಕೆ ಇರುವುದಿಲ್ಲ.
  • ಖಾತೆಯಲ್ಲಿ ಹೆಚ್ಚಿನ ಪೋಸ್ಟ್​ಗಳು ಮಾಡಲಾಗಿರುವುದಿಲ್ಲ.
  • ಅವರ ಖಾತೆಗೆ ಯಾವುದೇ ಉತ್ತರ ಹಾಗೂ ಕಮೆಂಟ್ ಮಾಡದಿರುವುದು ಸೂಕ್ತ
  • ಖಾತೆಯಲ್ಲಿರುವ ಮಾಹಿತಿ ನಕಲಿ ಎಂಬ ಸಂದೇಹ ಬಂದರೆ
  • ಖಾತೆಯ ಮೇಲೆ ವ್ಯಕ್ತಿಯ ಫೋಟೋ ಇಲ್ಲದಿದ್ದರೆ ಅಂತಹ ಪ್ರೊಫೈಲ್​ ಮೇಲೆ ನಿಗಾ ಇಡಿ

ನಕಲಿ ಖಾತೆ ಶಂಕೆ ಇದ್ದರೆ ತಕ್ಷಣ ಅನ್​ಫ್ರೆಂಡ್ ಮಾಡಿ

ಇಂತಹ ಅನುಮಾನ ಹುಟ್ಟಿಸುವ ಪ್ರೊಫೈಲ್​ಗಳು ನಿಮ್ಮ ಖಾತೆಯೊಳಗೂ ನುಸುಳಿರುವ ಶಂಕೆ ಇದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ. ಆದಷ್ಟು ಬೇಗ ಅಂತಹ ಖಾತೆಗಳನ್ನು ಅನ್​ಫ್ರೆಂಡ್ ಮಾಡುವುದು ಉತ್ತಮ. ಒಂದು ವೇಳೆ ಇಂತಹ ಶಂಕಿತ ಪ್ರೊಫೈಲ್​ಗಳಿದ್ದರೆ, ಅವು ನಿಧಾನವಾಗಿ ನಿಮ್ಮ ಮಾಹಿತಿ, ಫೋಟೋ ಬಳಕೆ ಮಾಡಬಹುದು. ಅಥವಾ ನಿಮ್ಮ ಅರಿವಿಲ್ಲದೆ ನಿಮ್ಮ ಅಕೌಂಟ್​​ ಬಳಕೆಯ ಮೇಲೆ ಅವರೇ ಹಿಡಿತ ಸಾಧಿಸುವ ಸಾಧ್ಯತೆಯೂ ಇರಲಿದೆ ಎನ್ನುತ್ತಾರೆ ಸೈಬರ್ ತಜ್ಞೆ ಮೊನಾಲಿ ಗುಹೈನ್.

ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಖಾಸಗಿ ಸೆಟ್ಟಿಂಗ್ ಮುಖ್ಯ

ಸೋಷಿಯಲ್ ಮೀಡಿಯಾದಲ್ಲಿ ಖಾಸಗಿತನವನ್ನು ನಾವು ಹಂಚಿಕೊಂಡಷ್ಟು ಸಮಸ್ಯೆ ಹೆಚ್ಚಾಗುತ್ತವೆ. ಹಾಗಾಗಿ ನಿಮ್ಮ ಖಾಸಗಿ ಮಾಹಿತಿಗಳು, ಕೌಟುಂಬಿಕ ವಿಚಾರಗಳು, ಕೆಲವು ಬಾರಿ ನಿಮ್ಮ ಮುಂದಿನ ನಡೆಯ ಬಗ್ಗೆಯೂ ಹಂಚಿಕೊಳ್ಳುವುದು ಅಪಾಯಕಾರಿಯೇ.

ಹೀಗಾಗಿ ಖಾಸಗಿತನದ ವಿಚಾರದಲ್ಲಿ ತುಸು ಮುನ್ನೆಚ್ಚರಿಕೆ ಅಗತ್ಯ

  • ನಿಮಗೆ ತಿಳಿದವರನ್ನು ಮಾತ್ರ ಖಾತೆಯಲ್ಲಿ ಸೇರಿಸಿ
  • ಕಡಿಮೆ ವೈಯಕ್ತಿಕ ವಿಚಾರ ಹಂಚಿಕೊಳ್ಳಿ
  • ಈ ತಾಣಗಳಲ್ಲಿ ನಿಮ್ಮ ಇ-ಮೇಲ್ ಐಡಿ ಆದಷ್ಟು ಗೌಪ್ಯವಾಗಿರಲಿ
  • ಸೋಷಿಯಲ್ ಮೀಡಿಯಾದಲ್ಲಿ ಬ್ಯಾಂಕ್ ಮತ್ತು ಮೊಬೈಲ್​ ನಂಬರ್​​ ಹಂಚಿಕೊಳ್ಳಬೇಡಿ

ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಮೋಸ ಹೆಚ್ಚುತ್ತಿದೆ

ವಾಟ್ಸಾಪ್ ಹ್ಯಾಕ್​: ಇತ್ತೀಚಿನ ದಿನಗಳಲ್ಲಿ ಸೈಬರ್ ಕಳ್ಳರು ಜನರ ವಾಟ್ಸಾಪ್ ಅನ್ನು ಹ್ಯಾಕ್ ಮಾಡುತ್ತಿದ್ದಾರೆ ಮತ್ತು ಅವರ ವೈಯಕ್ತಿಕ ಡೇಟಾವನ್ನು ಸಾರ್ವಜನಿಕಗೊಳಿಸುವುದಾಗಿ ಬೆದರಿಕೆ ಹಾಕುವ ಮೂಲಕ ಅವರನ್ನು ಮೋಸಕ್ಕೆ ಬಲಿಯಾಗಿಸುತ್ತಿದ್ದಾರೆ. ಅಥವಾ ಅವರಿಗೆ ಬ್ಲ್ಯಾಕ್ ಮೇಲ್ ಮಾಡುವ ಮೂಲಕ ಹಣ ಗಳಿಕೆಗೆ ಮುಂದಾಗುತ್ತಾರೆ.

ತಪ್ಪಿಸುವುದು ಹೇಗೆ?: ನಿಮ್ಮ ವೈಯಕ್ತಿಕ ವಿಷಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಇಡಬೇಡಿ. ಸಾಮಾಜಿಕ ಮಾಧ್ಯಮ ಖಾತೆಗಳನ್ನು ಯಾವಾಗಲೂ ವೈಯಕ್ತಿಕವಾಗಿಡಿ. ನಿಮ್ಮ ಖಾತೆಯ ವಿವರಗಳನ್ನು ಯಾವುದೇ ಅಪರಿಚಿತ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬೇಡಿ. ಯಾವುದೇ ಅಪರಿಚಿತ ವ್ಯಕ್ತಿಯೊಂದಿಗೆ ಮಾತನಾಡುವಾಗ ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ.

ಫೇಸ್‌ಬುಕ್ ಹ್ಯಾಕ್: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚಿನ ಪ್ರಕರಣಗಳು ಫೇಸ್‌ಬುಕ್ ಹ್ಯಾಕಿಂಗ್ ಅಥವಾ ನಕಲು ಮಾಡಿದ ಖಾತೆಯಿಂದ ಬರುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ವಂಚಕರು ನಿಮ್ಮ ಖಾತೆಯನ್ನು ಹ್ಯಾಕ್ ಮಾಡುತ್ತಾರೆ ಅಥವಾ ನಿಮ್ಮ ಖಾತೆಗೆ ಹೋಲುವ ಖಾತೆಯನ್ನು ರಚಿಸಿ ಮತ್ತು ನಿಮ್ಮ ಸ್ನೇಹಿತರಿಗೆ ಭಾವನಾತ್ಮಕ ಸಂದೇಶಗಳನ್ನು ಕಳುಹಿಸಿ ಮತ್ತು ಹಣಕ್ಕಾಗಿ ಬೇಡಿಕೆ ಇಡುತ್ತಾರೆ.

ಅದನ್ನು ತಪ್ಪಿಸುವುದು ಹೇಗೆ: ನಿಮ್ಮ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಅಥವಾ ಯಾರಾದರೂ ನಕಲಿ ಖಾತೆ ಸೃಷ್ಟಿಸಿದ್ದಾರೆಯೇ ಎಂಬುದನ್ನು ಖಚಿತ ಮಾಡಿಕೊಳ್ಳಿ. ಬಳಿಕ ಎಲ್ಲಾ ಸ್ನೇಹಿತರಿಗೆ ಕರೆ ಮಾಡಿ ಮತ್ತು ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಬಹಿರಂಗವಾಗಿ ತಿಳಿಸಿ. ಇದರೊಂದಿಗೆ, ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ನಿಮ್ಮ ವಾಟ್ಸಾಪ್ ಅಥವಾ ಇತರ ಖಾತೆಯಲ್ಲಿ ಪೋಸ್ಟ್ ಬರೆಯಿರಿ ಮತ್ತು ತಕ್ಷಣ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಎಫ್ಐಆರ್ ನೋಂದಾಯಿಸಿ.

Last Updated : Jun 30, 2021, 9:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.